Advertisement
ಕಾಂಗ್ರೆಸ್ ಎಂಎಲ್ ಸಿ ಗೋವಿಂದರಾಜು ಅವರ ನಿವಾಸದಲ್ಲಿ ದೊರಕಿದೆ ಎನ್ನಲಾದ ಡೈರಿಯಲ್ಲಿ ಸ್ಟೀಲ್ ಫ್ಲೈಓವರ್ ಸಂಬಂಧ ಸಿಎಂ ಕುಟುಂಬಕ್ಕೆ 65 ಕೋಟಿ ರೂಪಾಯಿ ಕಪ್ಪಕಾಣಿಕೆ ಸಂದಾಯವಾಗಿದೆ ಎಂಬ ವಿಷಯ ಬಹಿರಂಗವಾಗಿತ್ತು. ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪ್ರತಿತಂತ್ರ ಹೂಡಿರುವ ಸಿಎಂ ಅವರು ಸ್ಟೀಲ್ ಫ್ಲೈ ಓವರ್ ಯೋಜನೆ ರದ್ದುಪಡಿಸುವ ನಿರ್ಧಾರವನ್ನು ಕೈಗೊಂಡಿದ್ದು, ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಬೇಕಿದೆ ಎಂದು ಈ ಮೊದಲು ವರದಿಯಾಗಿತ್ತು.
Related Articles
Advertisement
ಸಭೆಯಲ್ಲಿ ಬೆಂಗಳೂರು ಶಾಸಕರ ವಿರೋಧ:ಇಂದು ಬೆಳಗ್ಗೆ ವಿಧಾನಸೌಧದಲ್ಲಿ ಬೆಂಗಳೂರು ಶಾಸಕರ ಜೊತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರು ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಬೆಂಗಳೂರು ಶಾಸಕರು ಸ್ಟೀಲ್ ಬ್ರಿಡ್ಜ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆಗ ಜಾರ್ಜ್ ಅವರು ಸಭೆಯಿಂದ ಎದ್ದು ಹೋಗಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಮೊಬೈಲ್ ನಲ್ಲಿ ಸಂಭಾಷಣೆ ನಡೆಸಿದ್ದರು. ಆ ವೇಳೆ, ಬೆಂಗಳೂರು ಶಾಸಕರಿಗೆ ಬೇಡ ಅಂದ್ರೆ, ನಮಗೂ ಬೇಡ, ಯೋಜನೆ ರದ್ದುಪಡಿಸುವ ಬಗ್ಗೆ ಸೂಚನೆ ನೀಡಿದ್ದರು. ಜನರ ಹೋರಾಟಕ್ಕೆ ಜಯ:ಬಿಎಸ್ ವೈ
ಕೊನೆಗೂ ರಾಜ್ಯ ಸರ್ಕಾರ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಕೈಬಿಟ್ಟಿರುವುದು ರಾಜ್ಯದ ಜನರ ಹೋರಾಟಕ್ಕೆ ಸಂದ ಜಯವಾಗಿದೆ. ನಾನು ಈ ಹೋರಾಟ ಇಲ್ಲಿಗೆ ನಿಲ್ಲಿಸುವುದಿಲ್ಲ. ಇದು ಸಂಸದ ರಾಜೀವ್ ಚಂದ್ರಶೇಖರ್, ಜನರು ಹಾಗೂ ಮಾಧ್ಯಮಗಳಿಗೆ ಸಂದ ಜಯ, ನನಗಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.