Advertisement

ಪೇಟೆಯೊಳಗಿನ ಬಸ್‌ ನಿಲ್ದಾಣ ಪ್ರದೇಶ ಇದೀಗ ನೋ ಪಾರ್ಕಿಂಗ್‌

01:41 PM Sep 20, 2022 | Team Udayavani |

ಕಟಪಾಡಿ: ಇಲ್ಲಿನ ಪೇಟೆಯೊಳಗಿನ ಬಸ್‌ ನಿಲ್ದಾಣದ ಪ್ರದೇಶದಲ್ಲಿ ವಾಹನಗಳ ಪಾರ್ಕಿಂಗ್‌ ನಿಷೇಧಿಸಿ ಕಟಪಾಡಿ ಗ್ರಾ.ಪಂ. ಮತ್ತು ಪೊಲೀಸ್‌ ಹೊರ ಠಾಣೆಯು ವಿಶೇಷ ಸೂಚನೆಯ ಬ್ಯಾನರ್‌ ಅನ್ನು ಅಳವಡಿಸಿದ್ದು ಬ್ಯಾರಿಕೇಡ್‌ ಕೂಡ ಇರಿಸಲಾಗಿದೆ.

Advertisement

ಆ ಮೂಲಕ ಸಂಬಂಧಪಟ್ಟ ಇಲಾ ಖಾಧಿಕಾರಿಗಳ ಇಚ್ಛಾಶಕ್ತಿಯು ಪರಿಣಾಮ ಕಾರಿಯಾಗಿದ್ದು, ಕಟಪಾಡಿಯ ಬಸ್‌ ತಂಗುದಾಣದತ್ತ ಬಸ್‌ಗಳು ಬರುವುದು ಮಾತ್ರವೇ ಬಾಕಿ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಪೇಟೆಯೊಳಗಿನ ಬಸ್‌ನಿಲ್ದಾಣಕ್ಕೆ ಬಸ್‌ಬಾರದೆ ಬಸ್‌ ತಂಗುದಾಣವು ಅನಧಿಕೃತ ಪಾರ್ಕಿಂಗ್‌ ಪ್ರದೇಶವಾಗಿ ಬೆಳೆಯುತ್ತಿದ್ದು ಕಟಪಾಡಿ ಪೇಟೆಯೊಳಗೆ ಸಮಸ್ಯೆ ಬಿಗಡಾಯಿಸುತ್ತಿರುವ ಬಗ್ಗೆ ನಿತ್ಯ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿ ದಾಟುವ ಮತ್ತು ಗ್ರಾಹಕರು ಪಾರ್ಕಿಂಗ್‌ ಮಾಡಿದ ವಾಹನಗಳ ಎಡೆಯಲ್ಲಿ ನುಸುಳಿಕೊಂಡು ಹೋಗಿ ಖರೀದಿಸುವ ಸಮಸ್ಯೆಯನ್ನು ಅನುಭವಿಸುವ, ಹಾಗೂ ರಾ.ಹೆ. 66 ವಾಹನ ದಟ್ಟಣೆಯ ಅಪಾಯಕಾರಿ ಜಂಕ್ಷನ್‌ ಆಗಿ ಗುರುತಿಸಿಕೊಂಡಿದ್ದು, ವಯೋವೃದ್ಧರು, ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು, ಅಂಗವಿಕಲರು, ಬಸ್‌ಗಾಗಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಯಾಸದಿಂದ ದಾಟುವಂತಹ ಅನಿವಾರ್ಯ ಪರಿಸ್ಥಿತಿ ಇದೆ.

