ಕುಂಬಳೆ: ಬೈಕ್ ತಡೆದು ನಿಲ್ಲಿಸಿ ಖಾಸಗಿ ಬಸ್ ಚಾಲಕನಿಗೆ ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿ, ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂದ್ಯೋಡ್ ಅಡ್ಕ ವೀರನಗರದ ಗಣೇಶ್ ಅವರ ಪುತ್ರ ವಿಷ್ಣು(25) ಸಾವಿಗೀಡಾದರು. 10 ದಿನಗಳ ಹಿಂದೆ ವಿಷ್ಣು ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಕಣ್ಣೂರು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದರು. ಒಂದು ವರ್ಷದ ಹಿಂದೆ ಬಂದ್ಯೋಡು-ಪೆರ್ಮುದೆ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್ ಚಾಲಕ ಅಬ್ದುಲ್ ರಶೀದ್ ಯಾನೆ ಅಚ್ಚು (34) ಅವರನ್ನು ಬೈಕ್ ತಡೆದು ನಿಲ್ಲಿಸಿ ಕಯ್ನಾರು ಗ್ರಾಮ ಕಚೇರಿ ಸಮೀಪ ಇರಿದು ಗಾಯಗೊಳಿಸಿದ ಪ್ರಕರಣದಲ್ಲಿ ವಿಷ್ಣು ಆರೋಪಿಯಾಗಿದ್ದ. ಕುಂಬಳೆ ಪೊಲೀಸರು ಕೊಲೆ ಯತ್ನ ಕೇಸು ದಾಖಲಿಸಿಕೊಂಡಿದ್ದರು.
Advertisement
ಮದ್ಯ ಸಹಿತ ಇಬ್ಬರ ಬಂಧನಕುಂಬಳೆ: ಬಂದ್ಯೋಡ್‌ನಲ್ಲಿ ಕಾಸರಗೋಡು ಅಬಕಾರಿ ಎನ್‌ಫೋರ್ಸ್‌ಮೆಂಟ್ ಆ್ಯಂಡ್ ಆ್ಯಂಟಿ ನಾರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ ನಡೆಸಿದ ಕಾರ್ಯಾಚರಣೆಯಲ್ಲಿ ರಿಕ್ಷಾದಲ್ಲಿ ಸಾಗಿಸುತ್ತಿದ್ದ 86.4 ಲೀಟರ್ ಮದ್ಯ ವಶಪಡಿಸಿಕೊಂಡಿದ್ದು, ಈ ಸಂಬಂಧ ಕಿಳಿಂಗಾರು ಮುಗು ರೋಡ್‌ನ ಹರಿಪ್ರಸಾದ್ ಕೆ. ಮತ್ತು ಬಾಡೂರು ಬಾಳಿಗ ನಿವಾಸಿ ಸತ್ಯನಾರಾಯಣನನ್ನು ಬಂಧಿಸಲಾಗಿದೆ. ಆಟೋ ರಿಕ್ಷಾ ವಶಪಡಿಸಿಕೊಳ್ಳಲಾಗಿದೆ.
ಕಾಸರಗೋಡು: ಕುಖ್ಯಾತ ಕಳವು ಆರೋಪಿ ತುರುತ್ತಿ ಮಣಿ(49)ಯನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಮತ್ತು ನೀಲೇಶ್ವರದ ಬಿಎಸ್‌ಎನ್‌ಎಲ್ ಎಕ್ಸ್‌ಚೇಂಜ್‌ನಿಂದ 2 ಲಕ್ಷ ರೂ. ಮೌಲ್ಯದ ಬ್ಯಾಟರಿಗಳನ್ನು ಕಳವು ಮಾಡಿದ ಸಂಬಂಧ ಬಂಧಿಸಲಾಗಿದೆ. ಟ್ಯಾಂಕರ್ ಲಾರಿ ಅಪಘಾತ : ಸಾರಿಗೆ ತಡೆ
ಕುಂಬಳೆ: ಕಾಸರಗೋಡಿನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಟ್ಯಾಂಕರ್ ಲಾರಿ ಮಂಗಳವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಸೇತುವೆಯ ಪರಿಸರದಲ್ಲಿ ಟ್ಯಾಂಕರ್ ಲಾರಿ ಡಿವೈಡರ್‌ಗೆ ಢಿಕ್ಕಿ ಹೊಡೆದು ಕೆಲವು ಹೊತ್ತು ಸಾರಿಗೆ ಅಸ್ತವ್ಯಸ್ತಗೊಂಡಿತು. ಯುಎಲ್‌ಸಿಸಿ ಕಂಪೆನಿಯ ಎರಡು ಕ್ರೈನ್‌ಗಳನ್ನು ಬಳಸಿ ಲಾರಿಯನ್ನು ತೆರವುಗೊಳಿಸಲಾಯಿತು. ಆ ಬಳಿಕ ಸಾರಿಗೆ ಪುನರಾರಂಭಗೊಂಡಿತು.