ಮೈಸೂರು/ಶಿವಮೊಗ್ಗ: ಮೈಸೂರು, ತುಮಕೂರು, ಶಿವಮೊಗ್ಗ ಮಹಾನಗರ ಪಾಲಿಕೆಗಳ ಒಟ್ಟು 135 ವಾರ್ಡ್ ಗಳಿಗೆ ಹಾಗೂ 29 ನಗರಸಭೆ, 53 ಪುರಸಭೆ ಮತ್ತು 20 ಪಟ್ಟಣ ಪಂಚಾಯತ್ ಗಳ ಸಹಿತ ಒಟ್ಟು 102 ನಗರ ಸ್ಥಳೀಯ ಸಂಸ್ಥೆಗಳ 2,497 ವಾರ್ಡ್ ಗಳಿಗೆ ಅ.31ರಂದು ನಡೆದಿದ್ದ ಮತದಾನದ ಫಲಿತಾಂಶ ಸೋಮವಾರ ಹೊರಬಿದ್ದಿದೆ.
ಮೈಸೂರು, ತುಮಕೂರು, ಶಿವಮೊಗ್ಗ ಮಹಾನಗರ ಪಾಲಿಕೆಗಳ ಫಲಿತಾಂಶದಲ್ಲಿ ತುಮಕೂರು, ಮೈಸೂರು ಅತಂತ್ರ ಫಲಿತಾಂಶ ಬಂದಿದ್ದರೆ, ಶಿವಮೊಗ್ಗ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಬಿದ್ದಿದೆ.
ಮೈಸೂರು ಮಹಾನಗರ ಪಾಲಿಕೆ ಅತಂತ್ರ; ಕೈ, ಜೆಡಿಎಸ್ ಮೈತ್ರಿ
ಒಟ್ಟು 65 ಮಂದಿ ಸದಸ್ಯ ಬಲ ಹೊಂದಿರುವ ಮೈಸೂರು ನಗರಪಾಲಿಕೆಯಲ್ಲಿ ಬಿಜೆಪಿ 22, ಕಾಂಗ್ರೆಸ್ 19, ಜೆಡಿಎಸ್ 18 ಹಾಗೂ ಪಕ್ಷೇತರರು 6 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿಯಲು 33 ಸದಸ್ಯ ಬಲದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೇರಲಿದೆ.
Related Articles
ತುಮಕೂರು ಮಹಾನಗರ ಪಾಲಿಕೆ ಅತಂತ್ರ; ಜೆಡಿಎಸ್, ಕಾಂಗ್ರೆಸ್ ಮೈತ್ರಿ
ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್ ಗಳಲ್ಲಿ ಜೆಡಿಎಸ್ 10, ಬಿಜೆಪಿ 12, ಕಾಂಗ್ರೆಸ್ 10 ಹಾಗೂ ಪಕ್ಷೇತರರು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಅಧಿಕಾರದ ಗದ್ದುಗೆ ಏರಲು 18 ಮ್ಯಾಜಿಕ್ ಸಂಖ್ಯೆ ಬೇಕಾಗಿದ್ದು, ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಧಿಕಾರದ ಗದ್ದುಗೆ ಏರಬಹುದಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ:
ಶಿವಮೊಗ್ಗ ಮಹಾನಗರ ಪಾಲಿಕೆ ಒಟ್ಟು 35 ವಾರ್ಡ್ ಗಳಲ್ಲಿ ಬಿಜೆಪಿ 20, ಕಾಂಗ್ರೆಸ್ 7, ಜೆಡಿಎಸ್ 1, ಎಸ್ ಡಿಪಿಐ 1 ಹಾಗೂ ಪಕ್ಷೇತರರು 5 ಸ್ಥಾನಗಳಲ್ಲಿ ಜಯ ಸಾಧಿಸಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಮ್ಯಾಜಿಕ್ ಸಂಖ್ಯೆ 18. ಈ ನಿಟ್ಟಿನಲ್ಲಿ ಬಿಜೆಪಿ ಬಹುಮತ ಪಡೆದಿದ್ದು, ಅಧಿಕಾರದ ಗದ್ದುಗೆ ಏರಲಿದೆ.
