Advertisement
ಶಾಲೆಗಳಲ್ಲಿ ತಳಿರು-ತೋರಣಗಳಿಂದ ಅಲಂಕಾರ ಮಾಡಿ, ಬಣ್ಣದ ಪೇಪರ್‌ಗಳು, ಆಕರ್ಷಕ ಗೊಂಬೆಗಳನ್ನು ಅಳ ವಡಿಸಿ ಚಿಣ್ಣರನ್ನು ಸೆಳೆಯಲು ಶಿಕ್ಷಕರು ಪ್ರಯತ್ನಿಸಿದ್ದು ಕಂಡುಬಂತು.
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಪೂರ್ವ ಪ್ರಾಥಮಿಕ ತರಗತಿಗಳು ಸೋಮವಾರ ಆರಂಭವಾಗಿವೆ. ಜತೆಗೆ ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಯನ್ವಯ ಸೋಮವಾರದಿಂದ 2021-22ನೇ ಸಾಲಿನ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ಇದನ್ನೂ ಓದಿ:12ರ ವರೆಗೂ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ
Related Articles
ರಾಜ್ಯಾದ್ಯಂತ ಎಲ್ಲ ಹಂತದ ಭೌತಿಕ ತರಗತಿಗಳು ಆರಂಭಗೊಂಡಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.
Advertisement
ಸೋಮವಾರ 1ನೇ ತರಗತಿಗೆ ಶೇ. 29.21ರಷ್ಟು, 2ನೇ ತರಗತಿಗೆ ಶೇ.26.31, 3ನೇ ತರಗತಿಗೆ ಶೇ.24.82, 4ನೇ ತರಗತಿಗೆ ಶೇ.25.31, 5ನೇ ತರಗತಿಗೆ ಶೇ.25.82, 6ನೇ ತರಗತಿಗೆ ಶೇ. 30.64, 7ನೇ ತರಗತಿಗೆ ಶೇ.30.27, 8ನೇ ತರಗತಿಗೆ ಶೇ.38.09, 9ನೇ ತರಗತಿಗೆ ಶೇ.40.51 ಮತ್ತು 10ನೇ ತರಗತಿಗೆ ಶೇ.40.66ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ಪ್ರಕಟನೆ ತಿಳಿಸಿದೆ.