Advertisement

ಪ. ಘಟ್ಟ  ತಪ್ಪಲು ಮತದಾರರಿಗೆ ವಾಹನ ವ್ಯವಸ್ಥೆ

07:00 AM May 04, 2018 | |

ಉಡುಪಿ: ಮತದಾನ ಪ್ರಮಾಣ ಹೆಚ್ಚಳದೊಂದಿಗೆ, ಎಲ್ಲರನ್ನೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ತೊಡಗಿಸುವ ಉದ್ದೇಶ ಚುನಾವಣಾ ಆಯೋಗದ್ದು. ಇದಕ್ಕಾಗಿ ಜಿಲ್ಲೆಯ ಪಶ್ಚಿಮ ಘಟ್ಟ ತಪ್ಪಲು ಪ್ರದೇಶಗಳು ಸೇರಿದಂತೆ ದುರ್ಗಮ ಪ್ರದೇಶಗಳ ಮತದಾರರನ್ನು ಮತಗಟ್ಟೆಗೆ ತರಲು ಜಿಲ್ಲಾಡಳಿತದಿಂದಲೇ ವಾಹನ ವ್ಯವಸ್ಥೆಗೆ ಜಿಲ್ಲಾಡಳಿತ ಯೋಜನೆ ಹಾಕಿಕೊಂಡಿದೆ. 
 
28 ಮತಗಟ್ಟೆಗಳು
ಕುಂದಾಪುರ ತಾಲೂಕಿನ 16, ಕಾರ್ಕಳದ 7 ಮತ್ತು ಉಡುಪಿಯ 2 ಗ್ರಾ.ಪಂ.ಗಳ ವ್ಯಾಪ್ತಿಯ ದುರ್ಗಮ ಪ್ರದೇಶದ ಜನರು ಮತದಾನಕ್ಕೆ ಬಹುದೂರ ಬರಬೇಕಿದೆ. ಪ್ರತಿಯೊಂದು ಗ್ರಾ.ಪಂ.ನಲ್ಲಿ ಸರಾಸರಿ 4ರಿಂದ 5 ಮತಗಟ್ಟೆಗಳಂತೆ ಸುಮಾರು 28 ಮತಗಟ್ಟೆಗಳು ಇಂತಹ ಪ್ರದೇಶದಲ್ಲಿವೆ. ಇವುಗಳ ವಿವರ ನೀಡಲು ಗ್ರಾ.ಪಂ. ಪಿಡಿಒಗಳು ಕಾರ್ಯಪ್ರವೃತ್ತರಾಗಿದ್ದಾರೆ.

Advertisement

ದುರ್ಗಮ ಪ್ರದೇಶಗಳು
ಕುಂದಾಪುರ ತಾಲೂಕಿನ ಹಳ್ಳಿಹೊಳೆ, ಕೆರಾಡಿ, ಹೆಂಗವಳ್ಳಿ, ಅಮಾಸೆಬೈಲು, ಹೊಸಂಗಡಿ, ಎಡಮೊಗೆ, ಸಿದ್ದಾಪುರ, ಜಡ್ಕಲ್‌, ಕೊಲ್ಲೂರು, ಕಾಲೊ¤àಡು, ಶಂಕರನಾರಾಯಣ, ಮಡಾಮಕ್ಕಿ, ಬೆಳ್ವೆ, ಹಾಲಾಡಿ, 74ನೇ ಉಳ್ಳೂರು, ಗೋಳಿಹೊಳೆ, ಇಡೂರು ಕುಂಜಾಡಿ, ಚಿತ್ತೂರು, ಕಾರ್ಕಳ ತಾಲೂಕಿನ ವರಂಗ, ಕೆರ್ವಾಶೆ, ಶಿರ್ಲಾಲು, ಮಾಳ, ಮುದ್ರಾಡಿ, ಈದು ಹಾಗೂ ಉಡುಪಿ ತಾಲೂಕಿನ ನಾಲ್ಕೂರು ಮತ್ತು ಆವರ್ಸೆ ಗ್ರಾ.ಪಂ.ಗಳನ್ನು ದುರ್ಗಮ ಪ್ರದೇಶಗಳೆಂದು ಗುರುತಿಸಲಾಗಿದೆ. 

ದುರ್ಗಮವೆಂದರೇನು?
ಮತಗಟ್ಟೆ ಕೇಂದ್ರದಿಂದ ಕನಿಷ್ಠ 5 ಕಿ.ಮೀ. ದೂರದ ಅನಂತರ ಮನೆಗಳಿ ದ್ದರೆ ಅಂತಹ ಮತಗಟ್ಟೆಗಳನ್ನು ದುರ್ಗಮ ಪ್ರದೇಶದ ಮತಗಟ್ಟೆಗಳೆಂದು ಗುರುತಿಸಲಾಗುತ್ತಿದೆ.

ಮತಗಟ್ಟೆ ಕಟ್ಟಡಕ್ಕೊಂದು ಗಾಲಿಕುರ್ಚಿ
ಅಂಗವಿಕಲರು ಸೇರಿದಂತೆ ಅಶಕ್ತರಿಗೆ ಮತಗಟ್ಟೆಗಳಲ್ಲಿ ಗಾಲಿಕುರ್ಚಿ ವ್ಯವಸ್ಥೆಗೆ ಸಿದ್ಧತೆ ನಡೆದಿದೆ. ಸುಮಾರು 681 ಕಟ್ಟಡಗಳಲ್ಲಿ ಪ್ರತಿ ಕಟ್ಟಡಕ್ಕೆ 2-3 ಮತಗಟ್ಟೆ ಇರುತ್ತವೆ. ಕನಿಷ್ಠ ಒಂದು ಕಟ್ಟಡಕ್ಕೆ ಒಂದು ಗಾಲಿಕುರ್ಚಿಯ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ಆರೋಗ್ಯ ಇಲಾಖೆ 376, ಗ್ರಾ.ಪಂ.ಗಳು 175 ಗಾಲಿಕುರ್ಚಿ ಹೊಂದಿಸಿವೆ. ಇನ್ನೂ 175 ಗಾಲಿಕುರ್ಚಿ ಅಗತ್ಯ ವಿದ್ದು ಮತದಾನದ ದಿನ ಹೊಂದಿಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

– ವಿಶೇಷ ವರದಿ

Advertisement
Advertisement

Udayavani is now on Telegram. Click here to join our channel and stay updated with the latest news.

Next