ಯಾದಗಿರಿ: ಭ್ರಷ್ಟಾಚಾರದ ಸ್ಪರ್ಧೆಯಲ್ಲಿ ಕರ್ನಾಟಕ ಸರ್ಕಾರ ಪ್ರಥಮ ಸ್ಥಾನ ಪಡೆದಿದೆ. ಐದು ವರ್ಷಗಳ ಹಿಂದೆ ಕಾಂಗ್ರೆಸ್ ಮುಖಂಡರು ಸಣ್ಣ ಮನೆಯಲ್ಲಿ ವಾಸವಾಗಿದ್ದರು. ಈಗ ಬಂಗಲೆ ಹಾಗೂ ಕಾರು ಖರೀದಿಸಿದ್ದಾರೆ. ಕೇಂದ್ರ ಸರ್ಕಾರ ನೀಡಿದ ಅನುದಾನ ಕಾಂಗ್ರೆಸ್ ಮುಖಂಡರ ಮನೆ ಸೇರಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆರೋಪಿಸಿದರು.
ಸುರಪುರ ಪಟ್ಟಣದ ದಿವಳಗುಡ್ಡದಲ್ಲಿನ ಸಜ್ಜನ್ ಮೈದಾನದಲ್ಲಿ ಆಯೋಜಿಸಿದ್ದ ಬಿಜೆಪಿ ಬೂತ್ ಮಟ್ಟದ ಯಾದಗಿರಿ, ಸುರಪುರ ಮತಕ್ಷೇತ್ರಗಳ ನವಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಯುಪಿಎ ಸರ್ಕಾರ 13ನೇ ಹಣಕಾಸು ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ 88,583 ಕೋಟಿ ರೂ. ಅನುದಾನ ನೀಡಿದರೆ, ಪ್ರಧಾನಿ ನರೇಂದ್ರ ಮೋದಿ ಅವರು 14ನೇ ಹಣಕಾಸು ಯೋಜನೆಯಡಿ 2,19,506 ಕೋಟಿ ರೂ. ಅನುದಾನ ನೀಡಿದ್ದಾರೆ. ಆ ಹಣ ಎಲ್ಲಿ ಹೋಗಿದೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ತಿಳಿಸಬೇಕು ಎಂದರು.
ಸಿದ್ದರಾಮಯ್ಯ ಅವರೇ ನಿಮಗೆ ಆಡಳಿತ ನಡೆಸಲು ಆಗದಿದ್ದರೆ ಕುರ್ಚಿಯಿಂದ ಕೆಳಗಿಳಿಯಿರಿ. ಆಡಳಿತ ಹೇಗೆ ನಡೆಸಬೇಕು ಎಂದು ನಾವು ತೋರಿಸುತ್ತೇವೆ. ಒಂದು ಕಾಲದಲ್ಲಿ ನಿಜಾಮನ ಆಡಳಿತದಲ್ಲಿದ್ದ ಹೈ.ಕ ಭಾಗ ನಂತರ ಅನೇಕ ನಾಯಕರ ಬಲಿದಾನಗಳಿಂದ ನಿಜಾಮನಿಂದ ಮುಕ್ತಿಗೊಂಡಿತು. ಆದರೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ನಿಜಾಮನ ಆಡಳಿತ ನೆನಪು ಮಾಡಿಕೊಡುತ್ತಿದೆ. ರಾಜ್ಯದಲ್ಲಿ ಸಾಲಬಾಧೆಯಿಂದ 3,781 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತ್ರಿಪುರಾ ರಾಜ್ಯದ ಚುನಾವಣೆ ಮತ ಏಣಿಕೆ ಮಾ.3ರಂದು ನಡೆಯಲಿದ್ದು, ಕಾರ್ಯಕರ್ತರು ಪಟಾಕಿ ಸಿದ್ಧಪಡಿಸಿಕೊಳ್ಳಬೇಕು. ಅಲ್ಲೂ ನಮ್ಮ ಸರ್ಕಾರ ಅ ಧಿಕಾರಕ್ಕೆ ಬರುವುದು ಶತಸಿದ್ಧ ಎಂದರು.
