ಬೆಂಗಳೂರು: ರಾಜ್ಯದ ಬಿಜೆಪಿ ರಾಷ್ಟ್ರೀಯ ಬಿಜೆಪಿ ಹಾಗು ರಾಜ್ಯಪಾಲರು ಸೇರಿ ಜನಾದೇಶವನ್ನು ಧಿಕ್ಕರಿಸಿ, ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿದಾಯ ಹೇಳುತ್ತಿದ್ದಾರೆ. ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲಿ ರಾಜ್ಯಪಾಲರು ತರಾತುರಿಯಲ್ಲಿ ಮಾಡುವಂತೆ ಪತ್ರ ಬರೆದು ಸದನದ ಸಾರ್ವಭೌಮತ್ವ ಅರಿಯದೆ ಚರ್ಚೆ ಮೊಟಕುಗೊಳಿಸಿ ತರಾತುರಿಯಲ್ಲಿ ವಿಶ್ವಾಸ ಮತಯಾಚನೆ ಮಾಡುವಂತೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವಿಎಸ್ ಉಗ್ರಪ್ಪ ಆರೋಪಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಿಧಾನಸಭೆಯ ಸಂಖ್ಯೆ 225 ಅದರಲ್ಲಿ ಮೂವರು ಅನರ್ಹಗೊಂಡಿದ್ದಾರೆ. ಉಳಿದವರು 222 ಇದೆ. ಯಾವುದೇ ಸರ್ಕಾರ ರಚನೆಯಾಗಬೇಕಾದರೆ 112 ಸಂಖ್ಯೆ ಇದ್ದರೆ ಮಾತ್ರ ರಾಜ್ಯಪಾಲರು ಅಂತಹ ಪಕ್ಷವನ್ನು ಕರೆಯುವ ಅಧಿಕಾರ ಇದೆ ಎಂದರು.
ಈಗ ಬಿಜೆಪಿ ಸಂಖ್ಯೆ 105, ಕಾಂಗ್ರೆಸ್ -ಜೆಡಿಎಸ್ ಸಂಖ್ಯೆ 101 ಇದೆ. ಹದಿಮೂರು ಶಾಸಕರ ಅನರ್ಹ ಪ್ರಕರಣ ಇನ್ನೂ ಬಾಕಿ ಇದೆ. ಅಲ್ಪ ಮತದ ಪಕ್ಷಕ್ಕೆ ರಾಜ್ಯಪಾಲರು ಅವಕಾಶ ನೀಡುತ್ತಿದ್ದಾರೆ. ರಾಜ್ಯಪಾಲರು ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಅವರಿಗೆ ಸ್ಪಷ್ಟ ಬಹುಮತ.ಇಲ್ಲ. ಮೇಲ್ನೋಟಕ್ಕೆ ರಾಜ್ಯಪಾಲರು ಅವರ ಸಂಖ್ಯಾ ಬಲವನ್ನು.ಕೇಳಬೇಕಿತ್ತು.ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ನೀಡುತ್ತಿರುವ ಪ್ರವೃತ್ತಿಯನ್ನು ಖಂಡಿಸುತ್ತೇವೆ ಎಂದು ಹೇಳಿದರು.
2018 ರಲ್ಲಿಯೂ ಬಿಜೆಪಿಗೆ ಅವಕಾಶ ಕೊಟ್ಟಿದ್ದು ತಪ್ಪು, ಆಗ ಹದಿನೈದು ದಿನ ಕೊಟ್ಟರು. ರಾಜ್ಯಪಾಲರ ನಡೆ ಸಂವಿಧಾನ ಬಾಹಿರ. ಇದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.