Advertisement

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ

07:00 AM Dec 02, 2018 | |

ಬೆಂಗಳೂರು: 2018ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು,ಉದಯವಾಣಿಯ ಚಿಕ್ಕಬಳ್ಳಾಪುರ ಜಿಲ್ಲಾ ವರದಿಗಾರ ಕಾಗತಿ ನಾಗರಾಜ್‌ ಮತ್ತು ಕೆ.ಆರ್‌.ಪೇಟೆ ವರದಿಗಾರ ಎಚ್‌.ಬಿ.ಮಂಜುನಾಥ್‌ ಸೇರಿದಂತೆ 50 ಮಂದಿ ಪತ್ರಕರ್ತರು ಆಯ್ಕೆಯಾಗಿದ್ದಾರೆ.

Advertisement

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು ನೇತೃತ್ವದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದ್ದು, “ಡಾ.ಬಿ.ಆರ್‌.ಅಂಬೇಡ್ಕರ್‌ ಮೂಲಕ ನಾಯಕ  ವಿಶೇಷ ಪ್ರಶಸ್ತಿ’ಗೆ ಹಿರಿಯ ಪತ್ರಕರ್ತ ಡಾ.ಸಿ.ಎಸ್‌.ದ್ವಾರಕನಾಥ್‌, ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ “ಆಂದೋಲನ ಪ್ರಶಸ್ತಿ’ಗೆ “ಕೋಲಾರ ವಾಣಿ, ಅತ್ಯುತ್ತಮ ಸಿನಿಮಾ ಪತ್ರಕರ್ತರಿಗೆ ನೀಡುವ “ಅರಗಿಣಿ ಪ್ರಶಸ್ತಿ’ಗೆ ಕನ್ನಡ ಪ್ರಭದ ಸಿನಿಮಾ ವರದಿಗಾರ ದೇಶಾದ್ರಿಹೊಸ್ಮನೆ, ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ “ಅಭಿಮಾನಿ ಪ್ರಶಸ್ತಿ’ಗೆ ಪರಮೇಶ್ವರ ಭಟ್‌, ಮಾನವೀಯತೆ ಸಮಸ್ಯೆಗೆ ನೀಡುವ “ಮೈಸೂರು ದಿಗಂತ ಪ್ರಶಸ್ತಿ’ಗೆ ಇಂದು ಸಂಜೆಯ ಜಿ.ಎನ್‌.ನಾಗರಾಜು ಆಯ್ಕೆಯಾಗಿದ್ದಾರೆ ಎಂದು ಮಾಧ್ಯಮ ಅಕಾಡೆಮಿಯ ಪ್ರಕಟಣೆ ತಿಳಿಸಿದೆ. ವಿಶೇಷ ಪ್ರಶಸ್ತಿ 50 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫ‌ಲಕ ವಾರ್ಷಿಕ ಪ್ರಶಸ್ತಿ 25 ಸಾವಿರ ನಗದು ಮತ್ತು ಪ್ರಶಸ್ತಿ ಫ‌ಲಕ ಹೊಂದಿದೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿ:
ಪ್ರೇಮಕುಮಾರ್‌ ಹರಿಯೆಬ್ಬೆ (ಪ್ರಜಾವಾಣಿ),ವಿಶ್ವನಾಥ ಸುವರ್ಣ (ಛಾಯಾಗ್ರಾಹಕರು), ಮೋಹನ್‌ ಹೆಗಡೆ ( ವಿಜಯವಾಣಿ), ಭಾನು ತೇಜ್‌ (ಎಕನಾಮಿಕ್‌ ಟೈಮ್ಸ್‌), ಬಿ.ಎಸ್‌.ಸತೀಶ್‌ ಕುಮಾರ್‌ ( ದಿ ಹಿಂದೂ), ಜಿ.ಎಂ.ರವಿಕುಮಾರ್‌ ( ಬಿ.ಟಿ.ವಿ), ಕೆ.ಎನ್‌.ಚನ್ನೇಗೌಡ (ವಿಜಯವಾಣಿ), ಮರಿಯಪ್ಪ ಕೆ.