Advertisement
ಮಂಗಲ್ಪಾಡಿಯ ವೃದ್ಧ, ಯುವತಿ, 1 ಮತ್ತು 3 ವರ್ಷದ ಹೆಣ್ಣು ಮಕ್ಕಳು, ಕುಂಬಳೆಯ ಯುವಕ, ಮೀಂಜದ ಮಹಿಳೆ, ವರ್ಕಾಡಿಯ 10 ವರ್ಷದ ಬಾಲಕಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಕೇರಳದಲ್ಲಿ ಶನಿವಾರ 488 ಮಂದಿಗೆ ಕೋವಿಡ್ ಸೋಂಕು ದೃಢಗೊಂಡಿದೆ. ಇದೇ ವೇಳೆ 143 ಮಂದಿ ಗುಣಮುಖರಾಗಿದ್ದಾರೆ. ತಿರುವನಂತಪುರ ಮತ್ತು ಎರ್ನಾಕುಳಂ ನಿವಾಸಿಗಳಿಬ್ಬರು ಸಾವಿಗೀಡಾಗಿದ್ದಾರೆ. ಬಾಧಿತರಲ್ಲಿ 167 ಮಂದಿ ವಿದೇಶದಿಂದಲೂ 76 ಮಂದಿ ಇತರ ರಾಜ್ಯಗಳಿಂದ ಬಂದವರು. ಸಂಪರ್ಕದ ಮೂಲಕ 234 ಮಂದಿಗೆ ರೋಗ ಬಾಧಿಸಿದೆ.
Related Articles
ಮಾಸ್ಕ್ ಧರಿಸದ ಆರೋಪದಲ್ಲಿ ಜಿಲ್ಲೆಯಲ್ಲಿ 212 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ. ಲಾಕ್‌ಡೌನ್ ಉಲ್ಲಂಘಿಸಿದ ಆರೋಪದಲ್ಲಿ 11 ಪ್ರಕರಣಗಳನ್ನು ದಾಖಲಿಸಿ 7 ಮಂದಿಯನ್ನು ಬಂಧಿಸಲಾಗಿದೆ. ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
Advertisement