Advertisement
ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲು 3,000 ಅರ್ಜಿಗಳು ಸಲ್ಲಿಕೆಯಾಗಿದ್ದು, ಆ ಪೈಕಿ 850 ಅರ್ಜಿ ವಿಲೇವಾರಿ ಮಾಡಲಾಗಿದೆ. ಅರ್ಜಿ ಸಲ್ಲಿಕೆಯಾದ 2 ಗಂಟೆಯೊಳಗೆ ಪಾಸ್ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಂಗಳೂರು ಉಪವಿಭಾಗಾಧಿ ಕಾರಿ ಮದನ್ ಮೋಹನ್ ತಿಳಿಸಿದ್ದಾರೆ.
ಉದ್ದೇಶಪೂರ್ವಕ ಯಾರಿಗೂ ಪಾಸ್ ನಿರಾಕರಿಸುತ್ತಿಲ್ಲ. ಇದು ಎರಡು ಜಿಲ್ಲೆಗಳ ನಡುವಿನ ಸಂಚಾರ ಮಾತ್ರವಲ್ಲದೆ, ಎರಡು ರಾಜ್ಯಗಳ ನಡುವಿನ ಸಂಚಾರವಾಗಿದೆ. ಹಾಗಾಗಿ ಹೆಚ್ಚಿನ ಮುಂಜಾಗರೂಕತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಅರ್ಜಿ ಸಲ್ಲಿಸುವಾಗ ವಿಳಾಸ ದೃಢೀಕರಿಸುವ ಆಧಾರ್ ಅಥವಾ ಇತರ ಗುರುತುಪತ್ರ ಸಲ್ಲಿಸದಿರುವುದರಿಂದ ಪಾಸ್ ನಿರಾಕರಣೆ ಯಾಗಿದೆ. ಕಟ್ಟಡ ಕೆಲಸಗಳಿಗೆ ಬರುವವರು ನಿರ್ಮಾಣ ಸಂಸ್ಥೆ ಅಥವಾ ಕೆಲಸ ಮಾಡಿಸುತ್ತಿ ರುವವರಿಂದ ಅಧಿಕೃತ ಪತ್ರವನ್ನು ಅಪ್‌ಲೋಡ್ ಮಾಡಬೇಕು. ಕೆಲವು ಮಂದಿ ಅವರ ದಾಖಲೆಗಳಲ್ಲಿ ಮಂಗಳೂರಿನ ವಿಳಾಸವನ್ನು ನೀಡಿದ್ದಾರೆ. ಹಾಗಾಗಿ ತಿರಸ್ಕೃತಗೊಂಡಿದೆ ಎಂದು ಮದನ್ ಮೋಹನ್ ಅವರು ತಿಳಿಸಿದ್ದಾರೆ. ಜೂ. 30ರ ವರೆಗೆ ಅವಧಿ
ಪಾಸ್ ನೀಡುತ್ತಿರುವುದು ವೃತ್ತಿ ಸಂಬಂದ ಸಂಚಾರಕ್ಕಾಗಿ. ಅದರ ಅವಧಿ ಜೂ. 30ರ ವರೆಗೆ ಇರುತ್ತದೆ. ಒಂದು ವೇಳೆ ಸಂಬಂಧಿಕರ ಮನೆಗೆ ಬಂದು ನಿಲ್ಲುವುದಾದರೆ ಅಥವ ದ.ಕ. ಜಿಲ್ಲೆಯಿಂದ ಸದ್ಯಕ್ಕೆ ವಾಪಸ್ ಹೋಗುವುದಿಲ್ಲವೆಂದಾದರೆ ಸೇವಾ ಸಿಂಧು ಆ್ಯಪ್ ಮೂಲಕ ಪಾಸ್ ಪಡೆಯಬೇಕು. ಅವರಿಗೆ ಹೋಂ ಕ್ವಾರಂಟೈನ್ ಇರುತ್ತದೆ. ನಾವು ನೀಡುವ ದೈನಂದಿನ ಪಾಸ್ ಪಡೆದು ಬರುವವರಿಗೆ ಸಾಂಸ್ಥಿಕ ಅಥವಾ ಹೋಂ ಕ್ವಾರಂಟೈನ್ ಇರುವುದಿಲ್ಲ. ಪಾಸ್‌ನಲ್ಲಿ ಬಾರ್‌ಕೋಡ್ ಇರುವುದರಿಂದ ಪಾಸ್ ಪಡೆದವರು ಜಿಲ್ಲೆ ಯಿಂದ ವಾಪಸಾಗಿದ್ದಾರೆಯೇ ಅಥವಾ ಉಳಿದುಕೊಂಡಿದ್ದಾರೆಯೇ ಎಂಬ ಮಾಹಿತಿ ಲಭ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
Related Articles
ಕರ್ನಾಟಕ ಸರಕಾರ ರಾಜ್ಯ ಪ್ರವೇಶಕ್ಕೆ ಅನುಮತಿಸಿದರೂ ದ.ಕ. ಜಿಲ್ಲಾಡಳಿತ ಕಾಸರ ಗೋಡಿ ನವರಿಗೆ ಪಾಸ್ ನಿರಾಕರಿಸುತ್ತಿರುವುದಾಗಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಅವರು ಇದೇ ವೇಳೆ ಅರೋಪಿಸಿದ್ದಾರೆ.
Advertisement
ಒಂದೇ ಜಿಲ್ಲೆಯ ಪಾಸ್ ಸಾಕುಯಾವ ಜಿಲ್ಲೆಗೆ ತೆರಳುತ್ತಾರೋ ಆ ಜಿಲ್ಲೆಯ ಆಡಳಿತದ ಅನುಮತಿ ಪಡೆದರೆ ಸಾಕು. ಕಾಸರಗೋಡಿನಿಂದ ದ.ಕ.ಕ್ಕೆ ಬಂದು ಕಾಸರಗೋಡಿಗೆ ವಾಪಸಾಗುವವರು ದ.ಕ.ಜಿಲ್ಲೆಯ ಹಾಗೂ ದ.ಕದಿಂದ ಕಾಸರಗೋಡಿಗೆ ತೆರಳಿ ದ.ಕ. ಜಿಲ್ಲೆಗೆ ವಾಪಸಾಗುವವರು ಕಾಸರಗೋಡು ಜಿಲ್ಲೆಯ ಆಡಳಿತದಿಂದ ಪಾಸ್ ಪಡೆದರೆ ಸಾಕು ಎಂದು ಎಸಿ ಮದನ್ ಮೋಹನ್ ತಿಳಿಸಿದ್ದಾರೆ.