Advertisement
ಹೀಗೆಂದು ಹೇಳಿದ್ದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಶನಿವಾರ ಉಗ್ರರಿಂದ ಹತ್ಯೆಗೀಡಾದ ಕಾಶ್ಮೀರಿ ಪಂಡಿತ ಪುರನ್ ಕೃಷನ್ ಭಟ್ ಅವರ ಸಹೋದರಿ ನೀಲಂ.
Related Articles
ಇದೇ ವೇಳೆ, ಕೃಷನ್ ಅವರ ಹತ್ಯೆಯು ಭೀಕರ ಹಾಗೂ ಖಂಡನೀಯ ಎಂದು ಹೇಳಿರುವ ಕಣಿವೆಯ ಮುಸ್ಲಿಂ ಧಾರ್ಮಿಕ ಮುಖಂಡರು, “ಇಂಥ ಕೃತ್ಯಗಳು ಇಸ್ಲಾಂನ ಮೂಲ ಆಶಯಗಳಿಗೆ ವಿರುದ್ಧವಾದದ್ದು’ ಎಂದು ಹೇಳಿದ್ದಾರೆ. ಒಬ್ಬ ಅಮಾಯಕನನ್ನು ಕೊಲ್ಲುವುದು ಇಡೀ ಮಾನವತೆಯನ್ನೇ ಹತ್ಯೆ ಮಾಡಿದ್ದಕ್ಕೆ ಸಮ. ಇಂಥದ್ದನ್ನು ಇಸ್ಲಾಂ ಯಾವತ್ತೂ ಬೆಂಬಲಿಸುವುದಿಲ್ಲ ಎಂದು ಇಮಾಮ್‌ಗಳು ಮತ್ತು ಖತೀಬರು ಹೇಳಿದ್ದಾರೆ.
Advertisement
ಕಾಶ್ಮೀರದಲ್ಲಿ ಮೊಂಬತ್ತಿ ಮೆರವಣಿಗೆಭಾನುವಾರ ಕಾಶ್ಮೀರ ಕಣಿವೆಯ ಹಲವು ಪ್ರದೇಶಗಳಲ್ಲಿ ಕೃಷನ್ ಹತ್ಯೆ ಖಂಡಿಸಿ ಮೊಂಬತ್ತಿ ಮೆರವಣಿಗೆಗಳು ನಡೆದಿವೆ. ಶ್ರೀನಗರ, ಬಾರಾಮುಲ್ಲಾ, ಬಂಡಿಪೋರಾ, ಅನಂತ್‌ನಾಗ್, ಕುಲ್ಗಾಂ, ಕುಪ್ವಾರಾ, ಗಂದೇರ್‌ಬಾಲ್ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಮೌನ ಪ್ರತಿಭಟನೆಗಳು ನಡೆದಿವೆ.