ಮಂಗಳೂರು: ಮೂರು ದಿನಗಳ ಭೇಟಿಗೆ ಮಂಗಳೂರಿಗೆ ಆಗಮಿಸಿರುವ ಕರ್ನಾಟಕ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ರವಿವಾರ(ಡಿ.1) ಬೆಳಗ್ಗೆ ಮಂಗಳೂರಿನ ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು.
ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯನ್ನು ಪರಿಶೀಲಿಸಿದ ಬಳಿಕ, ಇನ್ನಷ್ಟು ವೈಜ್ಞಾನಿಕವಾಗಿ ವಿಲೇವಾರಿ ಪ್ರಕ್ರಿಯೆ ನಡೆಸುವಂತೆ ಹಾಗೂ ಸ್ಥಳೀಯ ಗ್ರಾಮಗಳ ಜನರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಬಳಿಕ ಮಂಗಳೂರಿನ ಪಿವಿಎಸ್ ಬಳಿಯ ಡಾ| ಬಿ.ಆರ್.ಅಂಬೇಡ್ಕರ್, ಕುದ್ಮುಲ್ ರಂಗರಾವ್ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯಕ್ಕೆ ಭೇಟಿ ನೀಡಿ, ಮಕ್ಕಳೊಂದಿಗೆ ಸಂವಾದ ನಡೆಸಿದರು. ಹಾಸ್ಟೆಲ್‌ನ ಕೊಠಡಿ, ಅಡುಗೆ ಕೋಣೆ, ಸ್ಟೋರ್ ರೂಂಗಳಿಗೆ ಭೇಟಿ ನೀಡಿ ಅನ್ನ, ಆಹಾರ, ತರಕಾರಿ, ಬೇಳೆ ಕಾಳುಗಳನ್ನು ಪರಿಶೀಲಿಸಿದರು.
ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್ ಕುಮಾರ್, ಉಪವಿಭಾಗಾಧಿಕಾರಿ ಹರ್ಷವರ್ಧನ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್., ಲೋಕಾಯುಕ್ತ ಎಸ್.ಪಿ. ನಟರಾಜ್ ಎಂ.ಎ., ಡಿವೈಎಸ್‌ಪಿ ಡಾ| ಗಾನಾ ಪಿ.ಕುಮಾರ್ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.
ಇದನ್ನೂ ಓದಿ: Naxal Encounter: ತೆಲಂಗಾಣದಲ್ಲಿ ಎನ್‌ಕೌಂಟರ್.. 7 ಮಾವೋವಾದಿಗಳ ಹತ್ಯೆ, AK 47 ರೈಫಲ್ ವಶ