ಜಿ. (ಪ್ರಜಾವಾಣಿ), ಸಾಲೋಮನ್‌ (ಆಂದೋಲನ), ಆಯೋಶಾ ಖಾನಂ (ದೂರದರ್ಶನ), ಅಬ್ದುಲ್‌ ಖಾಲಿಕ್‌ (ಡೆಲಿ ಪಾಸಬಾಸ್‌), ಎಂ.ಅನಿಲ್‌ ಕುಮಾರ್‌ (ನ್ಯೂಸ್‌ 9), ಕೆ.ಎನ್‌.ನಾಗೇಶ್‌ ಕುಮಾರ್‌ ( ಸಿನಿಮಾ ಛಾಯಾಗ್ರಹಕರು), ಹರಿಪ್ರಸಾದ್‌ (ಟಿ.ವಿ.9), ಈಶ್ವರ್‌ ಶಿವಣ್ಣ ( ಛಾಯಾಗ್ರಹಕರು ಬೆಂಗಳೂರು ಮಿರರ್‌), ಬಸವರಾಜ  ಬೂಸಾರೆ (ಸಮಾಜ ಮುಖೀ), ಮೋಹನ್‌ ಕುಮಾರ್‌ (ಛಾಯಾಗ್ರಹಕರು), ದೊಡ್ಡ ಬೊಮ್ಮಯ್ಯ ( ಸಂಜೆ ವಾಣಿ), ರಾಮು ಪಾಟೀಲ್‌ ( ಇಂಡಿಯನ್‌ ಎಕ್ಸ್‌ ಪ್ರಸ್‌), ರಾಜು ವಿಜಾಪುರ ( ಡೆಕ್ಕನ್‌ ಹೆರಾಲ್ಡ್‌), ರಾಜು ನಾದಾಫ್ (ವಿಜಯ ಕರ್ನಾಟಕ), ಉಮೇಶ್‌ ಪೂಜಾರ್‌ (ಸವಿನುಡಿ), ಎಸ್‌.ವಿ.ಶಿವಪ್ಪಯ್ಯನ ಮಠ (ವಿಶ್ವವಾಣಿ), ಶಶಿಕುಮಾರ್‌ ಪಾಟೀಲ್‌ ( ಯುವ ರಂಗ), ಶಿವರಾಂ ಅಸುಂಡಿ (ನ್ಯೂಸ್‌ 18), ಕೆ.ಜೆ.ಸುರೇಶ್‌ ( ಪ್ರಜಾಟಿವಿ), ಪಿ.ಪರಮೇಶ್ವರ್‌ (ಸುದ್ದಿ ಮೂಲ), ಎಂ.ಪಾಷಾ ( ಈಶಾನ್ಯ ಟೈಮ್ಸ್‌), ಶರಣಪ್ಪ ಬಾಚಲಾಪುರ (ನ್ಯೂಸ್‌ 18), ಸುಭಾಷ್‌ ಹದಲೂರು (ಸುದಿನ), ಸುಲೋಚನೇಶ್‌ ಹೂಗಾರ (ಸಂಜೆ ದರ್ಪಣ), ಎಚ್‌.ಬಿ.ವೈದ್ಯನಾಥ್‌ (ನಾವಿಕ), ಪ್ರಕಾಶ್‌ ಕುಗ್ವೆ (ಪ್ರಜಾವಾಣಿ), ಕಂಕ ಮೂರ್ತಿ ( ಸಂಯುಕ್ತ ಕರ್ನಾಟಕ), ಜೆ.ಆರ್‌.ಕೆಂಚೇಗೌಡ (ಪ್ರಚೋದಯ), ಮೀರಾ ಅಯ್ಯಪ್ಪ ( ಸ್ಟಾರ್‌ ಆಫ್ ಮೈಸೂರು), ಕೆ.ಎನ್‌.ರವಿಕುಮಾರ್‌ (ಕನ್ನಡ ಪ್ರಭ), ಎಚ್‌.ಬಿ. ಮಂಜುನಾಥ್‌ (ಉದಯವಾಣಿ), ನಂದೀಶ್‌ (ನ್ಯೂಸ್‌ 18), ಪಾ.ಶ್ರೀ.ಅನಂತರಾಂ (ವಿಜಯವಾಣಿ), ವಿನ್ಸನ್‌ ಕೆನಡಿ (ವಾರ್ತಾ ಭಾರತಿ), ಕಾಗತಿ ನಾಗರಾಜ್‌ (ಉದಯವಾಣಿ), ಗಂಗಹನುಮಯ್ಯ (ಅಮೃತವಾಣಿ), ವೆಂಕಟಸ್ವಾಮಿ (ಸಂಜೆ ಸಮಾಚಾರ), ಶ್ರೀಜಾ (ಡಿಜಿಟಲ್‌ ಮೀಡಿಯಾ), ಪ್ರಕಾಶ್‌ ಶೆಟ್ಟಿ (ವ್ಯಂಗ್ಯಚಿತ್ರಕಾರ), ಸತೀಶ್‌ ಕುಮಾರ್‌ ಶೆಟ್ಟಿ( ಕಸ್ತೂರಿ), ಕೆ.ಎಸ್‌.ಜನಾರ್ಧನ್‌ ( ಈ ಸಂಜೆ), ಎನ್‌.ಎಸ್‌.ಸುಭಾಶ್ಚಂದ್ರ (ಇಂಡಿಯನ್‌ ಎಕ್ಸ್‌ಪ್ರೆಸ್‌), ಮಂಜುಶ್ರೀ ಕಾಡಕೋಳ ( ಪ್ರಜಾವಾಣಿ).

Advertisement

Udayavani is now on Telegram. Click here to join our channel and stay updated with the latest news.

Next