Advertisement

ಕರ್ನಾಟಕ ಸಂಘ ಕತಾರ್‌: ವಾರ್ಷಿಕ ಸಂಭ್ರಮ ವಸಂತೋತ್ಸವ-24 ಆಚರಣೆ

11:52 AM May 11, 2024 | Team Udayavani |

ದೋಹಾ: ಕತಾರ್‌ ರಾಜ್ಯದ ದೋಹಾ ಮೂಲದ ಸಮುದಾಯವಾದ ಕರ್ನಾಟಕ ಸಂಘ ಕತಾರ್‌ ತನ್ನ ರಚನೆಯ 25ನೇ ವರ್ಷವನ್ನು ಪ್ರವೇಶಿಸಿದೆ. ಈ ವರ್ಷಾಚರಣೆಯ ಪ್ರಥಮ ಕಾರ್ಯಕ್ರಮ ವಸಂತೋತ್ಸವ – 2024 ಅನ್ನು 2024ರ ಎ. 26ರಂದು ತುಂಬಿದ ಸಭಾಂಗಣದಲ್ಲಿ ಭವ್ಯ ಶೈಲಿಯಲ್ಲಿ ಹಮ್ಮಿಕೊಂಡಿತ್ತು.

Advertisement

ದಿ ರಘು ದೀಕ್ಷಿತ್‌ ಪ್ರಾಜೆಕ್ಟ್ ಬ್ಯಾನರ್‌ ಅಡಿಯಲ್ಲಿ ಆಯೋಜಿಸಲಾದ ಕಾನ್ಸರ್ಟ್‌ ಮಾದರಿಯ ಕಾರ್ಯಕ್ರಮವು ನೆರೆದಿದ್ದ ಪ್ರೇಕ್ಷಕರನ್ನು ಕುಣಿಯುವಂತೆ ಮಾಡಿತು. ಕನ್ನಡದ ಪ್ರಸಿದ್ಧ ಸ್ಟ್ಯಾಂಡ್‌-ಅಪ್‌ ಹಾಸ್ಯನಟ ರಾಘವೇಂದ್ರ ಆಚಾರ್‌ ಅವರ ಕಾಮಿಡಿ ಕಾರ್ಯಕ್ರಮಕ್ಕೆ ಉತ್ತಮ ಚಾಲನೆ ನೀಡಿತು. ವೀಕ್ಷಕರು ಹಾಸ್ಯ ಮತ್ತು ರಾಕ್‌ ಸಂಗೀತ ಕಾರ್ಯಕ್ರಮದ ಹಬ್ಬಕ್ಕೆ ಸಾಕ್ಷಿಯಾದರು.

ಕತಾರ್‌ ರಾಷ್ಟ್ರದ ಭಾರತದ ರಾಯಭಾರಿ ಗೌರವಾನ್ವಿತ ವಿಪುಲ್‌ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರು ಸುಬ್ರಹ್ಮಣ್ಯ ಹೆಬ್ಬಾಗಿಲು, ಕರ್ನಾಟಕ ಸಂಘದ ಕತಾರ್‌ ಮಾಜಿ ಅಧ್ಯಕ್ಷರು ಅರವಿಂದ ಪಾಟೀಲ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇತರ ಅಪೆಕ್ಸ್‌ ಸಂಸ್ಥೆಗಳ ಅಧ್ಯಕ್ಷರು ಮತ್ತು ಕರ್ನಾಟಕ ಸಂಘ ಕತಾರ್‌ ನಿರ್ವಹಣ ಸಮಿತಿಯ ಸದಸ್ಯರು ಮತ್ತು ಸಲಹಾ ಮಂಡಳಿಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಹೇಶ್‌ ಗೌಡ ಮಾತನಾಡಿ, ಸಂಘದ ಯಶಸ್ಸಿಗೆ ಸಹಕರಿಸಿದ ಹಿಂದಿನ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರಿಗೆ ಧನ್ಯವಾದ ಅರ್ಪಿಸಿದ ಅವರು, 2024 ಕರ್ನಾಟಕ ಸಂಘ ಕತಾರ್‌ಗೆ ರಜತ ಮಹೋತ್ಸವ ವರ್ಷವಾಗಿದ್ದು, ಈ ವರ್ಷ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ ಎಂದು ಸಭೆಗೆ ತಿಳಿಸದರು. ಗೌರವಾನ್ವಿತ ವಿಪುಲ್‌ ಅವರು ಸಭಿಕರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ಕಾರ್ಯಕ್ರಮವನ್ನು ಬೆಂಬಲಿಸಿದ ಎಲ್ಲ ಸಮುದಾಯದ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು.

