Advertisement

ಕರುಣಾನಿಧಿ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ರಾಹುಲ್‌ ಗಾಂಧಿ

05:30 PM Jul 31, 2018 | Team Udayavani |

ಚೆನ್ನೈ : ಆರೋಗ್ಯ ತೀವ್ರವಾಗಿ ಹದಗೆಟ್ಟ ಕಾರಣ ನಗರದ ಆಸ್ಪತ್ರೆಗೆ ದಾಖಲಾಗಿ ಕಳೆದ ನಾಲ್ಕು ದಿನಗಳಿಂದ ಐಸಿಯು ನಲ್ಲೇ ಇರುವ ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ಅವರನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಂದು ಭೇಟಿಯಾದರು. 

Advertisement

ಕರುಣಾನಿಧಿ ಅವರ ಆರೋಗ್ಯ ಸ್ಥಿರವಾಗಿದೆ; ಅವರು ಚೆನ್ನಾಗಿದ್ದಾರೆ; ತಮಿಳು ನಾಡಿನ ಜನರಂತೆ ಅವರೋರ್ವ ಗಟ್ಟಿಗ ಮನುಷ್ಯ. ತಮಿಳು ನಾಡಿನ ಸ್ಪೂರ್ತಿಯನ್ನೇ ಅವರು ತಮ್ಮಲ್ಲಿ ಆವಾಹಿಸಿಕೊಂಡಿದ್ದಾರೆ’ ಎಂದು ರಾಹುಲ್‌ ಗಾಂಧಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹೇಳಿದರು.

ಕರುಣಾನಿಧಿ ಜತೆಗೆ ಸುಮಾರು 15 ನಿಮಿಷಗಳನ್ನು ಕಳೆದ ರಾಹುಲ್‌, ತನ್ನ ತಾಯಿ ಸೋನಿಯಾ ಗಾಂಧಿ ಅವರು ಕರುಣಾನಿಧಿ ಮತ್ತು ಅವರ ಕುಟುಂಬದವರಿಗೆ ಶುಭ ಹಾರೈಕೆಗಳನ್ನು ನನ್ನ ಸಂಗಡ ಕಳುಹಿಸಿದ್ದಾರೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next