Advertisement

ಕಟೀಲು ಭ್ರಾಮರಿಗೆ ಇಂದಿನಿಂದ ಬ್ರಹ್ಮಕಲಶೋತ್ಸವ ಸಂಭ್ರಮ

08:01 PM Jan 31, 2020 | mahesh |

ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜ. 22ರಿಂದ ಫೆ. 3ರ ವರೆಗೆ ಜರಗುವ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲ, ಕೋಟಿ ಜಪಯಜ್ಞ, ಶತಚಂಡಿಕಾ ಯಾಗಕ್ಕೆ ಕ್ಷೇತ್ರವೂ ಮಹಾಪರ್ವಕ್ಕೆ ಪೂರ್ಣವಾಗಿ ಸಿದ್ಧಗೊಂಡಿದೆ.

Advertisement

ಬ್ರಹ್ಮಕಲಶೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ದಿನವಿಡೀ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಪೂರ್ವಭಾವಿಯಾಗಿ ವಿವಿಧ ಅಭಿವೃದ್ಧಿ ಕೆಲಸ ಕಾರ್ಯಗಳಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಎಲ್ಲ ಕೆಲಸ ಕಾರ್ಯಗಳು ಈಗಾಗಲೇ ಅಂತಿಮ ಹಂತದಲ್ಲಿವೆ. ಶೃಂಗಾರಗೊಂಡ ಕಟೀಲು ಗಿಡಿಗೆರೆಯಿಂದ ಕಟೀಲು ಸೇತುವೆಯ ತನಕ ರಥಬೀದಿಯನ್ನು ವಿದ್ಯುತ್‌ ದೀಪಾಲಂಕಾರದಿಂದ ಶೃಂಗಾರಗೊಳಿಸಲಾಗಿದೆ. ರಸ್ತೆ ಇಕ್ಕೆಲಗಳಲ್ಲಿ ಪತಾಕೆಗಳು ರಾರಾಜಿಸುತ್ತಿವೆ. ಅಲ್ಲಲ್ಲಿ ಸ್ವಾಗತ ಗೋಪುರಗಳನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಆವರಣ ರಥಬೀದಿಯ ಇಕ್ಕೆಲಗಳಲ್ಲಿ ಅಂಗಡಿ ವಸತಿಗೃಹ, ಹಳೆ ಶಾಲೆ ಕಟ್ಟಡ, ಸರಸ್ವತೀ ಸದನ ತೆರವುಗೊಂಡಿದೆ.

ರಥಬೀದಿಯಲ್ಲಿ ನೂತನ ರಥದ ಕೊಠಡಿಯನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಮೇಲ್ಛಾವಣಿಗೆ ಆಕರ್ಷಕ ಪಬ್‌ ಶೀಟ್‌ ಆಳವಡಿಕೆ ಹಾಗೂ ಸುತ್ತು ಪೌಳಿಯಲ್ಲಿ ಮರದ ಕೆತ್ತನೆಯ ಕಾಷ್ಠಶಿಲ್ಪ, ದೇವರ ಗರ್ಭಗುಡಿಯ ಮುಂಭಾಗದಲ್ಲಿ ಬೆಳ್ಳಿಯ ಹೊದಿಕೆಯ ಮಂಟಪ ಸಿದ್ಧಗೊಂಡಿದೆ. ಬಸ್‌ ನಿಲ್ದಾಣದ ಪಕ್ಕದಲ್ಲಿ ನೂತನ ಶೌಚಾಲಯ ಹಾಗೂ ಬಸ್‌ ನಿಲ್ದಾಣದಲ್ಲಿ ಆಕರ್ಷಕ ಸಭಾ ಮಂಟಪ ಸಿತ್ಲಬೈಲಿನಲ್ಲಿ ಬೃಹತ್‌ ಭೋಜನ ಶಾಲೆ, ಪಕ್ಕದಲ್ಲಿ ಪಾಕಶಾಲೆ ನಿರ್ಮಾಣವಾಗಿದೆ.

ರಸ್ತೆ ವಿಸ್ತರಣೆ
ಕಟೀಲು ಸಂಪರ್ಕಿಸುವ ಉಲ್ಲಂಜೆ- ಕಟೀಲು-ಕಿನ್ನಿಗೋಳಿ ರಸ್ತೆಯನ್ನು ವಿಸ್ತರಿಸಲಾಗಿದೆ. ಮೂರು ಕಾವೇರಿಯಿಂದ ಕಟೀಲು ರಸ್ತೆಯ ಅಭಿವೃದ್ಧಿ ಕೆಲಸ, ಬಜಪೆಯಿಂದ ಕಟೀಲು ಸಂಪರ್ಕ ರಸ್ತೆ, ಗಿಡಿಗೆರೆ ಬೈಪಾಸ್‌ ರಸ್ತೆ ಅಗಲಗೊಂಡಿದೆ.

ಕಟೀಲಿನ ಬಸ್‌ನಿಲ್ದಾಣ ಸ್ಥಳಾಂತರ
ಕಿನ್ನಿಗೋಳಿ ಕಡೆಯಿಂದ ಬರುವವರಿಗೆ ಗಿಡಿಗೆರೆ ದೈವಸ್ಥಾನದ ಸಮೀಪ ಬಸ್‌ ನಿಲ್ದಾಣ ನಿರ್ಮಾಣವಾಗಿದೆ. ಬಜಪೆಯಿಂದ ಬರುವವರಿಗೆ ಕಟೀಲು ಸೇತುವೆಯ ಬಳಿ ಪೆಟ್ರೋಲ್‌ ಪಂಪ್‌ ಬಳಿ, ಬಸ್‌ ನಿಲ್ದಾಣ ನಿರ್ಮಾಣವಾಗಿದೆ.

