Advertisement
ಈ ಸಂಬಂಧ ಆಯೋಜಿಸಿದ ಬೃಹತ್ ಸಭೆಯಲ್ಲಿ ಹಿಂದೂ ಐಕ್ಯವೇದಿ ಜಿಲ್ಲಾ ಅಧ್ಯಕ್ಷ ಎಸ್.ಪಿ. ಶಾಜಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ, ಆರ್ಎಸ್ಎಸ್ ಕಾಸರಗೋಡು ಸಂಘ ಚಾಲಕ್ ಪ್ರಭಾಕರ್, ಸಂಕಪ್ಪ ಭಂಡಾರಿ, ಗಣೇಶ್ ಮಾವಿನಕಟ್ಟೆ, ಧಾರ್ಮಿಕ ಮುಂದಾಳು ಅರುಣ್ ಕುಮಾರ್ ಪುತ್ತಿಲ, ಡಾ|ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ವಿಠಲ ಭಟ್, ವಿಘ್ನೇಶ್ವರ ಭಟ್, ಸುರೇಶ್ ಕೀಯೂರು, ವಾಮನ ಆಚಾರ್ಯ, ನವೀನ್ ಕುಮಾರ್, ಸೀತಾರಾಮ ಬಳ್ಳುಳ್ಳಾಯ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ: ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರ ಕಾರಿನ ಮೇಲೆ ದುಷ್ಕ ರ್ಮಿ ಗಳು ದಾಳಿ ನಡೆಸಿರುವುದನ್ನು ಉಗ್ರ ವಾಗಿ ಖಂಡಿಸುತ್ತೇವೆ ಹಾಗೂಹಲ್ಲೆಯು ಖೇದ ಉಂಟು ಮಾಡಿದೆ.
Related Articles
Advertisement
ವಿಶ್ವ ಹಿಂದೂ ಪರಿಷತ್ ಖಂಡನೆ ಮಂಗಳೂರು: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಸಂಚರಿಸುತ್ತಿದ್ದ ವಾಹನಕ್ಕೆ ಕಿಡಿಗೇಡಿಗಳು ತಡೆ ಯೊಡ್ಡಿದ ಘಟನೆಯನ್ನು ವಿಶ್ವ ಹಿಂದೂ ಪರಿಷತ್ ಖಂಡಿಸಿದೆ. ಸಾಧು ಸಂತರನ್ನು ಗುರಿಯಾಗಿಸಿ ಕೊಂಡು ನಡೆಯುತ್ತಿರುವ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪವೆಲ್ ಅವರು ಕೇರಳ ಸರಕಾರವನ್ನು ಆಗ್ರಹಿಸಿದ್ದಾರೆ.