ನವಶಕ್ತಿ ಸಮಾವೇಶದ ಶಕ್ತಿ ಏನಿದೆ ಎಂಬುದು ಪಕ್ಷದ ಕಾರ್ಯಕರ್ತರಿಗೆ ತಿಳಿದಿದೆ. ದೇಶದಲ್ಲಿ ಇಂತಹ ನವಶಕ್ತಿ ಸಮಾವೇಶಗಳಿಂದಲೇ ಕಾಂಗ್ರೆಸ್‌ನ್ನು ಕಿತ್ತೂಗೆದಿದ್ದೇವೆ. ಕಾಂಗ್ರೆಸ್‌ನವರು ಶಕ್ತಿ ಎಂದರೆ ರ್ಯಾಲಿ ಹಾಗೂ ದೊಡ್ಡ ಸಮಾವೇಶವೆಂದು ತಿಳಿದುಕೊಂಡಿದ್ದಾರೆ. ಆದರೆ ಬೂತ್ ಮಟ್ಟದ ಕಾರ್ಯಕರ್ತರ ಶಕ್ತಿ ಏನು ಎಂಬುದು ಅವರಿಗೆ ತಿಳಿದಿಲ್ಲ. ಹೈದ್ರಾಬಾದ ಕರ್ನಾಟಕದಲ್ಲಿ ಬಿಜೆಪಿಗೆ ಕಡಿಮೆ ಸ್ಥಾನ ಸಿಗುತ್ತವೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಈ ಬಾರಿ ಚುನಾವಣೆಯಲ್ಲಿ ಹೈ.ಕ ಭಾಗದಿಂದ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾ ಧಿಸುವ ಮೂಲಕ ರಾಜ್ಯದಲ್ಲಿ ಬಿಎಸ್‌ವೈ ನೇತೃತ್ವದ ಬಿಜೆಪಿ ಅ ಧಿಕಾರಕ್ಕೆ ಬರಲು ಮೂಲ ಬುನಾದಿಯಾಗಲಿದೆ ಎಂದರು.
ಮೂರು ಗಂಟೆ ತಡವಾಗಿ ಬಂದ ಶಾ
ಸುರಪುರ ಪಟ್ಟಣದ ದಿವಳಗುಡª ಹತ್ತಿರ ಇರುವ ಸಜ್ಜನ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ನವಶಕ್ತಿ ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೂರು ಗಂಟೆ ತಡವಾಗಿ ಆಗಮಿಸಿದರು. ಸಮಾವೇಶ 12.45ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಶಾ ಆಗಮಿಸಿದಾಗ ಸಮಯ 3.45 ಗಂಟೆಯಾಗಿತ್ತು. ಸುಮಾರು 3 ಗಂಟೆಗಳ ಕಾಲ ಬೂತ್ ಮಟ್ಟದ ಕಾರ್ಯಕರ್ತರು ಕಾಯುವಂತಾಯಿತು. ಸಮಾರಂಭದಲ್ಲಿ ತಡವಾಗಿ ಆಗಮಿಸಿದ್ದಕ್ಕೆ ಆಮಿತ್ ಶಾ ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದರು.
ಐದು ವರ್ಷಗಳ ಹಿಂದೆ ಕಾಂಗ್ರೆಸ್ ಮುಖಂಡರು ಸಣ್ಣ ಮನೆಯಲ್ಲಿ ವಾಸವಾಗಿದ್ದರು. ಈಗ ಬಂಗಲೆ ಹಾಗೂ ಕಾರು ಖರೀದಿಸಿದ್ದಾರೆ. ಕೇಂದ್ರ ಸರ್ಕಾರ ನೀಡಿದ ಅನುದಾನ ಕಾಂಗ್ರೆಸ್ ಮುಖಂಡರ ಮನೆ ಸೇರಿದೆ. ಸಿದ್ದರಾಮಯ್ಯ ಅವರೇ ನಿಮಗೆ ಆಡಳಿತ ನಡೆಸಲು ಆಗದಿದ್ದರೆ ಕುರ್ಚಿಯಿಂದ ಕೆಳಗಿಳಿಯಿರಿ. ಆಡಳಿತ ಹೇಗೆ ನಡೆಸಬೇಕು ಎಂದು ನಾವು ತೋರಿಸುತ್ತೇವೆ.
– ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