Advertisement
ವ್ಯವಸ್ಥೆಯೂ ಸುಧಾರಿಸಬೇಕುಉಡುಪಿ;ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಗೆ ಎರಡು ಬಾರಿ ಮಾತ್ರ ಶಾಸಕನಾಗಲು ಅವಕಾಶ ನೀಡಬೇಕು. ಪ್ರತೀ ಬಾರಿಯೂ ಒಬ್ಬರೇ ಶಾಸಕರಾಗುವುದರಿಂದ ಯುವಕರಿಗೆ ಅವಕಾಶ ತಪ್ಪುವುದು ಮಾತ್ರವಲ್ಲದೆ, ಶಾಸಕರ ವಲಯದಲ್ಲಿದ್ದವರೇ ಬೆಳೆಯುತ್ತಾರೆ ಎಂಬ ಭಾವನೆ ಎಲ್ಲರಲ್ಲೂ ಬಂದು ಬಿಡುತ್ತದೆ. ಹೀಗಾಗಿ ಹೊಸ ಮುಖವನ್ನು ಪರಿಚಯಿಸಿದಾಗ ಬಹುತೇಕರು ಧನಾತ್ಮಕವಾಗಿಯೇ ತೆಗೆದುಕೊಳ್ಳುತ್ತಾರೆ ಎಂಬುದು ಉಡುಪಿ ವಿಧಾನಸಭಾ ಕ್ಷೇತ್ರದ ಬಹುತೇಕರ ಅಭಿಪ್ರಾಯ.
Related Articles
ರಾಜು ಕೊಡೇರಿ
Advertisement
ಹೆಚ್ಚು ಮಂದಿಗೆ ಪ್ರಾತಿನಿಧ್ಯಕಾಪು; ಹೊಸ ಮುಖಗಳ ಪರಿಚಯ ಪಕ್ಷ ಮತ್ತು ಕ್ಷೇತ್ರದ ದೃಷ್ಟಿಯಿಂದ ಧನಾತ್ಮಕ ಬೆಳವಣಿಗೆಯಾಗಲಿದೆಯೇ ಎಂಬ ಪ್ರಶ್ನೆಗೆ ಕಾಪು ಕ್ಷೇತ್ರದ ಜನತೆ ತರಹೇವಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿ ಬದಲಾವಣೆ ಪಕ್ಷಕ್ಕೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಬಿಜೆಪಿ ದೊಡ್ಡ ಪ್ರಯೋಗ ನಡೆಸಿದೆ. ಹೊಸಬರಿಗೆ ಅವಕಾಶ ನೀಡುವುದರಿಂದ ಹೆಚ್ಚು ಜನರಿಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದಂತಾಗುತ್ತದೆ ಎಂದು ಕಟಪಾಡಿಯ ರಮೇಶ್, ರಾಘವೇಂದ್ರ ಹೇಳುತ್ತಾರೆ. ಹಿರಿಯರಿಗೆ ವಿದಾಯ ಹೇಳಿ ಹೊಸಮುಖಗಳ ಪ್ರಯೋಗ ಮಾಡುವುದು ಉತ್ತಮ ಆಲೋಚನೆಯಾದರೂ ಎಲ್ಲ ಕ್ಷೇತ್ರಗಳಲ್ಲಿ ಇದು ಉತ್ತಮ ಫಲಿತಾಂಶ ನೀಡುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಹಿಂದೆ ಕೆಲಸ ಮಾಡಿದ ಶಾಸಕರ ವೈಯಕ್ತಿಕ ವರ್ಚಸ್ಸು, ಪಕ್ಷ ಕಟ್ಟಿ ಬೆಳೆಸಿದ ಇತಿಹಾಸವನ್ನು ಮತದಾರ ಗಮನಿಸುತ್ತ ಇರುತ್ತಾನೆ. ಇದು ಚುನಾವಣೆ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂಬುದು ಹಣ್ಣಿನ ವ್ಯಾಪಾರಿ ಅಬ್ದುಲ್ ನವಾಜ್ ಅಭಿಪ್ರಾಯ. ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಬದಲಾವಣೆ ಉತ್ತಮ ಪ್ರಯೋಗ. ಹೊಸಬರಿಗೆ ಅವಕಾಶ ನೀಡಿ ಪಕ್ಷ ಸಂಘಟನೆ ಕಾರ್ಯ ಮತ್ತು ಅಭಿವೃದ್ಧಿ ಆಲೋಚನೆಗಳು ಸ್ಪಷ್ಟವಾಗಿ ಅನುಷ್ಠಾನಗೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯಪಡುತ್ತಾರೆ ಕುರ್ಕಾಲು ರಿಕ್ಷಾ ನಿಲ್ದಾಣದ ಗಣೇಶ್. ಎಲ್ಲ ರಾಜಕೀಯ ಲೆಕ್ಕಾಚಾರಗಳು ಈಗಿನ ಹೊಸ ತಲೆಮಾರಿನ ಯುವಕರು ಆಲೋಚಿಸುವ ರೀತಿಯಲ್ಲಿ ನಿರ್ಧಾರವಾಗುತ್ತದೆ. ಪಕ್ಷದ ಮುಖಂಡರು ಒಂದು ರೀತಿ ಲೆಕ್ಕಾಚಾರ ಮಾಡಿದರೆ ಮತದಾರರ
ಲೆಕ್ಕಾಚಾರವೇ ಬೇರೆ ಇರುತ್ತದೆ. ಇದು ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎನ್ನುತ್ತಾರೆ ವಿನ್ಸೆಂಟ್ ರೋಡ್ರಿಗಸ್. ಪಕ್ಷ, ವೈಯಕ್ತಿಕ ವರ್ಚಸ್ಸು ಮುಖ್ಯವಾಗಿ ಇಲ್ಲಿ ಕೆಲಸ ಮಾಡಲಿದೆ. ರಾಜಕೀಯ ನಿಂತ ನೀರಿನಂತೆ ಇರಬಾರದು. ಬದಲಾವಣೆಯನ್ನು ಹೆಚ್ಚು ಜನರು ಇಷ್ಟ ಪಡುತ್ತಾರೆ ಎಂಬುದು ಮಣಿಪುರ ಸಮೀಪದ ಚಂದ್ರ, ರಾಜ ಕಟಪಾಡಿ ಮತ್ತು ಗೋಪಾಲಕೃಷ್ಣ ಅವರ ಅನಿಸಿಕೆ.
ಆವಿನ್ ಶೆಟ್ಟಿ ಲಾಭವೂ ಇದೆ, ನಷ್ಟವೂ ಇದೆ
ಕುಂದಾಪುರ; ಇಂದಿನ ರಾಜಕೀಯ ಸನ್ನಿವೇಶ ಗಮನಿಸಿದರೆ ಶಾಸಕರ ಆಯ್ಕೆಯಲ್ಲಿ ಹೊಸ ಮುಖಗಳ ಪರಿಚಯ ಧನಾತ್ಮಕ ವಾಗಿ ಕಾಣುತ್ತಿಲ್ಲ. ಒಮ್ಮೆ ಶಾಸಕರಾಗಿ ಆಯ್ಕೆಯಾದ ಮೇಲೆ ಅವರ ಪರಿಚಯ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಉತ್ತಮವಾಗಿ ಕಾರ್ಯ ನಿರ್ವಹಿಸಿದ ಶಾಸಕರನ್ನು ಮತ್ತೂಮ್ಮೆ ಆಯ್ಕೆ ಮಾಡುವುದರಲ್ಲಿ ತಪ್ಪೆಂದು ಕಂಡು ಬರುವುದಿಲ್ಲ. ಹೊಸ ಮುಖಗಳ ಪರಿಚಯ ಋಣಾತ್ಮಕವಾಗಿ ಕಾಣುತ್ತದೆಯೇ ವಿನಾ ಧನಾತ್ಮಕವಾಗಿ ಕಂಡು ಬರುವುದಿಲ್ಲ ಎನ್ನುತ್ತಾರೆ ಕುಂದಾಪುರ ತಾ| ಬಳ್ಕೂರಿನ ನಾಗರಾಜ. ಆದರೆ ಕೋಡಿಯ ದಿನೇಶ್ ಎಸ್. ಅವರ ಅಭಿಪ್ರಾಯ ಇದಕ್ಕಿಂತ ಪೂರ್ಣ ಭಿನ್ನ. ಅಧಿಕಾರದ ಕುರ್ಚಿಯಲ್ಲಿ ಪಟ್ಟು ಹಿಡಿದು ಕುಳಿತು ತನಗೂ ವಂಶಸ್ಥರಿಗೂ ಗಾದಿ ಮುಂದುವರಿಯಬೇಕೆಂದು ಬಯಸುವವರೇ ಹೆಚ್ಚಾಗಿದ್ದಾರೆ. ಪ್ರತೀ ಬಾರಿ ಹೊಸಮುಖವನ್ನು ಪರಿಚಯಿಸಬೇಕು ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ. ಇನ್ನು ರಿಕ್ಷಾ ಚಾಲಕ ಸಂತೋಷ್, ಪ್ರಜಾಪ್ರಭುತ್ವ ಎಂದರೆ ಏನು ಸ್ವಾಮಿ? ಎಲ್ಲರಿಗೂ ಪ್ರಜಾಪ್ರತಿನಿಧಿಯಾಗಲು ಅವಕಾಶ ದೊರೆಯಬೇಕಾದರೆ ಅಭ್ಯರ್ಥಿಯನ್ನು
ಬದಲಾಯಿಸುತ್ತಲೇ ಇರಬೇಕು. ಇಲ್ಲದಿದ್ದರೆ ರಾಜರ ಕಾಲದ ವಂಶಾಡಳಿತ ಎಂದಾಗುವುದಿಲ್ಲವೇ ಎಂದು ಪ್ರಶ್ನಿಸುವ ಮೂಲಕ ತಮ್ಮ ಅಭಿಪ್ರಾಯಕ್ಕೆ ಬಲವಾದ ಸಮರ್ಥನೆಯನ್ನೂ ನೀಡುತ್ತಾರೆ. ಕ್ಷೇತ್ರ ಅಭಿವೃದ್ಧಿಯಲ್ಲಿ ಸಾಗುತ್ತಿರುವಾಗ ಅಂತಹ ಕಡೆ ಹೊಸ ಮುಖದ ಪರಿಚಯ ಧನಾತ್ಮಕವಾಗಿ ಕಾಣುವುದಿಲ್ಲ ಎನ್ನುತ್ತಾರೆ ದಿನೇಶ್ ಬಂಗೇರ ಕೋಡಿ. ರಾಜಕೀಯದಲ್ಲಿ ಹೊಸಮುಖಗಳಿಗೆ ಸ್ಥಾನ ನೀಡುವುದರಿಂದ ಹೊಸ ಯೋಜನೆಗಳೂ ಹೊಸ ಯೋಚನೆಗಳೂ ಅನುಷ್ಠಾನಗೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಹೊಸಮುಖಗಳ ಪರಿಚಯ ಧನಾತ್ಮಕ ವಾಗಿ ಕಾಣುತ್ತದೆ ಎನ್ನುತ್ತಾರೆ ಮೀನುಗಾರ ಸುಕುಮಾರ್ ಖಾರ್ವಿ. ತೀರಾ ಹೊಸಬರಾದರೆ ಕ್ಷೇತ್ರದ ಪರಿ ಚಯವೇ ಸರಿ ಇರುವುದಿಲ್ಲ. ಹೇಗೂ ಮುಂದಿನ ಬಾರಿ ಅಭ್ಯರ್ಥಿ ಬದಲು ಎಂದು ಪ್ರಗತಿಯ ಬಗ್ಗೆ ಅಷ್ಟೊಂದು ಕಾಳಜಿಯನ್ನೂ ತೋರುವುದಿಲ್ಲ ಎನ್ನುತ್ತಾರೆ ಮೀನುಗಾರ ಬಾಬು ಖಾರ್ವಿ. ಒಮ್ಮೆ ಆಯ್ಕೆಯಾದವರಿಗೆ ಮರಳಿ ಅವಕಾಶ ನೀಡಬಾರದು, ಸೋತವರಿಗೆ ಇನ್ನೊಮ್ಮೆ ಅವಕಾಶ ನೀಡಬೇಕು. ಆಗ ಪಕ್ಷಕ್ಕಾಗಿ ದುಡಿದ ಸಾಮಾನ್ಯ ಕಾರ್ಯ ಕರ್ತನಿಗೂ ಅವಕಾಶ ಕಲ್ಪಿಸಿದಂತಾಗುತ್ತದೆ ಎನ್ನುತ್ತಾರೆ ದಿನಕರ ಶೆಟ್ಟಿ ಮುಂಬಾರು.
