ಭಾರತದ ಮುಕುಟಮಣಿ ಎಂದು ಕರೆಸಿಕೊಳ್ಳುವ ಕಾಶ್ಮೀರ, ಕರಕುಶಲ ಕಲೆಯಲ್ಲಿಯೂ ಅತಿ ಎತ್ತರದಲ್ಲಿದೆ. ಅಲ್ಲಿಗೆ ಪ್ರವಾಸಕ್ಕೆ ಹೋದವರೆಲ್ಲ ಬಗೆ ಬಗೆಯ ಕರಕುಶಲ ವಸ್ತುಗಳನ್ನು ಖರೀದಿಸುವುದು ವಾಡಿಕೆ. ಆದರೆ, ಈಗ ಕಾಶ್ಮೀರವೇ ಬೆಂಗಳೂರಿಗೆ ಬರುತ್ತಲಿದೆ.
“ಕಮಿಟ್‌ಮೆಂಟ್ ಟು ಕಾಶ್ಮೀರ್’ ವತಿಯಿಂದ “ಕಾಶ್ಮೀರಿಯತ್’ ಕರಕುಶಲ ಪ್ರದರ್ಶನ ನಡೆಯಲಿದೆ. ಸಮಕಾಲೀನ ವಿನ್ಯಾಸಗಳನ್ನು ಸಾಂಪ್ರದಾಯಿಕ ತಂತ್ರಗಾರಿಕೆಯ ಮೂಲಕ ಸಮ್ಮಿಲನಗೊಳಿಸಿ ತಯಾರಿಸಿದ ಉತ್ಪನ್ನಗಳು ಇಲ್ಲಿವೆ. ಲೈಟಿಂಗ್, ಹೋಮ್ ಫರ್ನಿಶಿಂಗ್, ಲೈಫ್ಸ್ಟೆçಲ್ ಮತ್ತು ಹೋಮ್ ಡೆಕೋರ್, ಬ್ಯಾಗ್‌ಗಳು, ಬೋರ್ಡ್ ಗೇಮ್‌ಗಳು ಮತ್ತು ಆಕ್ಸೆಸರಿಗಳು ಪ್ರದರ್ಶನದಲ್ಲಿ ಲಭ್ಯ.
ನವೆಂಬರ್ 26ರಂದು ಸಂಜೆ 4ರಿಂದ, ಕಮಿಟ್‌ಮೆಂಟ್ ಟು ಕಾಶ್ಮೀರ್ ಸ್ಥಾಪಕ ಟ್ರಸ್ಟಿ ಪದ್ಮಶ್ರೀ ಲೈಲಾ ತ್ಯಾಬ್ಜಿ, ತನೇರಾ ಮುಖ್ಯಸ್ಥೆ ರಾಜೇಶ್ವರಿ, ಕರಕುಶಲ ಅಭಿವೃದ್ಧಿ ಸಂಸ್ಥೆ ಶ್ರೀನಗರದ ನಿರ್ದೇಶಕ ಜುಬೇರ್ ಅಹಮದ್ ಮಿರ್, ಕಲಾವಿದರು, ವಿನ್ಯಾಸಗಾರರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಜಮ್ಮು-ಕಾಶ್ಮೀರದ ಕರಕುಶಲಕರ್ಮಿಗಳ ಏಳಿಗೆಗಾಗಿ ದುಡಿದ ಲಕ್ಷ್ಮಿ ಜೈನ್ ಅವರ ಸ್ಮರಣಾರ್ಥ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಎಲ್ಲಿ?: ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್, ದೊಮ್ಮಲೂರು
ಯಾವಾಗ?: ನ. 26-28, ಬೆಳಗ್ಗೆ 10-8
ಹೆಚ್ಚಿನ ಮಾಹಿತಿಗೆ: 9810603139, www.ctok.org.in