ಕನಕಪುರ:ಗುರುವಾರ ನಾಮಪತ್ರ ಸಲ್ಲಿಸಿರುವ ಡಿ.ಕೆ.ಶಿವಕುಮಾರ್‌ಗೆ ಕನಕಪುರದಿಂದ ದಿಲ್ಲಿಯವರೆಗೂ ಆಸ್ತಿಯಿದೆ .ಅವರಿಗೆ ಕನಕಪುರ ತಾಲೂಕಿನ ಕೋಡಿಹಳ್ಳಿ, ಗರಳಾಪುರ, ದೇಶುವಳ್ಳಿ, ಆಲಹಳ್ಳಿ,ಮಹಿಮನಹಳ್ಳಿ, ಸಾತನೂರು, ಮಕಲಂದ, ಆನೇಕಲ್ ತಾಲೂಕು ಮತ್ತು ಕೆಂಗೇರಿ ಬಳಿಯ ಬಿ.ಎಂ.ಕಾವಲ್‌ನಲ್ಲಿ ಕೃಷಿ ಭೂಮಿ ಇದೆ.
ಉತ್ತರಹಳ್ಳಿ ಹೋಬಳಿಯ ವಿಶ್ವೇಶ್ವರಯ್ಯ ಕೈಗಾರಿಕಾ ಲೇಔಟ್, ಭೂಪಸಂದ್ರ, ಮೈಸೂರು ನಜರಾಬಾದ್ ಮೊಹಲ್ಲ, ಕನಕಪುರ
ಪಟ್ಟಣಗಳಲ್ಲಿ ಕೃಷಿಯೇತರ ಭೂಮಿ ಇದೆ.
ಕನಕಪುರ ತಾಲೂಕು ಮರಳೇಬೇಕುಪ್ಪೆ ಗ್ರಾಮದಲ್ಲಿ ಗ್ರಾನೈಟ್ ಉಳ್ಳ ಭೂಮಿ,ಬೆಂಗಳೂರು ಉತ್ತರ ಹಳ್ಳಿಯಲ್ಲಿ ವಸತಿಗಾಗಿ
ಪರಿವರ್ತನೆಯಾದ ಭೂಮಿ,ದೊಡ್ಡಾಲಹಳ್ಳಿಯಲ್ಲಿ ವಸತಿ ನಿವೇಶನ,ಕೋಡಿಹಳ್ಳಿ ಹೋಬಳಿ ಹುನಸಣಹಳ್ಳಿಯಲ್ಲಿ ವಾಣಿಜ್ಯ ಬಳಕೆಗೆ ಭೂಮಿ ಇದೆ. ದೆಹಲಿಯ ಕೃಷ್ಣಾನಗರದ ಸ್ಟಾಫ್ ಕ್ವಾರ್ಟರ್, ಸಫಾªರ್ ಜಂಗ್ ಎನ್‌ಕ್ಲೇವ್‌ನಲ್ಲಿ 4.82 ಕೋಟಿ ರೂ. ಹಾಲಿ ಮಾರುಕಟ್ಟೆ ಮೌಲ್ಯದ ವಸತಿ ಕಟ್ಟಡಗಳಿವೆ.
ಬೆಂಗಳೂರು ಕೆ.ಆರ್.ಪುರ ಹೋಬಳಿಯ ಬೆನ್ನಿಗನಹಳ್ಳಿಯ ಪುರಾಮಿಡ್ ಟೌನ್ ಅಪಾರ್ಟಮೆಂಟ್ಸ್‌ನಲ್ಲಿ ಮಾರಾಟವಾಗದೆ ಉಳಿದುಕೊಂಡಿರುವ ಫ್ಲಾಟ್‌ಗಳು ಇವೆ.
ಅವರ ಆಸ್ತಿಯ ಒಟ್ಟೂ ಮೌಲ್ಯ 619 ಕೋಟಿ ರೂ. (ಚರಾಸ್ಥಿ 70.95 ಕೋಟಿ ಮತ್ತು ಸ್ಥಿರಾಸ್ತಿ 548.80 ಕೋಟಿ ರೂ.) ಅವರ ಕುಟುಂಬ ಸದಸ್ಯರ ಒಟ್ಟು ಆಸ್ತಿ ಮೌಲ್ಯ 800 ಕೋಟಿ ರೂ.ಗೂ ಅಧಿಕ.ಅಲ್ಲದೆ, ಅವರ ಬಳಿ 2. 184 ಕೆಜಿ ಚಿನ್ನಾಭರಣ, 12.600 ಕೆಜಿ ಬೆಳ್ಳಿ,1.26 ಕೋಟಿ ರೂ ಮೌಲ್ಯದ ವಜ್ರ, ಮಾಣಿಕ್ಯ,9 ಲಕ್ಷ ರೂ.ಬೆಲೆ ಬಾಳುವ ರೋಲೆಕ್ಸ್ ಕೈಗಡಿಯಾರವಿದೆ.