Advertisement
ಮಂಗಳೂರು ವಿ.ವಿ. ಮತ್ತು ಪೂರ್ಣಪ್ರಜ್ಞ ಕಾಲೇಜಿನ ಜಂಟಿ ಆಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ಅಖೀಲ ಭಾರತ ಅಂತರ್ ವಿ.ವಿ. ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಟಕ್ಕೆ ಅವರು ಗುರುವಾರ ಚಾಲನೆ ನೀಡಿ ಮಾತನಾಡಿದರು.
Related Articles
Advertisement
ಅದಮಾರು ಶಿಕ್ಷಣ ಪರಿಷ್ಠಾನದ ಅಧ್ಯಕ್ಷರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಶ್ರೀ ವಿಬುಧೇಶತೀರ್ಥ ಶ್ರೀಪಾದರು ತಮ್ಮ ದೂರದೃಷ್ಟಿಯ ಚಿಂತನೆಯೊಂದಿಗೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ, ಎಲ್ಲ ರೀತಿಯ ತರಬೇತಿ ನೀಡಲು ಪ್ರೇರಣೆಯಾದರು. ಕ್ರೀಡೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದರು.
ಭಾರತೀಯ ವಿ.ವಿ. ಸಂಘದ ಜಂಟಿ ಕಾರ್ಯದರ್ಶಿ ಡಾ| ಬಲ್ಜಿತ್ ಸಿಂಗ್ ಮಾತನಾಡಿ, ಮೊಟ್ಟ ಮೊದಲ ಬಾರಿಗೆ ಏಷ್ಯನ್ ವಾಲಿಬಾಲ್ ಪಂದ್ಯಾಟವನ್ನು ಭಾರತದಲ್ಲಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅಂತರ್ ವಿ.ವಿ. ಮಟ್ಟದಲ್ಲಿ ಆಡುತ್ತಿರುವ ಕೆಲವು ಆಟ ಗಾರರು ಮುಂದೆ ದೇಶವನ್ನು ಪ್ರತಿನಿಧಿಸಲಿದ್ದಾರೆ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಭ ಕೋರಿ ದರು. ಆಡಳಿತಾಧಿಕಾರಿ ಡಾ| ಎ.ಪಿ.ಭಟ್, ಕಾಲೇ ಜಿನ ಕೋಶಾ ಧಿ ಕಾರಿ ಪ್ರಶಾಂತ ಹೊಳ್ಳ ಟಿ., ಕ್ರೀಡಾಕೂಟದ ಅಧ್ಯಕ್ಷ ಹಾಗೂ ಮಂಗಳೂರು ವಿ.ವಿ. ಕುಲಸಚಿವ ಡಾ| ಕಿಶೋರ್ ಕುಮಾರ್ ಸಿ.ಕೆ., ಸಂಘಟನ ಕಾರ್ಯದರ್ಶಿ ಡಾ| ಜೆರಾಲ್ಡ್ ಸಂತೋಷ್ ಡಿ’ಸೋಜಾ, ಸಂಯೋಜಕ ಸುಕುಮಾರ ಉಪಸ್ಥಿತರಿದ್ದರು.
ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ| ಜಿ.ಎಸ್. ಚಂದ್ರಶೇಖರ್ ಸ್ವಾಗತಿಸಿ ಪ್ರಾಂಶುಪಾಲ ಡಾ| ರಾಘವೇಂದ್ರ ಎ. ವಂದಿಸಿದರು. ವಾಣಿಜ್ಯ ವಿಭಾಗದ ಸಂದೀಪ್ ಶೆಟ್ಟಿ ನಿರೂಪಿಸಿದರು.
ಮಂಗಳೂರು ವಿ.ವಿ.ಗೆ ಜಯಉದ್ಘಾಟನೆಯ ಅನಂತರ ರಾಜ್ಯಪಾಲ ಗೆಹ್ಲೋಟ್ ಮತ್ತು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಆಟ ಗಾರರನ್ನು ಪ್ರೋತ್ಸಾಹಿಸಿ, ಮೈದಾನದಲ್ಲಿ ಗಿಡ ನೆಟ್ಟರು. ಅನಂತರ ನಡೆದ ಪಂದ್ಯಾವಳಿಯಲ್ಲಿ ಮಂಗಳೂರು ವಿ.ವಿ. ತಂಡವು ಪುಣೆಯ ಭಾರತಿ ವಿ.ವಿ. ವಿರುದ್ಧ 3-1 ಅಂತರದಲ್ಲಿ ಜಯ ಸಾಧಿಸಿತು.