Advertisement
ಕೇರಳ ಕರ್ನಾಟಕ ಗಡಿಭಾಗದಲ್ಲಿ ಕೊಟ್ಯಾಡಿ ಪ್ರದೇಶವು ಕರ್ನಾಟಕ ಪ್ರದೇಶಕ್ಕೆ ಸೇರಿದಾಗಿದೆ. ಈ ಪ್ರದೇಶದಲ್ಲಿ ಕೇರಳ ಲೋಕೋಪಯೋಗಿ ರಸ್ತೆ ಹಾದು ಹೋಗುತ್ತಿದೆ. ಪಳ್ಳತ್ತೂರು ಮತ್ತು ಕೊಟ್ಯಾಡಿ ಎಂಬಲ್ಲಿ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ಇಲ್ಲಿನ ನೆಟ್ಟಣಿಗೆ ಮುಟ್ನೂರು ಗ್ರಾಮದವರು ರಾಜ್ಯದ ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ರಿಯಾಯಿತಿ ನೀಡುತ್ತಿರುವ ಪೊಲೀಸರ ಕಟ್ಟುನಿಟ್ಟು ಕ್ರಮ ಗ್ರಾಮಸ್ಥರನ್ನು ತೊಂದರೆಗೆ ಸಿಲುಕಿಸಿದೆ, ನೆಟ್ಟಣಿಗೆ ಮುಟ್ನೂರು ಗ್ರಾಮಕ್ಕೆ ಸಂಬಂಧಿಸಿದ ಪ್ರದೇಶಗಳಾದ ಕೊಟ್ಯಾಡಿ, ಗಾಳಿಮುಖ, ಕಟ್ಟಪುಣಿ, ಗೋಳಿತ್ತಡಿ, ಸರೋಳಿ, ಪುದಿಯವಪ್ಪು ಇತ್ಯಾದಿ ಭಾಗಗಳಿಗೆ ಪಳ್ಳತ್ತೂರು ಮುಖಾಂತರ ಕೇರಳ ಲೋಕೋಪಯೋಗಿ ರಸ್ತೆಯಲ್ಲಿ ಸಂಚರಿಸಬೇಕು. ಜನರಿಗೆ ಪಂಚಾಯತ್ ಕಛೇರಿ, ಸರಕಾರಿ ಆಸ್ಪತ್ರೆ, ಪಶು ಆಸ್ಪತ್ರೆ, ಅಂಚೆ ಕಛೇರಿ, ಮೆಸ್ಕಾಂ ಕಚೇರಿಗೆ ಈಶ್ವರಮಂಗಲವನ್ನೇ ಅವಲಂಬಿಸಿದ್ದಾರೆ. ಆದರೆ ಕೇರಳ ರಾಜ್ಯದ ಪೊಲೀಸ್ ಇಲಾಖೆಯಿಂದ ಗಾಳಿಮುಖ, ಕೊಟ್ಯಾಡಿ ಎಂಬಲ್ಲಿ ಗ್ರಾಮಸ್ಥರನ್ನು ತಡೆ ಹಿಡಿಯಲಾಗಿದೆ. ಆದರೆ ಕೇರಳ ರಾಜ್ಯ ದೇಲಂಪಾಡಿ ಗ್ರಾಮದವರು ನಮ್ಮ ರಾಜ್ಯದ ರಸ್ತೆಯ ಮೂಲಕ ಸಂಚರಿಸುತ್ತಿದ್ದಾರೆ. ಅದರಿಂದ ಗ್ರಾಮದ ಜನರಿಗೆ ಕೊಟ್ಯಾಡಿಯಿಂದ ಲೋಕೋಪಯೋಗಿ ರಸ್ತೆಯಲ್ಲಿ ಸಂಚರಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಡಳಿತ ಅಧಿಕಾರಿಗಳಲ್ಲಿ ವಿನಂತಿ ಮಾಡಿಕೊಳ್ಳಲಾಗಿದೆ.ಒಂದುವೇಳೆ ಕ್ರಮಕೈಗೊಳ್ಳದಿದ್ದರೆ ಗಡಿಭಾಗವನ್ನು ಬಂದ್ ಮಾಡುವಂತೆ ಗ್ರಾಮಸ್ಥರು ಮನವಿಯಲ್ಲಿ ಆಗ್ರಹಿಸಿದ್ದಾರೆ. Advertisement
ಕೇರಳ ರಸ್ತೆ ಬಂದ್: ಅತಂತ್ರರಾದ ಗ್ರಾಮಸ್ಥರು,ಬಂದ್ ತೆರವಿಗೆ ಜಿಲ್ಲಾಧಿಕಾರಿಗಳಿಗೆ ಮನವಿ
04:43 PM Aug 20, 2020 | sudhir |
Advertisement
Udayavani is now on Telegram. Click here to join our channel and stay updated with the latest news.