Advertisement

8,000 ಸ್ವಯಂಸೇವಕರು
ಬ್ರಹ್ಮಕಲಶೋತ್ಸವ ಧಾರ್ಮಿಕ, ಸಾಂಸ್ಕೃತಿಕ ಮತ್ತು ವಿವಿಧ ಕಾರ್ಯಕ್ರಮಗಳ ಯಸ್ಸಿಗಾಗಿ ಸುಮಾರು 8,000 ಸ್ವಯಂಸೇವಕ‌ರು ಕಾರ್ಯನಿರ್ವಹಿಸಲಿದ್ದಾರೆ.

ಚಿನ್ನದ ಲೇಪನದ ಮಂಟಪ
ಶ್ರೀ ದೇವರಿಗೆ ಚಿನ್ನದ ಲೇಪನದ ಮಂಟಪ ತಯಾರುಗೊಂಡಿದೆ. ಹೊರಭಾಗದಲ್ಲಿ ನಂದಿನಿ ನದಿಯ ಸೇತುವೆಗೆ ಸ್ಟೀಲ್‌ ಸೇತುವೆ ನಿರ್ಮಾಣ, ಕಟೀಲಿನ ಅನೆ ಮಹಾಲಕ್ಷ್ಮೀ ಗೆ ಹೊಸ ಆನೆಲಾಯ, ನೂತನ ಪಾಕ ಶಾಲೆ, ಅಲ್ಲಿನ ಆವರಣಗಲ್ಲಿ ಹೊಸ ಕೈತೋಟ, ಡಾಮರು ರಸ್ತೆಗೆ ಇಂಟರ್‌ಲಾಕ್‌ ಅಳವಡಿಕೆ, ಕಟೀಲು ತಾಯಿಯ ಮೂಲ ಕುದ್ರುವಿನಲ್ಲಿ ನಾಗಮಂಡಲದ ಚಪ್ಪರ, ಕೋಟಿ ಜಪಯಜ್ಞ, ಶತ ಚಂಡಿಕಾಯಾಗಕ್ಕೆ ಯಜ್ಞ ಮಂಟಪವು ನಿರ್ಮಾಣವಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮ
ಜ. 22ರಂದು ನಾದಸ್ವರ ವಿ| ಅಣ್ಣಿ ದೇವಾಡಿಗ ಮತ್ತು ಬಳಗದವರಿಂದ, ತಾಳಮದ್ದಳೆ ಉತ್ತರ – ಗೋಗ್ರಹಣ, ಕಾಂಚನ ಸಹೋದರಿಯರಿಂದ ಪುರಂದರದಾಸರ ಹಾಡುಗಳು, ವಯಲಿನ್‌ ಸೋಲೊ ಪದ್ಮಭೂಷಣ ಡಾ| ಎಲ್‌. ಸುಬ್ರಹ್ಮಣ್ಯಂ ಮತ್ತು ಬಳಗದಿಂದ ನೃತ್ಯ ವೈವಿಧ್ಯ ಬಹುರಂಗ್‌ ನಿರುಪಮಾ – ರಾಜೇಂದ್ರರಿಂದ ನಡೆಯಲಿದೆ.

ಇಂದಿನ ಕಾರ್ಯಕ್ರಮಗಳು
ಬೆಳಗ್ಗೆ 8ರಿಂದ ಋತ್ವಿಜರ ಸ್ವಾಗತ, ಸಾಮೂಹಿಕಪ್ರಾರ್ಥನೆ, ತೋರಣ ಮುಹೂರ್ತ, ವೈದಿಕ ಉಗ್ರಾಣ ಮುಹೂರ್ತ, ಹೊರೆಕಾಣಿಕೆ ಉಗ್ರಾಣ ಮುಹೂರ್ತ, ಪುಣ್ಯಾಹವಾಚನ, ನಾಂದೀ, ಋತ್ವಿಗÌರಣ, ಅರಣಿಮಥನ, ಬ್ರಹ್ಮಕೂರ್ಚ ಹೋಮ, ಕಂಕಣಬಂಧ, ಅಥರ್ವಶೀರ್ಷಗಣಯಾಗ, ಪುರಾಣಾದಿಗಳ ಪಾರಾಯಣ ಪ್ರಾರಂಭ, ಧ್ವಜವಾಹನ ಅಗುತ್ತಾರಣೆ, ಸಂಜೆ 5ರಿಂದ ಪುಣ್ಯಾಹವಾಚನ, ಸಪ್ತಶುದ್ಧಿ, ಗೋಪೂಜೆ, ಪ್ರಾಸಾದಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತುಹೋಮ, ವಾಸ್ತುಬಲಿ, ಪ್ರಾಕಾರಬಲಿ, ಅಸ್ತ್ರಕಲಶ ಸ್ಥಾಪನೆ ಭ್ರಾಮರೀವನದಲ್ಲಿ ತೋರಣ ಮುಹೂರ್ತ, ಸಾಯಂ, ವಾಸುಪೂಜೆ, ವಾಸ್ತು ಹೋಮ, ವಾಸ್ತುಬಲಿ, ಮಂಟಪ ಸಂಸ್ಕಾರ, ಸಪ್ತಶುದ್ಧಿ, ಕೋಟಿಜಪಯಜ್ಞ.

Advertisement

Udayavani is now on Telegram. Click here to join our channel and stay updated with the latest news.

Next