Advertisement

All India ಪೀಠಾಸೀನಾಧಿಕಾರಿಗಳ ಸಮ್ಮೇಳನ:ರಾಜ್ಯದಲ್ಲಿ ನಡೆಸುವಂತೆ ಓಂ ಬಿರ್ಲಾಗೆ ಖಾದರ್‌ ಮನವಿ

12:07 AM Sep 03, 2024 | Team Udayavani |

ಮಂಗಳೂರು: ಪ್ರತಿವರ್ಷ ನಡೆಯುವ ಅಖಿಲ ಭಾರತ ಪೀಠಾಸೀನಾ ಧಿಕಾರಿಗಳ ಸಮ್ಮೇಳನ ವನ್ನು ಕರ್ನಾಟಕದಲ್ಲಿ ನಡೆಸುವಂತೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ಸೋಮವಾರ ಭೇಟಿಯಾಗಿ ಮನವಿ ಸಲ್ಲಿಸಿದರು.

Advertisement

85ನೇ ಸಮ್ಮೇಳನವನ್ನು ಕರ್ನಾಟಕದಲ್ಲಿ ನಡೆಸುವಂತೆ ವಿನಂತಿಸಿದರು.ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಓಂ ಬಿರ್ಲಾ, ಈ ಬಗ್ಗೆ ದಿಲ್ಲಿಯ ಸಂಸತ್‌ ಭವನದಲ್ಲಿ ಸೆ. 23 ಹಾಗೂ 24ರಂದು ನಡೆಯಲಿರುವ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಸ್ಪೀಕರ್‌ ಖಾದರ್‌ ಅವರು ಕರ್ನಾಟಕ ವಿಧಾನಸಭೆಯಲ್ಲಿ ಜಾರಿಗೆ ತರಲಾಗಿರುವ ಕೆಲವು ಮಹತ್ವದ ನಿರ್ಣಯಗಳ ಬಗ್ಗೆ ಓಂ ಬಿರ್ಲಾ ಅವರ ಗಮನಕ್ಕೆ ತಂದರು. ಸದನ ಬೆಳಗ್ಗೆ 11ರ ಬದಲು 9 ಗಂಟೆಗೆ ಆರಂಭಿಸುವುದು, ಸಮಯಕ್ಕೆ ಸರಿಯಾಗಿ ಆಗಮಿಸಿದ 23 ಸದಸ್ಯರಿಗೆ ಗೌರವ, ವಿಧಾನಸಭೆಯ ಮೊಗಸಾಲೆಯಲ್ಲಿ ಅತ್ಯುತ್ತಮ ಉಪಾಹಾರ ಹಾಗೂ ಭೋಜನದ ವ್ಯವಸ್ಥೆ, ಕೃತಕ ಬುದ್ಧಿಮತ್ತೆ ಮೂಲಕ ಸದಸ್ಯರು ಸದನದಲ್ಲಿ ಕಳೆದ ಸಮಯದ ಮಾಹಿತಿ ಪಡೆದುಕೊಳ್ಳುವುದು, ಸದನದೊಳಗೆ ಸಂವಿಧಾನದ ಪೀಠಿಕೆ ಅಳವಡಿಕೆ, ಸಂವಿಧಾನ ಕ್ಲಬ್‌ ಮಾದರಿಯಲ್ಲಿ ಕರ್ನಾಟಕದಲ್ಲೂ ಆರಂಭಿಸಿ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ ಮುಂತಾದವುಗಳನ್ನು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next