Advertisement
ಚಿತ್ರಕಥೆಯನ್ನು ಬರೆದಿರುವ ಯುವ ಪ್ರತಿಭಾನ್ವಿತ ಸಾಕ್ಷಾತ್ ಮಲ್ಪೆ ನಿರ್ದೇಶನದ ಬಹು ನಿರೀಕ್ಷೆಯ ಕರ್ಣೆ ಕೋಸ್ಟಲ್‌ವುಡ್ ನಲ್ಲಿ ಬಿಡುಗಡೆ ಯಾಗಲಿರುವ 100ನೇ ಚಿತ್ರವಾಗಿದ್ದು ಭಾರಿ ಕೂತುಹಲ ಕೆರಳಿಸಿದೆ. ಶ್ರೀ ರಕ್ಷಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಚಿತ್ರಕ್ಕೆ ರಕ್ಷಿತ್ ಎಸ್. ಕೋಟ್ಯಾನ್ ಮತ್ತು ರಕ್ಷಿತ್ ಎಚ್. ಸಾಲ್ಯಾನ್ ನಿರ್ಮಾಪಕರಾಗಿ ಹಾಗೂ ಶಿರಿಶ್ ಶೆಟ್ಟಿ ಮತ್ತು ಹರ್ಷಿತ್ ಸಹ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ.
ಇನ್ನು ತೆರೆ ಕಾಣಲಿರುವ ಕನ್ನಡ ಗಹನ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಮಾಡಿ ರಘು ಧನ್ವಂತ್ರಿ ಅವರ ನಿರ್ದೇಶನದಲ್ಲಿ ಪ್ರಮುಖವಾಗಿ 3 ಹಾಡುಗಳನ್ನು ಚಿತ್ರದಲ್ಲಿ ಸಂಯೋಜಿಸಲಾಗಿದೆ. ಪೊಡಿ ದುಮ್ಸು, ರಾಜೆ..ಯಾನೆ ಮತ್ತು ಎನ್ನಗುಲ್ ಏರಾ ಇಂಪಾದ ಹಾಡುಗಳು ಕರಾವಳಿಗರ ಮನೆ ಮನ ತಟ್ಟಿದೆ. ಚಿತ್ರರಂಗದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಎಂಬಂತೆ 1000 ಮಕ್ಕಳಿಂದ ಚಿತ್ರದ ಹಾಡುಗಳ ಧ್ವನಿಸುರುಳಿಯನ್ನು ನ. 1ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದೆ.
Related Articles
ಕುಂದಾಪುರ, ಮಂಗಳೂರು, ಉಡುಪಿ ಹಾಗೂ ಮಲ್ಪೆ ಅಸುಪಾಸಿನಲ್ಲಿ ಚಿತ್ರೀಕರಣ ನಡೆದಿದ್ದು ಸ್ಥಳೀಯ ಯುವ ಪ್ರತಿಭೆಗಳಿಗೆ ಒಂದೊಳ್ಳೆ ಅವಕಾಶ ಕಲ್ಪಿಸುವ ಮೂಲಕ ಚಿತ್ರರಂಗಕ್ಕೆ ಹೊಸ ಕಲಾವಿದರ ಕೊಡುಗೆ ನೀಡಿದಂತಾಗಿದೆ. ಮೊದಲಿಗೆ ಕರಾವಳಿಯ 14 ಚಿತ್ರಮಂದಿರದಲ್ಲಿ ಬಿಡುಗಡೆ ಕಾಣಲಿದ್ದು ಅನಂತರದ ದಿನಗಳಲ್ಲಿ ಬೆಂಗಳೂರು, ಮುಂಬೈ, ದುಬೈ ಸೇರಿದಂತೆ ಹೊರದೇಶದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
Advertisement
ಆ್ಯಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್ ಮತ್ತು ಚಿರಶ್ರೀ ಅಂಚನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಸಹ ಕಲಾವಿದರಾಗಿ ಕೋಸ್ಟಲ್ ವುಡ್‌ನ ಹಾಸ್ಯ ದಿಗ್ಗಜರಾದ ತುಳುವ ಮಾಣಿಕ್ಯ ಅರವಿಂದ ಬೋಳಾರ್, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರ್, ಮಂಜು ರೈ ಮೂಳೂರು, ಸಾಯಿಕೃಷ್ಣ ಕುಡ್ಲ ಸೇರಿದಂತೆ ಹಲವಾರು ಪ್ರಬುದ್ದ ಕಲಾವಿದರು ಕಾಣಿಸಿಕೊಂಡಿದ್ದಾರೆ. ಖಳ ನಾಯಕರಾಗಿ ಗೋಪಿನಾಥ್ ಭಟ್‌ಗೆ ಅರ್ಜುನ್ ಕಜೆ ಸಾತ್ ನೀಡಿದ್ದಾರೆ.