ಕೊಪ್ಪಳ : ಕೇರಳ ಮಾದರಿಯ ಶಿಕ್ಷಣವೂ ರಾಜ್ಯದಲ್ಲಿಯೂ ದೊರೆಯಬೇಕಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ನಗರದಲ್ಲಿ ಕೊಪ್ಪಳ ತಾಲೂಕು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕುಸ್ಮಾ)ದಿಂದ ನಡೆದ ಶಿಕ್ಷಕರ ದಿನಾಚರಣೆ, ಉತ್ತಮ ಶಿಕ್ಷಕರ ಪ್ರಶಸ್ತಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
Advertisement
ಹಳೆ ಮೈಸೂರು, ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಭಾಗ ಶೈಕ್ಷಣಿಕವಾಗಿ ಹಿಂದುಳಿದಿದೆ. ಸರ್ಕಾರಶಾಲೆಗಳಿಗೆ ಸಾಕಷ್ಟು ಸೌಲಭ್ಯ ಒದಗಿಸಿದರೂ ಶೈಕ್ಷಣಿಕ ಪ್ರಗತಿ ಕಂಡುಬರುತ್ತಿಲ್ಲ. ಇದು ಬದಲಾಗಬೇಕಿದೆ. ಅನುದಾನ ರಹಿತ ಶಾಲೆಗಳಿಗೆ ಸವಲತ್ತು ಕೊಡಿಸುವ ಕುರಿತು ಕಲ್ಯಾಣ ಕರ್ನಾಟಕ ಮಂಡಳಿಯಲ್ಲಿ ಚರ್ಚೆಮಾಡಿದ್ದೇವೆ.
ಮಾಡಬೇಕು. ಪಾಲಕರೂ ಸಹ ಜವಾಬ್ದಾರಿ ತೆಗೆದುಕೊಳ್ಳಬೇಕು. ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣಕ್ಕೆ ಹೆಚ್ಚು ಅನುದಾನ ಕೊಡುವ ಕೆಲಸ ಮಾಡಿದ್ದೇವೆ ಎಂದರು. ಕೋಚಿಂಗ್ ಸೆಂಟರ್, ಟ್ರೇನಿಂಗ್ ಸೆಂಟರ್ ತೆರೆಯುವ ಕೆಲಸ ಮಾಡಿದ್ದೇವೆ. ನಾನು ಜಿಪಂ ಅಧ್ಯಕ್ಷನಾಗಿದ್ದಾಗ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮ ಸ್ಥಾನ ಹೊಂದಿತ್ತು. ಆದರೆ ಈಗ ಫಲಿತಾಂಶದಲ್ಲಿ 25ರ ಆಸುಪಾಸಿನಲ್ಲಿದೆ. ನಮ್ಮ ಜಿಲ್ಲೆ ಸಹ ರಾಜ್ಯದಲ್ಲಿಯೇ ಪ್ರಥಮ ಸ್ಥಾನಕ್ಕೆ ಬರುವಂತಾಗಬೇಕು ಎಂದರು.
Related Articles
Advertisement
ಇನ್‌ಸೈಟ್ಸ್ ಐಎಎಸ್ ಸಂಸ್ಥಾಪಕ ವಿನಯಕುಮಾರ ಜಿ.ಬಿ ಉಪನ್ಯಾಸ ನೀಡಿದರು. ಎಂಎಲ್‌ಸಿ ಹೇಮಲತಾ ನಾಯಕ, ಕೊಪ್ಪಳ ಬಿಇಒ ಶಂಕರಯ್ಯ ಟಿ.ಎಸ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ| ಬಸವರಾಜ ಕ್ಯಾವಟರ್, ಕುಸ್ಮಾ ಸಂಘಟನೆ ಅಧ್ಯಕ್ಷ ಶಾಹೀದಹುಸೇನ ತಹಶೀಲ್ದಾರ್, ಕಾರ್ಯದರ್ಶಿ ನಾಗರಾಜ ಗುಡಿ, ಪತ್ರಕರ್ತ ಸಿರಾಜ್ ಬಿಸರಳ್ಳಿ, ಮಂಜುನಾಥ ದಿವಟರ್ ಸೇರಿದಂತೆ ಇತರರಿದ್ದರು.