Advertisement
ಇಲ್ಲಿನ ರಾಜನಗರ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ತಂಡ 20 ಓವರ್‌ಗೆ 7 ವಿಕೆಟ್ ಕಳೆದುಕೊಂಡು 154 ರನ್ ಬಾರಿಸಿತ್ತು. ಗುರಿ ಬೆನ್ನುಹತ್ತಿದ ಮೈಸೂರು ತಂಡ 19.4 ಓವರ್‌ಗೆ 7 ವಿಕೆಟ್ ಕಳೆದುಕೊಂಡು 156 ರನ್ ಬಾರಿಸಿ ಗೆಲುವು ಸಾಧಿಸಿತು.
ಆರಂಭಿಕ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್ವಾಲ್ ಸಿಡಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ಹುಬ್ಬಳ್ಳಿ ತಂಡ ಎದುರಾಳಿಗೆ 155 ರನ್ ಗುರಿ ನೀಡಿತ್ತು. ಆರಂಭಿಕರಾಗಿ ಮಾಯಾಂಕ್ ಅಗರ್ವಾಲ್ ಮತ್ತು ಅಭಿಷೇಕ್ ರೆಡ್ಡಿ ಕಣಕ್ಕೆ ಇಳಿದರು. ಆದರೆ ಈ ಜೋಡಿ 12 ರನ್ ಸೇರಿಸುತ್ತಿದ್ದಂತೆ ಅಭಿಷೇಕ್ ವಿಕೆಟ್ ಕಳೆದುಕೊಂಡರು. ನಂತರ ಬಂದ ಕೆ.ಸಿದ್ಧಾರ್ಥ (12), ಪ್ರವೀಣ್ (8) ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ಒಂದು ಕಡೆ ಮಾಯಾಂಕ್ ಕೂಡ ಭರ್ಜರಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರು. ಹೀಗಾಗಿ ಒಂದು ಕಡೆ ವಿಕೆಟ್ ಹೋಗುತ್ತಿದ್ದರೂ ಮತ್ತೂಂದುಕಡೆ ಸ್ಕೋರ್ ಏರಿಕೆಯಾಗುತ್ತಿತ್ತು.
Related Articles
Advertisement
ಮೈಸೂರು ಬಿಗು ದಾಳಿ: ಮೈಸೂರು ತಂಡದ ಬೌಲರ್‌ಗಳು ಹುಬ್ಬಳ್ಳಿ ತಂಡದ ಬ್ಯಾಟ್ಸ್‌ಮನ್‌ಗಳ ಬೆವರಿಳಿಸಿದರು. ಮಾಯಾಂಕ್ ಬಿಟ್ಟರೆ ಉಳಿದವರಿಗೆ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಅವಕಾಶ ನೀಡಲಿಲ್ಲ. ವಿಜಯ್ ಕುಮಾರ್ 2 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್, ಕೌಶಿಕ್, ಭರತ್, ಸುಚಿತ್, ಅಕ್ಷಯ್ ತಲಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:ಹುಬ್ಬಳ್ಳಿ ಟೈಗರ್: 20 ಓವರ್, 154/7 (ಮಾಯಾಂಕ್ ಅಗರ್ವಾಲ್ 68, ವಿನಯ್ ಕುಮಾರ್ 21, ವಿಜಯ್ ಕುಮಾರ್ 29ಕ್ಕೆ 2).
ಮೈಸೂರು ವಾರಿಯರ್: 19.4 ಓವರ್ ಗೆ 156/7(ಭರತ್ 52, ಅರ್ಜುನ್ 32, ಕ್ರಾಂತಿ ಕುಮಾರ್ 19ಕ್ಕೆ 2). ವಿಶ್ವನಾಥ ಕೋಟಿ