Advertisement
ತಾಲೂಕಿನಾದ್ಯಂತ ಕಳೆದ ಮೂರು ತಿಂಗಳ ಅವಧಿಯಲ್ಲಿ ಭಾರೀ ಹಾನಿಯುಂಟಾಗಿದ್ದು, ಈ ಬಗ್ಗೆ ಸವಿಸ್ತಾರ ವರದಿ ಪಡೆದುಕೊಂಡು, ಎಲ್ಲ ಸಂತ್ರಸ್ತ ಫಲಾನುಭವಿಗಳಿಗೂ ಸಹಾಯಧನ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಶಾಸಕ ಲಾಲಾಜಿ ಆರ್ ಮೆಂಡನ್ ಭರವಸೆ ನೀಡಿದರು.
ಕಾಪು ತಾಲೂಕಿನಲ್ಲಿ ವಿವಿಧೆಡೆ ಹಾನಿ ಸಂಭವಿಸಿದ, ನೆರೆ ಪೀಡಿತ ಪ್ರದೆಶಗಳಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಹಲವು
ಮಂದಿ ಅಧಿಕಾರಿಗಳು ಸ್ವಯಂಪ್ರೇರಿತ ರಾಗಿ ಉತ್ತಮ ರೀತಿಯಲ್ಲಿ ಶ್ರಮ ವಹಿಸಿದ್ದಾರೆ. ಶಮದಾನದ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡ ನಾಗರಿಕರು, ಸಂಘ – ಸಂಸ್ಥೆಗಳ ಪ್ರತಿನಿಧಿಗಳು, ರಾಜಕೀಯ ಕಾರ್ಯಕರ್ತರು ಅಭಿನಂದನಾರ್ಹರು ಎಂದರು. 10.36 ಲ.ರೂ. ಪರಿಹಾರ ಧನ ವಿತರಣೆ
ಕಳೆದ ಎಪ್ರಿಲ್ ತಿಂಗಳಿನಿಂದ ಜುಲೈ ತಿಂಗಳವರೆಗೆ ಕಾಪು ತಾಲೂಕಿನ ವಿವಿಧೆಡೆ ಮಳೆ ಮತ್ತಿತರ ಪ್ರಾಕೃತಿಕ ವಿಕೋಪದ ಕಾರಣದಿಂದಾಗಿ 38.49 ಲ. ರೂ. ನಷ್ಟ ಅಂದಾಜಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ವರದಿ ನೀಡಲಾಗಿದ್ದು, ಅಲ್ಲಿಂದ ತಾಂತ್ರಿಕ ಅಭಿಪ್ರಾಯ ದೊರಕಿದ ಬಳಿಕ ಪ್ರಾಕೃತಿಕ ವಿಕೋಪ ನಿಧಿಯಡಿ ಸರಕಾರೀ ಮಾರ್ಗದರ್ಶನವನ್ನು ಪಾಲನೆ ಮಾಡಿ, ಪರಿಹಾರ ಧನ ವಿತರಿಸಲಾಗುತ್ತಿದ್ದು, ಈವರೆಗೆ 10.36 ಲ.ರೂ. ಪರಿಹಾರ ವಿತರಿಸಲಾಗಿದೆ ಎಂದು ಕಾಪು ಕಂದಾಯ ನಿರೀಕ್ಷಕ ರವಿಶಂಕರ್ ಕೆ. ತಿಳಿಸಿದ್ದಾರೆ.
Related Articles
Advertisement