Advertisement

ಮಳೆ ಹಾನಿ : ಪರಿಹಾರ ಪಡೆದವರಿಗೆ ಮತ್ತೆ ಪರಿಹಾರ ಇಲ್ಲ: ರಾಜ್ಯ ಸರ್ಕಾರ

11:30 AM Aug 03, 2022 | Team Udayavani |

ಬೆಂಗಳೂರು : ಕಳೆದ ಮೂರು ವರ್ಷದಲ್ಲಿ ಸಂಭವಿಸಿದ ಮಳೆಯಿಂದ ಮನೆ ಕಳೆದುಕೊಂಡು‌ ಪರಿಹಾರ ಪಡೆದವರ ಮನೆಗೆ ಈ ವರ್ಷ ಮತ್ತೆ ಹಾನಿಯಾದರೆ ಪರಿಹಾರ‌ ಕೊಡುವಂತಿಲ್ಲ‌ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ.

Advertisement

ಈ ಬಗ್ಗೆ ಕೆಲವು ಜಿಲ್ಲಾಧಿಕಾರಿಗಳು ಪತ್ರ ಬರೆದು ಸ್ಪಷ್ಟನೆ ನೀಡಿದ ಹಿನ್ನೆಲೆಯಲ್ಲಿ  ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ವಿಭಾಗದಿಂದ ಈ ಸ್ಪಷ್ಟನೆ ನೀಡಲಾಗಿದೆ.

2019, 2020, 2021 ನೇ ವರ್ಷದಲ್ಲಿ ಎ ಅಥವಾ ಬಿ ಕೆಟಗರಿಯಲ್ಲಿ ಪರಿಹಾರ ಪಡೆದಿರುವ ಸಂತ್ರಸ್ತರ ಮನೆಗಳಿಗೆ ಈ ಸಾಲಿನಲ್ಲಿ‌ ಮತ್ತೆ ಪರಿಹಾರ‌ ನೀಡುವುದಕ್ಕೆ ಅವಕಾಶವಿಲ್ಲ.

ಆದರೆ ಈ ವರ್ಷಗಳಲ್ಲಿ ಅಲ್ಪಸ್ವಲ್ಪ ಹಾನಿಗೊಳಗಾದ ಸಿ ಕೆಟಗರಿಯಲ್ಲಿ  ಐವತ್ತು ಸಾವಿರ ರೂ. ಪಡೆದ ಮನೆಗಳಿಗೆ ಈ ಬಾರಿ ಎ,ಬಿ,ಸಿ ವಿಭಾಗದಲ್ಲಿ ಪರಿಹಾರ ಪಾವತಿಸಬಹುದು.

ವಾಸದ ಮನೆ ಅಧಿಕೃತವಾಗಿದ್ದರೆ ಮಾತ್ರ ನಿಯಮಾನುಸಾರ ಪರಿಹಾರ ನೀಡಬಹುದು. ಆದರೆ ಜಮೀನಿನಲ್ಲಿ‌ ಕಟ್ಟಿರುವ ತೋಟದ ಮನೆ, ಸರಕಾರಿ ಜಾಗ, ಗೋಮಾಳಗಳಲ್ಲಿ ಕಟ್ಟಿರುವ ಮನೆ ಅನಧಿಕೃತವಾಗಿದ್ದಲ್ಲಿ ನಿಯಮಾನುಸಾರ ಪ್ರತಿಜ್ಞಾ ಪತ್ರ ಸ್ವೀಕರಿಸಿ 1 ಲಕ್ಷ ರೂ. ಎಕ್ಸ್ ಗ್ರೇಷಿಯಾ ಪಾವತಿಸಬಹುದು.

Advertisement

ಸರಕಾರಿ ವಸತಿ ಯೋಜನೆಗಳಲ್ಲಿ ನಿರ್ಮಾಣ ಕೆಲಸ ಪೂರ್ಣಗೊಂಡ ಮನೆಗಳು ಹಂಚಿಕೆಯಾಗಿ ಜನವಾಸ್ತವ್ಯ ಇದ್ದ ಸಂದರ್ಭದಲ್ಲಿ ಎ,ಬಿ,ಸಿ ವಿಭಾಗ ಮಾಡಿ ಪರಿಹಾರ ನೀಡಬೇಕು ಎಂದು ಆದೇಶ ಸ್ಪಷ್ಟಪಡಿಸಿದೆ.

ಇದನ್ನೂ ಓದಿ : ಇನ್ನಷ್ಟು ದುಬಾರಿ: CNG ಬೆಲೆ ಕೆಜಿಗೆ 6 ರೂಪಾಯಿ, ಪಿಎನ್ ಜಿ ಬೆಲೆ ಯೂನಿಟ್ ಗೆ 4 ರೂ. ಹೆಚ್ಚಳ

Advertisement

Udayavani is now on Telegram. Click here to join our channel and stay updated with the latest news.

Next