Advertisement
ಸೌದಿಯಿಂದ ಬಂದಿದ್ದ ಮಂಜೇಶ್ವರ ಪಂಚಾಯತ್‌ನ 55 ವರ್ಷದ ನಿವಾಸಿ ಮಹಿಳೆ, ಇವರ ಒಂದು ವರ್ಷ ಪ್ರಾಯದ ಮೊಮ್ಮಗು, ಕುವೈತ್ ನಿಂದ ಆಗಮಿಸಿದ್ದ ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ 39 ವರ್ಷದ ನಿವಾಸಿ, ಒಮಾನ್‌ನಿಂದ ಬಂದಿದ್ದ ಪಳ್ಳಿಕ್ಕರೆ ಪಂಚಾಯತ್‌ನ 49 ವರ್ಷದ ನಿವಾಸಿಗೆ ಕೋವಿಡ್ ಪಾಸಿಟಿವ್ ಆಗಿದೆ.
Related Articles
Advertisement
ಕೇರಳದಲ್ಲಿ 301 ಮಂದಿಗೆ ಸೋಂಕು :ಕೇರಳ ರಾಜ್ಯದಲ್ಲಿ ಬುಧವಾರ 301 ಮಂದಿಗೆ ಕೋವಿಡ್ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 107 ಮಂದಿ ಗುಣಮುಖರಾಗಿದ್ದಾರೆ. ತಿರುವನಂತಪುರ-64, ಮಲಪ್ಪುರ-46, ತೃಶ್ಶೂರು-25, ಪಾಲಾ^ಟ್-25, ಕಣ್ಣೂರು-22, ಇಡುಕ್ಕಿ-20, ಆಲಪ್ಪುಳ-18, ಕೋಟ್ಟಯಂ-17, ಎರ್ನಾಕುಳಂ-16, ಕಲ್ಲಿಕೋಟೆ-15, ವಯನಾಡು-14, ಕೊಲ್ಲಂ-8, ಪತ್ತನಂತಿಟ್ಟ-7,ಕಾಸರಗೋಡು-4 ಎಂಬಂತೆ ರೋಗ ಬಾಧಿಸಿದೆ. ರೋಗ ಬಾಧಿತರಲ್ಲಿ 99 ಮಂದಿ ವಿದೇಶದಿಂದಲೂ, 95 ಮಂದಿ ಇತರ ರಾಜ್ಯಗಳಿಂದಲೂ ಬಂದವರು. 90 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಮೂವರು ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ. ತೃಶ್ಶೂರು ಜಿಲ್ಲೆಯಲ್ಲಿ 9 ಮಂದಿ ಬಿ.ಎಸ್.ಎಫ್. ಜವಾನರಿಗೂ, ಕಣ್ಣೂರು ಜಿಲ್ಲೆಯಲ್ಲಿ ಒಬ್ಬರು ಸಿ.ಐ.ಎಸ್.ಎಫ್. ಜವಾನರಿಗೂ, ಒಬ್ಬರು ಡಿ.ಎಸ್.ಸಿ. ಜವಾನರಿಗೂ, ಆಲಪ್ಪುಳದಲ್ಲಿ 3 ಮಂದಿ ಇಂಡೋ ಟಿಬೇಟ್ ಬೋರ್ಡರ್ ಪೊಲೀಸರಿಗೆ ರೋಗ ಬಾಧಿಸಿದೆ. ಕೊಲ್ಲಂ-23, ಆಲಪ್ಪುಳ-16, ಎರ್ನಾಕುಳಂ-13(ಕಣ್ಣೂರು-1), ತೃಶ್ಶೂರು-11, ಮಲಪ್ಪುರಂ-11, ಪಾಲಾ^ಟ್-9, ಕಲ್ಲಿಕೋಟೆ(ಮಲಪ್ಪುರಂ-1), ಕಾಸರಗೋಡು-7, ತಿರುವನಂತಪುರ-6(ಪತ್ತನಂತಿಟ್ಟ-1), ಪತ್ತನಂತಿಟ್ಟ-3, ಕಣ್ಣೂರು-1 ಎಂಬಂತೆ ಗುಣಮುಖರಾಗಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ 2605 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 3561 ಮಂದಿ ರೋಗ ಮುಕ್ತರಾಗಿದ್ದಾರೆ. ಲಾಕ್ ಡೌನ್ ಉಲ್ಲಂಘನೆ : 16 ಕೇಸು ದಾಖಲು : ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 16 ಕೇಸುಗಳನ್ನು ದಾಖಲಿಸಲಾಗಿದೆ. 41 ಮಂದಿಯನ್ನು ಬಂಧಿಸಲಾಗಿದ್ದು, 16 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 1 ಕೇಸು, ಕುಂಬಳೆ 1, ಕಾಸರಗೋಡು 2, ಮೇಲ್ಪರಂಬ 2, ಬೇಕಲ 2, ಹೊಸದುರ್ಗ 1, ಚಂದೇರ 2, ವೆಳ್ಳರಿಕುಂಡ್ 1, ಚಿತ್ತಾರಿಕಲ್ 2, ರಾಜಪುರಂ 2 ಕೇಸುಗಳನ್ನು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾಗಿರುವ ಕೇಸುಗಳ ಒಟ್ಟು ಸಂಖ್ಯೆ 2984 ಆಗಿದೆ. ಒಟ್ಟು 3900 ಮಂದಿಯನ್ನು ಈ ವರೆಗೆ ಬಂಧಿಸಲಾಗಿದೆ. 1243 ವಾಹನಗಳನ್ನು ವಶಪಡಿಸಲಾಗಿದೆ. ಮಾಸ್ಕ್ ಧರಿಸದ 180 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 180 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 11408 ಮಂದಿ ವಿರುದ್ಧ ಕೇಸು ದಾಖಲಾಗಿದೆ.