Advertisement

ದುರಸ್ತಿ ವಿಳಂಬ ಸಾರ್ವಜನಿಕರಿಗೆ ತೊಂದರೆ

10:21 PM May 17, 2020 | Sriram |

ಉಡುಪಿ: ಅಲೆವೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕರ್ವಾಲು ಪ್ರದೇಶದ ರಸ್ತೆ ಡಾಮರು ಕಿತ್ತು ಸದ್ಯ ಓಡಾಟಕ್ಕೆ ತೊಂದರೆಯಾಗಿದೆ. ಈ ಹಿಂದೆ 50 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆದಿತ್ತು. ಆದರೆ ಕೋವಿಡ್-19ದಿಂದ ಕಾಮಗಾರಿ ಕೆಲಸಕ್ಕೆ ತೊಡಕುಂಟಾಗಿದೆ.

Advertisement

ಕರ್ವಾಲು- ಪ್ರಗತಿ ನಗರ ರಸ್ತೆ, ಕರ್ವಾಲು, ಮರ್ಣೆ, ಪೆರ್ಣಂಕಿಲ ಈ ಎಲ್ಲ ಭಾಗದಿಂದ ಮಣಿಪಾಲಕ್ಕೆ ಬರುವವರಿಗೆ ಹತ್ತಿರವಾದ ರಸ್ತೆಯಲ್ಲಿ ದಿನಂಪ್ರತಿ ಈ ಭಾಗದಿಂದ ನೂರಾರು ವಾಹನಗಳು ಓಡಾಡುತ್ತದೆ. ಆದರೆ ಕರ್ವಾಲು ಭಾಗದಲ್ಲಿ ರಸ್ತೆಯ ಡಾಮಾರು ಸಂಪೂರ್ಣ ಕಿತ್ತು ಹೋಗಿರುವುದು ದ್ವಿಚಕ್ರ ಸೇರಿದಂತೆ ಎಲ್ಲ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಗಮನಕ್ಕೆ ತರಲಾಗಿದೆ
ಕರ್ವಾಲು ಭಾಗದಲ್ಲಿ ರಸ್ತೆಯ ಅಭಿವೃದ್ಧಿ ಅತ್ಯಗತ್ಯವಿದೆ. ಈಗಾಗಲೇ ಈ ಕಾಮಗಾರಿ ಮುಕ್ತಾಯ ಆಗಬೇಕಿತ್ತು ಲಾಕ್‌ಡೌನ್‌ ಹಿನ್ನಲೆಯಲ್ಲಿ ವಿಳಂಬವಾಗಿದೆ. ಪಿಡಬ್ಲೂಡಿ ಸಹಿತ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಲ್ಲಿ ಒಂದು ಭಾಗದಲ್ಲಿ ಹೆಚ್ಚು ಹಾನಿಯಾಗಿದ್ದು ಇದನ್ನು ಮಳೆಗಾಲ ಆರಂಭದ ಒಳಗೆ ಕಾಂಕ್ರೀಟಿಕರಣ ಮಾಡಲು ತಿಳಿಸಲಾಗಿದೆ.
-ಶ್ರೀಕಾಂತ್‌ ನಾಯಕ್‌, ಅಲೆವೂರು ಗ್ರಾ.ಪಂ. ಅಧ್ಯಕ್ಷರು.

Advertisement

Udayavani is now on Telegram. Click here to join our channel and stay updated with the latest news.

Next