Advertisement

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

01:44 AM Oct 26, 2024 | Team Udayavani |

ಕಾಸರಗೋಡು: ಕಾಸರ ಗೋಡು ರೈಲು ನಿಲ್ದಾಣವನ್ನು “ಅಮೃತ್‌ ಭಾರತ್‌’ ರೈಲು ನಿಲ್ದಾಣವಾಗಿ ಭಡ್ತಿಗೊಳಿಸಲಾಗಿದ್ದು, ನವೀಕರಣ ಕೆಲಸ ಮುಂದಿನ ಜನವರಿ ತಿಂಗಳೊಳಗೆ ಪೂರ್ತಿಗೊಳಿಸ ಲಾಗುವುದು. ಈ ಯೋಜನೆಯಲ್ಲಿ ಕೇರಳದ 30 ರೈಲು ನಿಲ್ದಾಣಗಳನ್ನು ಸೇರಿಸಲಾಗಿದೆ.

Advertisement

ಪಾಲ್ಘಾಟ್ ರೈಲ್ವೇ ವಿಭಾಗದಲ್ಲಿ ರುವ ಕಾಸರಗೋಡು ಸಹಿತ 16 ರೈಲು ನಿಲ್ದಾಣಗಳ ಅಭಿವೃದ್ಧಿಗೆ 249 ಕೋಟಿ ರೂ. ಅನ್ನು ರೈಲ್ವೇ ಇಲಾಖೆ ಮಂಜೂರು ಮಾಡಿದೆ.

ಅಮೃತ್‌ ಭಾರತ್‌ ಯೋಜನೆ ಪ್ರಕಾರ ಕಡಿಮೆ ವೆಚ್ಚದಲ್ಲಿ ರೈಲು ನಿಲ್ದಾಣಗಳನ್ನು ನವೀಕರಿಸಲಾಗುವುದು. ಅನಗತ್ಯವಾಗಿರುವ ಹಳೆ ಕಟ್ಟಡಗಳನ್ನು ಕೆಡಹಿ ಅಲ್ಲಿ ಹೊಸ ಕಟ್ಟಡ ನಿರ್ಮಿಸ ಲಾಗುವುದು. ಪ್ರಯಾಣಿಕರಿಗೆ ಒಂದು ಪ್ಲಾಟ್‌ಫಾರಂನಿಂದ ಇನ್ನೊಂದು ಪ್ಲಾಟ್‌ಫಾರಂಗೆ ಸಾಗಲು ಮೇಲ್ಸೇತುವೆ, ಎಕ್ಸಲೇಟರ್‌, ಲಿಫ್ಟ್‌ಗಳು, ಪಾರ್ಕಿಂಗ್‌ ಸೌಕರ್ಯ, ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗುವುದು. ಆಧುನಿಕ ರೀತಿಯ ಸಂದೇಶ ನೀಡುವ ವ್ಯವಸ್ಥೆ, ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನ ಸೌಕರ್ಯಗಳು, ಸಿಸಿಟಿವಿ ಹಾಗೂ ವೈಫೈ ಸೌಕರ್ಯಗಳನ್ನು ಏರ್ಪಡಿಸಲಾಗುವುದು. ವಾಣಿಜ್ಯಸಮುಚ್ಚಯಗಳನ್ನು ನಿರ್ಮಿಸಲಾ ಗುವುದು.

Advertisement

Udayavani is now on Telegram. Click here to join our channel and stay updated with the latest news.

Next