Advertisement
ಇತ್ತೀಚೆಗೆ ಹಳ್ಳಿಯ ರಕ್ಷಣೆಯ ಇಬ್ಬರ ಕಾವಲುಗಾರರ ಹತ್ಯೆ ನಡೆದ ಬೆನ್ನಲ್ಲೇ ಕಿಶ್ತ್ವಾರ್ ನ ಭಾರತ್ ರಿಡ್ಜ್ ಪ್ರದೇಶದಲ್ಲಿ ಉಗ್ರರ ವಿರುದ್ಧದ ಜಂಟಿ ಕಾರ್ಯಾಚರಣೆಯಲ್ಲಿ ರಾಕೇಶ್ ಕುಮಾರ್ ತೊಡಗಿಸಿಕೊಂಡಿದ್ದರು. ಝಬರ್ವಾನ್ ಡಟ್ಟಡವಿ ಪ್ರದೇಶದಲ್ಲಿ 20 ವರ್ಷಗಳಲ್ಲಿ ಮೊದಲ ಬಾರಿಗೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನೇರ ಗುಂಡಿನ ಚಕಮಕಿ ನಡೆದಿದೆ. ಹಳ್ಳಿಯ ರಕ್ಷಣ ಕಾವಲುಗಾರರಾದ ನಜೀರ್ ಅಹ್ಮದ್, ಕುಲದೀಪ್ ಕುಮಾರ್ ಶವಗಳು ಪತ್ತೆಯಾದ ಸ್ಥಳದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಕೇಶ್ವಾನ್ ಅರಣ್ಯದಲ್ಲಿ ಸೇನೆ ಹಾಗೂ ಪೋಲೀಸರ ಜಂಟಿ ಶೋಧ ತಂಡಗಳು ಮತ್ತು ಉಗ್ರರ ನಡುವೆ ರವಿವಾರ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಮೂವರು ಯೋಧರು ಗಾಯಗೊಂಡಿದ್ದಾರೆ. ಮೂರರಿಂದ 4 ಉಗ್ರರಿದ್ದು ಹುಡುಕಾಟಕ್ಕ ತೀವ್ರ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. Advertisement
Kashmir ಎನ್ಕೌಂಟರ್: ಸೇನಾಧಿಕಾರಿ ಹುತಾತ್ಮ
12:50 AM Nov 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.