Advertisement

Katapadi: ಸ್ಟೀಲ್‌ ನಟ್‌ಗಳ‌ ಈಶ ವಿಶ್ವದಾಖಲೆಗೆ

02:21 AM Sep 14, 2024 | Team Udayavani |

ಕಟಪಾಡಿ: ಇಲ್ಲಿನ ಕೋಟೆ ಗ್ರಾಮದ ಮಟ್ಟು ಅಮಿತ್‌ ಅಂಚನ್‌ ಸುಮಾರು 7,600 ಸ್ಟೀಲ್‌ ನಟ್‌ಗಳನ್ನು ಬಳಸಿ ಮೂರು ತಿಂಗಳ ಶ್ರಮದಲ್ಲಿ ನಿರ್ಮಿಸಿದ ಈಶ ಮಾದರಿಯ ಲೋಹ ಶಿಲ್ಪ ಇಂಟರ್‌ನ್ಯಾಷನಲ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌ ನಲ್ಲಿ ದಾಖಲಾಗಿದೆ.

Advertisement

ಲೋಹದ ನಟ್‌ ಬಳಸಿ “ಯಂಗೆಸ್ಟ್‌ ಮೇಕ್‌ ಬಿಗ್ಗೆಸ್ಟ್‌ ಸ್ಕಲ್‌ಪ್ಚರ್‌ ಆಫ್‌ ಲಾರ್ಡ್‌ ಶಿವ’ ಎಂದು ವರ್ಲ್ಡ್ ರೆಕಾರ್ಡ್‌ನಲ್ಲಿ ಗುರುತಿಸಲ್ಪಟ್ಟಿದ್ದು, ಈ ಕಲಾಕೃತಿಯು 3.5 ಗಿ 5 ಅಡಿ ಎತ್ತರ ಹೊಂದಿದೆ. ಪ್ರಗತಿಪರ ಕೃಷಿಕ ಮಟ್ಟು ಲಕ್ಷ್ಮಣ್‌   – ಪ್ರಮೀಳಾ ದಂಪತಿಯ ಪುತ್ರ, ಮೆಕ್ಯಾನಿಕಲ್‌ ಡಿಪ್ಲೊಮಾ ಮಾಡಿರುವ ಅಮಿತ್‌ ಅಂಚನ್‌ ಆರಂಭದಲ್ಲಿ ಮಣ್ಣಿನ ಮೂರ್ತಿ ತಯಾರಿಸಿ ಪ್ರತಿಕೃತಿಯನ್ನು ತೆಗೆದು ಬಳಿಕ 58 ಕಿಲೋ ನಟ್‌ಗಳನ್ನು ಬೆಸುಗೆ ಮಾಡಿ ಈಶನನ್ನು ನಿರ್ಮಿಸಿದ್ದಾರೆ. ಯುವಕನ ಸಾಧನೆಗೆ ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next