Advertisement

Kasaragod ವಿದೇಶಿ ಕರೆನ್ಸಿ ಸಹಿತ ಇಬ್ಬರು ಪೊಲೀಸರ ವಶಕ್ಕೆ

11:48 PM Feb 24, 2024 | Team Udayavani |

ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣ ಪರಿಸರದಲ್ಲಿ ಕಾಸರಗೋಡು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶಿ ಕರೆನ್ಸಿ ಸಹಿತ ಒಟ್ಟು 15 ಲಕ್ಷ ರೂ. ವಶಪಡಿಸಿದ್ದು, ಈ ಸಂಬಂಧ ಕಾಸರಗೋಡು ಚೌಕಿ ನಿವಾಸಿ ಮೊಹಮ್ಮದ್‌ (42) ಮತ್ತು ಮಲಪ್ಪುರಂ ತಿರೂರಂಬಾಡಿಯ ಝೈನುದ್ದೀನ್‌(50)ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ವಶಪಡಿಸಲಾದ ಕರೆನ್ಸಿಗಳಲ್ಲಿ ಅಮೆರಿಕನ್‌ ಡಾಲರ್‌, ಸೌದಿ ರಿಯಾಲ್‌ ಮತ್ತು ಮಲೇಶ್ಯದ ರಿಂಗಿಟ್‌ ಕರೆನ್ಸಿ ನೋಟುಗಳು ಸಹಿತ 7.50 ಲಕ್ಷ ರೂ. ವಿದೇಶಿ ಕರೆನ್ಸಿ ಮತ್ತು 7.50 ಲಕ್ಷ ರೂ.ಭಾರತೀಯ ಕರೆನ್ಸಿಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನೋಟುಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇಬ್ಬರ ಹೇಳಿಕೆಗಳನ್ನು ದಾಖಲಿಸಿಕೊಂಡು ಅವರನ್ನು ಬಿಡುಗಡೆಗೊಳಿಸಲಾಗಿದೆ. ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ಅದನ್ನು ಮರಳಿ ಪಡೆಯಬಹುದು. ಇಲ್ಲವಾದಲ್ಲಿ ಸರಕಾರಿ ಖಜಾನೆಗೆ ಸೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next