Advertisement

‌ಕೋವಿಡ್‌ ಭೀತಿ: ಶಾಲಾ -ಕಾಲೇಜು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ; ಇಲ್ಲಿದೆ ಹೊಸ ಗೈಡ್‌ ಲೈನ್ಸ್

03:15 PM Dec 26, 2022 | Team Udayavani |

ಬೆಂಗಳೂರು/ ಬೆಳಗಾವಿ ಚೀನದಲ್ಲಿ ಕೋವಿಡ್‌ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಮುಂಜಾಗ್ರತ ಕ್ರಮವಾಗಿ ಹೊಸ ಗೈಡ್‌ ಲೈನ್ಸ್‌ ಪ್ರಕಟಿಸಿದೆ.

Advertisement

ಕೋವಿಡ್‌ ಸಭೆಯನ್ನು ನಡೆಸಿದ ಸರ್ಕಾರ ಹೊಸ ಗೈಡ್‌ ಲೈನ್ಸ್‌ ಪ್ರಕಟಿಸಿ, ಸಾರ್ವಜನಿಕರು ಈ ನಿಯಮಗಳನ್ನು ಪಾಲಿಸಬೇಕೆಂದಿದೆ.

ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಮಾತಾನಾಡಿದ ಸಚಿವ ಆರ್‌. ಅಶೋಕ್‌, ಶಾಲಾ ಕಾಲೇಜು, ಸಿನಿಮಾ ಮಂದಿರ, ಬಸ್ , ರೈಲು, ವಿಮಾನ ಸೇರಿ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ನೂತನ ವರ್ಷಾಚರಣೆ 31 ರ ರಾತ್ರಿ 1 ಗಂಟೆವರೆಗೆ ಮಾತ್ರ ಅವಕಾಶವಿರುತ್ತದೆ. ಎಲ್ಲರೂ ನಿಯಮವನ್ನು ಪಾಲಿಸಬೇಕೆಂದರು.

ಸುವರ್ಣ ಸೌಧದಲ್ಲಿ ಮಾತಾನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್‌, ಒಳಾಂಗಣ ಕಾರ್ಯಕ್ರಮಗಳಲ್ಲಿ ಮಾಸ್ಕ್ ಕಡ್ಡಾಯವಾಗಿರುತ್ತದೆ. ನೂತನ ವರ್ಷಾಚರಣೆ ಹೊಟೇಲ್ ರೆಸಾರ್ಟ್ ರೆಸ್ಟೋರೆಂಟ್ ಗಳಲ್ಲೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಗ್ರಾಹಕರು ಮತ್ತು ಅಲ್ಲಿನ ಸಿಬ್ಬಂದಿ ಇದನ್ನು ಪಾಲಿಸಬೇಕು. ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿಲ್ಲ ಮುಂಜಾಗ್ರತ ಕ್ರಮವಹಿಸಬೇಕೆಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next