Advertisement
2017-18ನೇ ಸಾಲಿನ ಪರಿಷ್ಕೃತ ವಿದ್ಯುತ್ ದರವನ್ನು ಕೆಇಆರ್ ಸಿ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
Related Articles
30 ಯೂನಿಟ್ ವರೆಗೆ 2 ರೂ. 90 ಪೈಸೆಯಿಂದ 3 ರೂ. 15 ಪೈಸೆಗೆ ಏರಿಕೆಯಾಗಿದ್ದರೆ, 31ರಿಂದ 100 ಯೂನಿಟ್ ವರೆಗೆ 4 ರೂ. 10 ಪೈಸೆಯಿಂದ 4 ರೂ 40ಪೈಸೆಗೆ ಏರಿಕೆಯಾಗಿದ್ದರೆ, 101ರಿಂದ 200 ಯೂನಿಟ್ ವರೆಗೆ 5 ರೂ. 60 ಪೈಸೆಯಿಂದ 5 ರೂ. 95ಪೈಸೆಗೆ ಏರಿಕೆಯಾಗಿದೆ. 200 ಯೂನಿಟ್ ಮೇಲ್ಪಟ್ಟು 6 ರೂ. 40 ಪೈಸೆಯಿಂದ 6 ರೂ. 80 ಪೈಸೆಗೆ ಏರಿಕೆಯಾಗಿದೆ.
Advertisement
ಕೈಗಾರಿಕೆಗೆ:ಎಲ್‍ಟಿ ಕೈಗಾರಿಕೆ 10 ಪೈಸೆಯಿಂದ ರಿಂದ 20 ಪೈಸೆಯಾಗಿದೆ. ಮೊದಲ 500 ಯೂನಿಟ್‍ಗೆ 5 ರೂ. 10 ಪೈಸೆಯಿಂದ 5 ರೂ. 25 ಪೈಸೆಗೆ ಏರಿಕೆಯಾಗಿದ್ದರೆ, 500 ಯೂನಿಟ್ ಮೇಲ್ಪಟ್ಟು 6 ರೂ. 30 ಪೈಸೆಯಿಂದ 6 ರೂ 50 ಪೈಸೆಗೆ ಏರಿಕೆಯಾಗಿದೆ. ಬೆಸ್ಕಾಂ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಎಚ್‍ಟಿ ಪ್ರತಿ ಯೂನಿಟ್‍ಗೆ 20 ಪೈಸೆಯಿಂದ ರಿಂದ 40 ಪೈಸೆ ಹೆಚ್ಚಳವಾಗಿದ್ದರೆ, ಎಲ್‍ಟಿ ವಾಣಿಜ್ಯ ಬಳಕೆಯ ಪ್ರತಿ ಯೂನಿಟ್‍ಗೆ 35 ಪೈಸೆ ಹೆಚ್ಚಳವಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ನಗರ ಪ್ರದೇಶದ ಕೈಗಾರಿಕಾ ಬಳಕೆಗೆ ಮೊದಲ 500 ಯೂನಿಟ್ ಗೆ 5.10 ರಿಂದ 5.25 ಕ್ಕೆ ಏರಿಕೆಯಾಗಿದೆ. 500 ಯೂನಿಟ್ ಮೀರಿದ ಬಳಕೆಗೆ 6.30 ರಿಂದ 6.50 ಕ್ಕೆ ಏರಿಕೆಯಾಗಿದೆ.