ಮೈಸೂರು ಜಿಲ್ಲೆ ಫಲಿತಾಂಶ:
ಪಿರಿಯಾಪಟ್ಟಣ ಪುರಸಭೆ:
ಪಿರಿಯಾಪಟ್ಟಣ ಪುರಸಭೆಯ 23 ವಾರ್ಡ್ ಗಳಲ್ಲಿ ಕಾಂಗ್ರೆಸ್ 8, ಜೆಡಿಎಸ್ 14, ಪಕ್ಷೇತರರು ಒಂದು ಸ್ಥಾನದಲ್ಲಿ ಜಯಭೇರಿ ಬಾರಿಸಿದ್ದಾರೆ.
ಎಚ್ ಡಿ ಕೋಟೆ ಪುರಸಭೆ:
23 ಸದಸ್ಯ ಬಲದ ಎಚ್ ಡಿ ಕೋಟೆ ಪುರಸಭೆಯಲ್ಲಿ ಕಾಂಗ್ರೆಸ್ 11, ಜೆಡಿಎಸ್ 08, ಪಕ್ಷೇತರರು 03 ಹಾಗೂ ಬಿಜೆಪಿ 1 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ.
ಟಿ ನರಸೀಪುರ ಪುರಸಭೆ:
23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ 10, ಜೆಡಿಎಸ್ 3, ಪಕ್ಷೇತರರು 6 ಹಾಗೂ ಬಿಜೆಪಿ 4 ವಾರ್ಡ್ ಗಳಲ್ಲಿ ಗೆಲುವಿನ ನಗು ಬೀರಿದೆ.
ಒಟ್ಟು ಮೈಸೂರು ಜಿಲ್ಲೆಯ 134 ವಾರ್ಡ್ ಗಳಲ್ಲಿ 27 ಬಿಜೆಪಿ, ಕಾಂಗ್ರೆಸ್ 48, ಜೆಡಿಎಸ್ 43 ಹಾಗೂ ಪಕ್ಷೇತರರು 16 ಮಂದಿ ಜಯಗಳಿಸಿದ್ದಾರೆ.
ತುಮಕೂರು ಜಿಲ್ಲೆ ಫಲಿತಾಂಶ:
ಮಧುಗಿರಿ ಪುರಸಭೆ:
ಮಧುಗಿರಿ ಪುರಸಭೆಯ 23 ವಾರ್ಡ್ ಗಳಲ್ಲಿ ಕಾಂಗ್ರೆಸ್ 13, ಜೆಡಿಎಸ್ 9 ಹಾಗೂ ಪಕ್ಷೇತರ 1 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ಪುರಸಭೆ:
23 ಸದಸ್ಯ ಬಲದ ಚಿಕ್ಕನಾಯಕನಹಳ್ಳಿ ಪುರಸಭೆಯಲ್ಲಿ 5 ಬಿಜೆಪಿ, ಕಾಂಗ್ರೆಸ್ 2, ಜೆಡಿಎಸ್ 14, ಪಕ್ಷೇತರರು 2 ವಾರ್ಡ್ ಗಳಲ್ಲಿ ಜಯಗಳಿಸಿದ್ದಾರೆ.
ಗುಬ್ಬಿ ಪಟ್ಟಣ ಪಂಚಾಯತ್:
19 ಮಂದಿ ಸದಸ್ಯ ಬಲದ ಗುಬ್ಬಿ ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ 6, ಕಾಂಗ್ರೆಸ್ 2, ಜೆಡಿಎಸ್ 10, ಪಕ್ಷೇತರರು ಒಂದು ವಾರ್ಡ್ ನಲ್ಲಿ ಜಯ ಸಾಧಿಸಿದ್ದಾರೆ.
ಕೊರಟಗೆರೆ ಪಟ್ಟಣ ಪಂಚಾಯತ್:
ಹಾಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಕ್ಷೇತ್ರವಾದ ಕೊರಟಗೆರೆ ಪಟ್ಟಣ ಪಂಚಾಯತ್ ನಲ್ಲಿ ಕಾಂಗ್ರೆಸ್ ಈ ಬಾರಿ ಅಧಿಕಾರ ಕಳೆದುಕೊಂಡಿದೆ. 15 ಸದಸ್ಯ ಬಲದ ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ 1, ಕಾಂಗ್ರೆಸ್ 5, ಜೆಡಿಎಸ್ 8 ಹಾಗೂ ಪಕ್ಷೇತರರು 1 ವಾರ್ಡ್ ನಲ್ಲಿ ಗೆಲುವು ಸಾಧಿಸಿದ್ದಾರೆ.