Advertisement

Karnataka ಮುಂಗಾರು ಪೂರ್ವ ಮಳೆ: ಸಿಡಿಲಿಗೆ ಇಬ್ಬರು ಸಾವು

11:28 PM May 26, 2024 | Team Udayavani |

ಹುಬ್ಬಳ್ಳಿ: ಕಲಬುರಗಿ, ಯಾದಗಿರಿ, ಕೊಪ್ಪಳ, ವಿಜಯಪುರ, ದಾವಣಗೆರೆ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸಿದ್ದು, ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

Advertisement

ಕಲಬುರಗಿ ಜಿಲ್ಲೆ ವಾಡಿ ಪಟ್ಟಣದ ಹನುಮಾನ ನಗರದ ನಿವಾಸಿಯಾದ ಪ್ರಕಾಶ ಏಕನಾಥ ವಾಘಮೂರೆ (55), ಬಿರ್ಲಾ ಏರಿಯಾ ನಿವಾಸಿ ಸತೀಶ ಪ್ರಹ್ಲಾದ್‌ ಶೇಳಕೆ (40) ಮರದ ಬಳಿ ನಿಂತಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಬಿರುಗಾಳಿ ಹೊಡೆತಕ್ಕೆ ಬಿಎಸ್‌ಎನ್‌ಎಲ್‌ ಮೊಬೈಲ್‌ ಟವರ್‌ನ ರಾಡು ಕಳಚಿ ಬಿದ್ದು ಕೂದಲೆಳೆ ಅಂತರದಲ್ಲಿ ವಿದ್ಯಾರ್ಥಿನಿಯೊಬ್ಬಳು ಪಾರಾಗಿದ್ದಾಳೆ.

ಯಾದಗಿರಿ-ಶಹಾಪುರ ರಸ್ತೆಯಲ್ಲಿ ಮರ ಉರುಳಿ ಬಿದ್ದು ಸಂಚಾರ ವ್ಯತ್ಯಯವಾಗಿತ್ತು. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ರೈತರೊಬ್ಬರ ತೋಟದಲ್ಲಿ 300 ಬಾಳೆಗಿಡಗಳು ಹಾಗೂ ಮತ್ತೊಬ್ಬ ರೈತರ ತೋಟದಲ್ಲಿ 200 ಬಾಳೆಗಿಡಗಳಿಗೆ ಹಾನಿಯಾಗಿದೆ. ಕಲಬುರಗಿಯ ಸೀತನೂರಿನಲ್ಲಿ 16 ಲಕ್ಷ ಮೌಲ್ಯದ ಬಾಳೆ, ಅಫ‌ಲ್ಪುರದಲ್ಲಿ ರೇಷ್ಮೆ ಗೂಡಿನ ಶೆಡ್‌ ಉರುಳಿ ಬಿದ್ದು 15 ಲಕ್ಷ ಮೌಲ್ಯದ ಬೆಳೆ ಹಾನಿಯಾಗಿದೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಸಿಡಿಲು ಬಡಿದು ಎಮ್ಮೆ ಮೃತಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next