ಕರ್ನಾಟಕ ಸಂಘ ಕತಾರ್‌ನ ಸಾಂಸ್ಕೃತಿಕ, ದಯಾಪರ ಚಟುವಟಿಕೆಗಳನ್ನು ಬೆಂಬಲಿಸುವುದಾಗಿ ತಿಳಿಸಿ ಮಹೇಶ್‌ ಗೌಡ ಅವರು ಕತಾರ್‌ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅದ್ಬುತ ಕಾರ್ಯಕ್ರಮಗಳನ್ನು ಆಯೋಜಿಸಿದ್ದಕ್ಕಾಗಿ ಅವರ ನಾಯಕತ್ವವನ್ನು ಶ್ಲಾಘಿಸಿದರು.

Advertisement

ಕರ್ನಾಟಕ ನವ್ಯ ಸಂಗೀತ ಸಾಮ್ರಾಟ್‌ ಬಿರುದು ಕಾರ್ಯಕ್ರಮದ ಪ್ರಮುಖ ಅಂಶವೆಂದರೆ ರಘು ದೀಕ್ಷಿತ್‌ ಮತ್ತು ಅವರ ತಂಡದ ರಾಕಿಂಗ್‌ ಪ್ರದರ್ಶನ, ಅವರು ತಮ್ಮ ಪ್ರದರ್ಶನದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವುದಲ್ಲದೆ, ತಮ್ಮ ರೋಮಾಂಚಕ ಪ್ರದರ್ಶನದಿಂದ ಅವರನ್ನು ನೃತ್ಯ ವೇದಿಕೆಗೆ ಕರೆತಂದರು, ಭಾಗವಹಿಸಿದ ಅನೇಕರು ಭಾವಪರವಶರಾದರು. ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಕರ್ನಾಟಕ ಸಂಘ ಕತಾರ್‌ ರಘು ದೀಕ್ಷಿತ್‌ ಅವರಿಗೆ ಕರ್ನಾಟಕ ನವ್ಯ ಸಂಗೀತ ಸಾಮ್ರಾಟ್‌ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.

ಕನ್ನಡಿಗರಾದ ಸುಬ್ರಹ್ಮಣ್ಯ ಹೆಬ್ಟಾಗಿಲು ಅವರಿಗೆ ಸಮ್ಮಾನ ಈ ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಟಾಗಿಲು ಅವರನ್ನು ಗೌರವದಿಂದ ಸಮ್ಮಾನಿಸಲಾಯಿತು.

ಸೋಲರಿಯದ ಸಮಾಜಸೇವಕ ಎಂದೇ ಪ್ರಖ್ಯಾತಿ ಹೊಂದಿರುವ ಕರ್ನಾಟಕದ ಬೈಂದೂರು ಮೂಲದ ಸುಬ್ರಹ್ಮಣ್ಯ ಹೆಬ್ಟಾಗಿಲು ಅವರು ಕನ್ನಡ ಹಾಗೂ ಕನ್ನಡೇತರ ಭಾರತೀಯರಿಗೆ ತಾವು ಮಾಡುತ್ತಿರುವ ಸಮಾಜ ಸೇವೆಯನ್ನು ಶ್ಲಾ ಸಿ ಹಾಗೂ ಕರ್ನಾಟಕ ಸಂಘ ಕತಾರ್‌ ವತಿಯಿಂದ ಆಯೋಜಿಸುತ್ತಿರುವ ಪ್ರತೀ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ ಅವರನ್ನು ಕರ್ನಾಟಕ ಸಂಘ ಕತಾರ್‌ನ ಆಡಳಿತ ಮಂಡಳಿಯ ಪರವಾಗಿ ಅನಂತಾನಂತ ಧನ್ಯವಾದಗಳು. ಅವರ ಈ ಅವಿರತ ಸೇವೆ ಹೀಗೆ ಮುಂದುವರೆಯಲಿ ಎಂದು ನಮ್ಮ ಸಂಘವು ಆಶಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next