Advertisement

ಕತ್ರಿನಾ ಕೈಫ್ ಗಾಗಿ ಲಕ್ಷ ರೂ. ಮೌಲ್ಯದ ಮದರಂಗಿ ತಯಾರಿ

06:06 PM Nov 26, 2021 | Team Udayavani |

ನವದೆಹಲಿ: ಮುಂದಿನ ತಿಂಗಳು ಜೈಪುರದಲ್ಲಿ ಹಸೆಮಣೆ ಏರಲಿರುವ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕಿ ಕುಶಾಲ್‌ ಮದುವೆ ಸಿದ್ಧತೆಗಳಲ್ಲಿ ತೊಡಗಿದ್ದಾರೆ.

Advertisement

ಈಗಾಗಲೇ ಉಡುಗೆಯನ್ನೆಲ್ಲ ಸೆಟ್‌ ಮಾಡಿಕೊಂಡಿರುವ ಕತ್ರಿನಾರಿಗಾಗಿ ಜೋಧ್‌ಪುರದ ಪಾಲಿ ಜಿಲ್ಲೆಯ ವಿಶೇಷ ಮೆಹಂದಿ ಸಿದ್ಧವಾಗುತ್ತಿದೆ.

ಯಾವುದೇ ರಾಸಾಯನಿಕ ಬಳಸದೆ ಮೆಹಂದಿ ತಯಾರಿಸಲಾಗುತ್ತಿದ್ದು, ಅದರ ತಯಾರಕ ವೆಚ್ಚವೇ 50 ಸಾವಿರ ರೂ.ಗಳಿಂದ 1 ಲಕ್ಷ ರೂ. ವರೆಗೆ ಆಗುತ್ತದೆಯಂತೆ.

ಇದನ್ನೂ ಓದಿ:ಹೂಡಿಕೆದಾರರಿಗೆ ಭಾರೀ ನಷ್ಟ: ಪಾತಾಳಕ್ಕೆ ಕುಸಿದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ

ಮದುವೆ ಕಾರ್ಯಕ್ರಮಗಳಿಗೂ ಮೊದಲು ಮುಂಬೈನಲ್ಲಿ ರಿಜಿಸ್ಟರ್‌ ಮದುವೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next