ಲಕ್ಷ್ಮೀ ಮಚ್ಚಿನ ಕೊನೇ ಕ್ಷಣದಲ್ಲಿ ಹೊಸಬರಿಗೆ ಅವಕಾಶ ಸರಿಯಲ್ಲ ಬೈಂದೂರು; ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಹೊಸಬರಿಗೆ ಅವಕಾಶ ಕೊಡುವುದು ಉತ್ತಮವಾದ ಆಯ್ಕೆ. ಹಾಗಂತ ಅನುಭವವನ್ನು ನಿರ್ಲಕ್ಷÂ ಮಾಡುವಂತಿಲ್ಲ. “ಉದಯವಾಣಿ’ಯು ಬೈಂದೂರು ಕ್ಷೇತ್ರದ ಹೆಮ್ಮಾಡಿ, ಸಂತೋಷ್‌ನಗರ, ಕಟ್‌ಬೆಲೂ¤ರು, ತಲ್ಲೂರು, ಮುಳ್ಳಿಕಟ್ಟೆ ಭಾಗದಲ್ಲಿ ಸಂಚರಿಸಿದಾಗ ಮತದಾರರು ವ್ಯಕ್ತಪಡಿಸಿದ ಅಭಿಪ್ರಾಯವಿದು. ಯುವಕರಿಗೆ ಅವಕಾಶ ನೀಡುವುದು ಉತ್ತಮ ಬೆಳವಣಿಗೆ. ಇದನ್ನು ಎಲ್ಲ ರಾಜಕೀಯ ಪಕ್ಷಗಳು ಅಳವಡಿಸಿಕೊಂಡರೆ ಒಳಿತು ಎಂಬುದು ಹೆಮ್ಮಾಡಿಯ ಸೇವಂತಿಗೆ ಬೆಳೆಗಾರ ಪ್ರಶಾಂತ್ ಭಂಡಾರಿ ಅವರ ಅಭಿಪ್ರಾಯ. ತಲ್ಲೂರಿನ ಹೂವಿನ ವ್ಯಾಪಾರಿ ಭಾಸ್ಕರ್ ಅವರ ಪ್ರಕಾರ, ಹೊಸಬರಿಗೆ ಟಿಕೆಟ್ ಕೊಡುವ ಬದಲು ಈಗಿರುವವರು ಇನ್ನೊಂದು ಅವಧಿಗೆ ಅವರು ಸೂಕ್ತವಾಗಿ ಕ್ಷೇತ್ರವನ್ನು ಮುನ್ನಡೆಸಬಲ್ಲರೋ ಅನ್ನುವುದನ್ನು ಪರಿಶೀಲಿಸಿ ಕೊಡಬೇಕು. ರಾಜಕೀಯ ನಿಂತ ನೀರಲ್ಲ. ಬದಲಾವಣೆ ಸಹಜ . ಆಗಾಗ್ಗೆ ಹೊಸ ನೀರು ಬಂದಾಗ, ಹಳೆ ನೀರು ಹರಿದು ಹೋಗಲೇಬೇಕು ಎನ್ನುತ್ತಾರೆ ಸಂತೋಷನಗರದ ಸೀತಾರಾಮ ಶೆಟ್ಟಿ. ಮುಳ್ಳಿಕಟ್ಟೆಯ ರಾಘು ಶೆಟ್ಟಿ ಅವರ ಪ್ರಕಾರ, ಹೊಸಬರಿಗೆ ಅವಕಾಶ ಕೊಡುವುದು ತಪ್ಪಲ್ಲ. ಆದರೆ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಯಾಗಿ ಘೋಷಿಸಿದರೆ ಕಷ್ಟ. ಹೊಸಬರಿಗೆ ಅವಕಾಶ ಕೊಟ್ಟರೆ ಅಭಿವೃದ್ಧಿ ದೃಷ್ಟಿಯಿಂದ ಹೊಸ -ಹೊಸ ಚಿಂತನೆ ಮೂಡಬಹುದು. ಹಳೆಯವರಿಗೆ ಟಿಕೆಟ್ ನೀಡಿದಲ್ಲಿ ಅನುಭವದಿಂದ ಒಳ್ಳೆಯ ರೀತಿ ಕಾರ್ಯನಿರ್ವಹಿಸ ಬಹುದು ಎಂಬ ಅಭಿಪ್ರಾಯ ತಲ್ಲೂರು ರಿಕ್ಷಾ ನಿಲ್ದಾಣದ ರಿಕ್ಷಾ ಚಾ ಕರಾದ ಗಣೇಶ್, ಟಿ.ಆರ್.ಕೋಟ್ಯಾನ್, ಉದಯ್, ರಾಮ,
ಸ್ಟೀಫನ್, ನಿತ್ಯಾನಂದ ಅವರಿಂದ ವ್ಯಕ್ತವಾಯಿತು. ಧನಾತ್ಮಕ ಪರಿಣಾಮ ಬೀರಬಹುದು
ಕಾರ್ಕಳ; ಹೊಸ ಪ್ರಯೋಗ ರಾಜಕೀಯ ಪಕ್ಷಗಳ ನಿಲುವಿಗೆ ಕಾರ್ಕಳ ಕ್ಷೇತ್ರ ಭಾಗದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. “ರಾಜಕೀಯ ಕೊಳಕು’ ಎನ್ನುವ ಆರೋಪ ಇಂದು- ನಿನ್ನೆಯದಲ್ಲ. ರಾಜಕೀಯದಲ್ಲಿ ಹೊಸ ಮುಖಗಳ ಪ್ರಯೋಗವು ಭರವಸೆಯ ಆಶಾಕಿರಣವಾಗಬಹುದು. ನಿಂತ ನೀರಿನಲ್ಲಿ ಕಶ್ಮಲ ಮಡುಗಟ್ಟಿದರೆ, ಹರಿಯುವ ಜಲವು ಸ್ವತ್ಛತೆಯನ್ನು ಕಾಯ್ದುಕೊಳ್ಳುತ್ತದೆ. ಹಾಗೆಯೇ ರಾಜಕೀಯ ನಿಂತ ನೀರಾಗದೆ ಹರಿಯುವ ನೀರಾಗಬೇಕು. ಬದಲಾವಣೆ ಜಗದ ನಿಯಮ, ಎಂಬಂತೆ ರಾಜಕೀಯದಲ್ಲಿ ಹೊಸ ಮುಖಗಳ ಪರಿಚಯದೊಂದಿಗೆ ಹೊಸ ವಿಚಾರಗಳಿಗೆ, ಆಲೋಚನೆಗಳಿಗೆ ಅವಕಾಶ ತೆರೆದುಕೊಳ್ಳುವುದು ಉತ್ತಮ. ಕ್ಲೀನ್ ಇಮೇಜ್ ಇರುವ, ಅಭಿವೃದ್ಧಿಗಾಗಿ ತುಡಿತವಿರುವ ಹೊಸ ಮುಖಗಳ ಪರಿಚಯವೆಂಬುದು, ಮತದಾರರ, ತನ್ಮೂಲಕ ಜನರ ಒಲುಮೆಗೆ ಪಾತ್ರವಾಗಬಹುದು. ರಾಜಕೀಯವಾಗಿ ಧನಾತ್ಮಕ ಪರಿಣಾಮ ಬೀರಬಹುದು. ಅದುವೇ ಜಾಪ್ರಭುತ್ವದ ಸೊಬಗು ಎನ್ನುತ್ತಾರೆ ಅಜೆಕಾರಿನ ಉದ್ಯಮಿ ಸತ್ಯೇಂದ್ರ ಕಿಣಿ. ಅಭಿವೃದ್ಧಿ ದೃಷ್ಟಿಯಿಂದ ಹೊಸಮುಖ ಗಳ ಪ್ರಯೋಗ ಉತ್ತಮ ಬೆಳವಣಿಗೆ. ಯುವಕರಿಗೆ ಅವಕಾಶ ನೀಡುವುದರಿಂದ ಭ್ರಷ್ಟಚಾರ ನಿಯಂತ್ರಣ ಸಾಧ್ಯ. ಕೆಲಸ