ಪೇಟೆಯೊಳಕ್ಕೆ ಎಲ್ಲ ಬಸ್‌ಗಳು ಬಾರದೇ ಪ್ರಯಾಣಿಕರು ಸಮಸ್ಯೆಯನ್ನು ಎದುರಿಸುವ ಬಗ್ಗೆ ನಾಗರೀಕರು ಪರಿತಪಿಸುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶವನ್ನು, ಗ್ರಾಮ ಸಭೆಯ ಗ್ರಾಮಸ್ಥರ ಬೇಡಿಕೆಯನ್ನು ಆಧರಿಸಿ ಉದಯವಾಣಿ ಸುದಿನ ವರದಿಯನ್ನು ಪ್ರಕಟಿಸಿತ್ತು. ಇದೀಗ ಕಟಪಾಡಿ ಗ್ರಾ.ಪಂ. ಬಸ್‌ ಪೇಟೆಯೊಳಗಿನ ಬಸ್‌ ತಂಗುದಾಣಕ್ಕೆ ಬರಲು ಸಿದ್ಧತೆ ನಡೆಸಿದ್ದು, ಸಂಬಂಧಪಟ್ಟ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಪಂದಿಸಿ ನಾಗರೀಕರ ಬೇಡಿಕೆಯನ್ನು ಈಡೇರಿಸಿ ಸುರಕ್ಷತೆ, ಸುವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ.

ಎಲ್ಲರ ಸಹಕಾರ ಅಗತ್ಯ: ಬದ್ಧತೆಯಿಂದ ಮುಂದಡಿ ಇರಿಸಲಾಗಿದೆ. ಕಟಪಾಡಿ ಪೇಟೆಯೊಳಗಿನ ಬಸ್‌ ನಿಲ್ದಾಣಕ್ಕೆ ಸಿಟಿ, ಸರ್ವಿಸ್‌ ಬಸ್‌ ಬಂದು ಹಳೆ ಎಂಬಿಸಿ ರಸ್ತೆಯ ಮೂಲಕ ರಾ.ಹೆ. ತಲುಪಿ ಉಡುಪಿಯತ್ತ ತೆರಳಿದಲ್ಲಿ ಜನರ ಬೇಡಿಕೆ ಈಡೇರಿಕೆಯ ಜತೆಗೆ ನಾಗರೀಕರ ಸುರಕ್ಷತೆ ಹಾಗೂ ಸುವ್ಯವಸ್ಥೆಯ ಕಲ್ಪಿಸಲು ಸಾಧ್ಯವಾಗಲಿದೆ. ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಆರ್‌ಟಿಒ ಸಹಿತ ಇಲಾಖಾಧಿಕಾರಿಗಳು, ಬಸ್‌ ಚಾಲಕರು ಮಾಲಕರು ಸ್ಪಂದಿಸಿದಲ್ಲಿ ಜನರ ಬೇಡಿಕೆಯನ್ನು ಈಡೇರಿಸಲು ಸಾಧ್ಯ. – ಅಶೋಕ್‌ ರಾವ್‌, ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು, ಕಟಪಾಡಿ ಗ್ರಾ.ಪಂ.

Advertisement

ಅಧಿಕಾರಿಗಳು ಸಹಕಾರವನ್ನು ನೀಡುವ ಭರವಸೆ: ಕಟಪಾಡಿ ಬಸ್‌ನಿಲ್ದಾಣಕ್ಕೆ ಬಸ್‌ ಬರುವಂತೆ ಜನರ ಬಹು ಬೇಡಿಕೆಯಾಗಿತ್ತು. ಸಿಟಿ ಬಸ್‌, ಸರ್ವಿಸ್‌ ಬಸ್‌ ಬರುವ ಬಗ್ಗೆ ಗ್ರಾಮಸಭೆಯಲ್ಲಿಯೂ ಪ್ರಸ್ತಾವನೆ ಬಂದಿತ್ತು.ಪೊಲೀಸ್‌ ಇಲಾಖೆ ಸಹಕಾರದಿಂದ ಪಾರ್ಕಿಂಗ್‌ ನಿಷೇಧಿಸಿ ನಿವೇದನೆಯನ್ನು ಮಾಡಲಾಗಿದ್ದು, ಸಾರ್ವಜನಿಕರ ಸಹಕಾರದ ಭರವಸೆ ಇದೆ. ಕಟಪಾಡಿ ಪೇಟೆಯೊಳಗೆ ಬಸ್‌ ಬರುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಹಕಾರವನ್ನು ನೀಡುವ ಭರವಸೆ ಇದೆ . – ಇಂದಿರಾ ಎಸ್‌. ಆಚಾರ್ಯ, ಅಧ್ಯಕ್ಷರು, ಕಟಪಾಡಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next