Advertisement
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಸೋಮವಾರ ಸೆಂಟರ್ ಆಫ್ಎ ಕ್ಸಲೆನ್ಸಿ (ಏರೋಸ್ಪೆಸ್ ಎಂಜಿನಿಯರಿಂಗ್ ಮತ್ತು ಇಂಟರ್‌ನೆಟ್ ಆಫ್ ಥಿಂಗ್ಸ್) ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಬೆಂಗಳೂರು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂ ತ್ರಜ್ಞಾನದ ನಗರಮಾತ್ರವಲ್ಲ. ವೈಮಾನಿಕ ತಂತ್ರಜ್ಞಾನ ಕ್ಷೇತ್ರದ ನವಾನ್ವೇಷಣೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈಮಾನಿಕ ತಂತ್ರಜ್ಞಾನ ನಗರವಾಗಿ ರೂಪುಗೊಂಡಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೈಗಾರಿಕಾ ತರಬೇತಿಯೂ ಅಗತ್ಯವಾಗಿದೆ. ಶಿಕ್ಷಣ ಸಂಸ್ಥೆಗಳೇ ಕೈಗಾರಿಕಾ ಘಟಕ ಹೊಂದಿರುವುದು ಇನ್ನಷ್ಟು ಅನುಕೂಲವಾಗಲಿದೆ ಎಂದರು.
Related Articles
Advertisement
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎನ್.ಆರ್. ಶೆಟ್ಟಿ ಮಾತನಾಡಿ, ವೈಮಾನಿಕ ತಂತ್ರಜ್ಞಾನ ಹಾಗೂ ಇಂಟರ್‌ನೆಟ್ ಆಫ್ ಥಿಂಗ್ಸ್ ಕ್ಷೇತ್ರದಲ್ಲಿ ಅತ್ಯಾಧುನಿಕ ಸಲಕರಣೆ ಹಾಗೂ ತಂತ್ರಾಂಶ ಅಳವಡಿಸಿ ಈ ಕೇಂದ್ರ ಸ್ಥಾಪಿಸಲಾಗಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದು ಅತಿ ಅಗತ್ಯವಾಗಿದೆ. ಕೈಗಾರಿಕಾ ತರಬೇತಿ ಈ ಕೇಂದ್ರದ ಮೂಲಕವೇ ಸಿಗಲಿದೆ ಎಂದರು.
ಜಾಗತಿಕ ವೈಮಾನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ 2020ರ ವೇಳೆಗೆ ಭಾರತ 3ನೇ ಬೃಹತ್ ರಾಷ್ಟ್ರವಾಗಿ ಬೆಳೆಯಲಿದೆ. 2035ರ ವೇಳೆಗೆ ಜಗತ್ತಿನಲ್ಲಿ ಮೊದಲನೇ ಸ್ಥಾನ ಪಡೆಯಲಿದೆ. ತಜ್ಞರ ಪ್ರಕಾರ ಒಂದು ಬಿಲಿಯನ್ ಎಂಜಿನಿಯರಿಂಗ್ ಪದವೀಧರರಿಗೆ ನೇರ ಉದ್ಯೋಗ ಲಭಿಸಲಿದೆ. ವಿದ್ಯಾರ್ಥಿಗಳು ಇದರಲ್ಲಿ ಸಕ್ರಿಯರಾಗಬೇಕು ಎಂದು ಕರೆಕೊಟ್ಟರು.
ಕೇಂದ್ರ ಅಂಕಿಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಡಾ.ಎಚ್.ಸಿ. ನಾಗರಾಜ್, ಶಾಸಕ ಎಸ್.ಆರ್.ವಿಶ್ವನಾಥ್, ನಿಟ್ಟೆ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ರೋಹಿತ್ ಪೂಂಜಾ, ಡಸಾಲ್ಟ್ ಸಿಸ್ಟಂ ಇಂಡಿಯಾದ ಉಪಾಧ್ಯಕ್ಷ ಲೋಕನಾಥ ಕೆ.ರೆಡ್ಡಿ, ಪಿಟಿಸಿ ಇಂಡಿಯಾದ ಹಿರಿಯ ನಿರ್ದೇಶಕ ಮೋಹನ್ ಹಾಗೂ ಡಿಸೆಕ್ ಕಾಂಪಿಟೆನ್ಸಿ ಸರ್ವಿಸ್Õ ಸಂಸ್ಥೆಯ ರಾಹುಲ್ ನಾಯ್ಡು, ಅನುಜ್ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು.