Advertisement

25 ದೇಗುಲ ಅಭಿವೃದ್ಧಿಗೆ 1,143 ಕೋ.ರೂ. : ಸಚಿವೆ ಶಶಿಕಲಾ ಜೊಲ್ಲೆ

01:26 AM Feb 05, 2022 | Shreeram Nayak |

ಬೆಂಗಳೂರು: ಉತ್ತರ ಪ್ರದೇಶದ ಕಾಶಿಯಂತೆಯೇ ರಾಜ್ಯದಲ್ಲೂ ದೇಗುಲಗಳ ಅಭಿವೃದ್ಧಿಗಾಗಿ “ದೈವ ಸಂಕಲ್ಪ’ ಯೋಜನೆಯನ್ನು ಸರಕಾರ ಕೈಗೆತ್ತಿಕೊಂಡಿದೆ. ಪ್ರಧಾನಿ ಮೋದಿ ಅವರ ಕನಸಿನಂತೆ ಕಾಶಿಯನ್ನು ಅಭಿವೃದ್ಧಿಪಡಿಸಲಾಗಿದೆ. ಅದರಂತೆಯೇ ರಾಜ್ಯದಲ್ಲೂ 1,143 ಕೋಟಿ ರೂ.ಗಳ ಮೊತ್ತದಲ್ಲಿ ಎ ದರ್ಜೆಯ ದೇಗುಲಗಳನ್ನು ಅಭಿವೃದ್ಧಿ ಮಾಡುವುದಾಗಿ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

Advertisement

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಭಕ್ತರು ಭೇಟಿ ನೀಡುವ 25 ದೇವ ಸ್ಥಾನಗಳ ಸಮಗ್ರ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ರಾನ್‌ ರೂಪಿಸುವ ಯೋಜನೆ ಇದಾಗಿದೆ ಎಂದರು.

ಇದನ್ನೂ ಓದಿ:ನರೇಗಾ ಯೋಜನೆಯಿಂದ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ : ಸಚಿವ ಈಶ್ವರಪ್ಪ

ದೇವಸ್ಥಾನದ ಮೂಲಸೌಕರ್ಯ, ಒಣ ಮತ್ತು ಹಸಿ ತ್ಯಾಜ್ಯ ನಿರ್ವಹಣೆ ಸಹಿತ ಸರ್ವತೋಮುಖ ಅಭಿವೃದ್ಧಿಯೇ ಈ ಯೋಜನೆಯ ಉದ್ದೇಶವಾಗಿದೆ. ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಸೌಲಭ್ಯಗಳನ್ನು ಕಲ್ಪಿಸಬೇಕು. ಅವರು ನೀಡುವ ಕಾಣಿಕೆಗಳು ಸದುಪಯೋಗವಾಗಬೇಕು ಎನ್ನುವುದು ನಮ್ಮ ಧ್ಯೇಯವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next