ಕಾರ್ಯಗಳು ಚುರುಕು ಪಡೆಯುತ್ತವೆ ಎಂದು ಕೃಷಿಕ ಉಪೇಂದ್ರ ನಾಯಕ್ ಅನಿಸಿಕೆ ವ್ಯಕ್ತಪಡಿಸಿದರು. ಯಾವುದೇ ಪಕ್ಷದಲ್ಲಿ ಹಿರಿಯರು ಉನ್ನತ ಸ್ಥಾನಮಾನದಲ್ಲಿದ್ದು ಒಳ್ಳೆಯ ಕೆಲಸಗಳನ್ನು ಮಾಡಿ ಮಾದರಿಯಾಗಿ ನಡೆದುಕೊಂಡಲ್ಲಿ ಅಂಥ ಹಿರಿಯರು ಕಿರಿಯರಿಗೆ ರಾಜಕೀಯದಲ್ಲಿ ಅವಕಾಶ ಮಾಡಿಕೊಡುವುದು ಖಂಡಿತವಾಗಿ ಒಳ್ಳೆಯ ನಡೆಯಾಗುತ್ತದೆ ಎನ್ನುವುದು ಚಾಲಕ ಸುರೇಶ್ ಸುವರ್ಣರ ಅಭಿಪ್ರಾಯವಾಗಿದೆ. ಹೊಸಮುಖದ ಪ್ರಯೋಗ ಸ್ವಾಗತಾರ್ಹ ಬೆಳವಣಿಗೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ವಲಯದಲ್ಲಿನ ನೈಪುಣ್ಯದ ಮಾನದಂಡದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಮತ್ತು ಇದೆಲ್ಲವು ಜನ ಸಾಮಾನ್ಯರ ಮನದಲ್ಲಿ ಧನಾತ್ಮಕ ಪರಿಣಾಮ ಬೀರಿದರೆ ಆಗ ಖಂಡಿತ ಹೊಸಮುಖದ ಪ್ರಯೋಗ ಯಶಸ್ವಿಯಾಗುತ್ತದೆ. ಈಗಂತೂ ಜಾತಿ ಆಧಾರದಲ್ಲಿ ಅಭ್ಯರ್ಥಿ ಆಯ್ಕೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜಾತಿ ರಹಿತವಾದ ಹೊಸಮುಖದ ಪ್ರಯೋಗ ಧನಾತ್ಮಕ ಪರಿಣಾಮ ಬೀರುತ್ತದೆ ಎಂಬುದು ಉದ್ಯಮಿ ರವೀಂದ್ರ ಪಾಟ್ಕರ್ ಅವರ ಅಭಿಪ್ರಾಯ. ಉದ್ಯಮಿ ಪ್ರಶಾಂತ್ ನಾಯಕ್ ಅಜೆಕಾರ್ ಅವರ ಪ್ರಕಾರ,
ಹೊಸಮುಖಗಳಿಗೆ ಅವಕಾಶ ನೀಡುವುದು ಉತ್ತಮ ಬೆಳವಣಿಗೆ. ಆದರೆ ಅಭಿವೃದ್ಧಿಯ ಬಗ್ಗೆ ಚಿಂತನೆ ಅವರಲ್ಲಿರಬೇಕು. ಸಾಮಾಜಿಕ ಕಳಕಳಿ ಇರುವ ವ್ಯಕ್ತಿಗೆ ಸ್ಪರ್ಧೆಗೆ ಅವಕಾಶ ಕಲ್ಪಿಸಬೇಕು ಎನ್ನುವುದು ಅವರ ಅಭಿಪ್ರಾಯ.
ಬಾಲಕೃಷ್ಣ ಭೀಮಗುಳಿ