Advertisement

Congress; ಕಾಂಗ್ರೆಸ್‌ನ ಮೂವರಿಂದ ಕೊನೇ ಚುನಾವಣೆಯ ಜಪ; ಕಡೇ ಚುನಾವಣೆ ದಯವಿಟ್ಟು ಗೆಲ್ಲಿಸಿ

11:52 AM Apr 22, 2023 | Team Udayavani |

ಮಂಗಳೂರು: ಬಹುತೇಕ ರಾಜಕಾರಣಿಗಳಿಗೆ ತಮ್ಮ ಕೊನೆಯ ಚುನಾವಣೆಯನ್ನು ಭರ್ಜರಿ ಜಯದೊಂದಿಗೆ ಸಂಭ್ರಮಿಸುವ ಬಯಕೆ ಇರುತ್ತದೆ. ಪ್ರತೀ ಚುನಾವಣೆಯಲ್ಲೂ ರಾಜ್ಯದ ವಿವಿಧೆಡೆ ಇದ್ದೇ ಇರುತ್ತಾರೆ. ಈ ಬಾರಿ ಕರಾವಳಿಯಲ್ಲಿ ಮೂವರು ಹಿರಿಯರು “ಇದು ನಮ್ಮ ಕಡೇ ಚುನಾವಣೆ ಗೆಲ್ಲಿಸಿ ದಯವಿಟ್ಟು’ ಎಂದು ಮತದಾರರ ಮುಂದೆ ಹೋಗುತ್ತಿದ್ದಾರೆ.

Advertisement

ಒಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಚಿವ ಬಿ.ರಮಾನಾಥ ರೈ. ಇನ್ನೊಬ್ಬರು ಮೂಲತಃ ದ.ಕ. ಜಿಲ್ಲೆಯವರಾದ ಕಾಂಗ್ರೆಸ್‌ನ ವಿನಯಕುಮಾರ್‌ ಸೊರಕೆ ಪ್ರಸ್ತುತ ಕಾಪು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇನ್ನೋರ್ವರು ಬೈಂದೂರಿನ ಕಾಂಗ್ರೆಸ್‌ ಅಭ್ಯರ್ಥಿ ಗೋಪಾಲ ಪೂಜಾರಿ ಕೂಡ ತಮ್ಮ ಕೊನೆಯ ಚುನಾವಣೆ ಎನ್ನುತ್ತಿದ್ದಾರೆ.

ಈ ಮೂವರ ಪೈಕಿ ಹಿರಿಯರು ರಮಾನಾಥ ರೈ. ಅವರಿಗೆ ಈಗ 70 ವರ್ಷ. ಈ ಬಾರಿ ಕಾಂಗ್ರೆಸ್‌ನಲ್ಲಿ ಚುನಾವಣೆಗೆ ನಾಲ್ಕಾರು ತಿಂಗಳ ಹಿಂದೆಯೇ ಅಭಿಪ್ರಾಯ ಸಂಗ್ರಹದ ವೇಳೆ ಹಿರಿಯರಿಗೆ ಟಿಕೆಟ್‌ ಬೇಡ ಎಂಬ ಮಾತು ಕೇಳಿಬಂದಿತ್ತು. ಆಗ ಸಹಜವಾಗಿಯೇ ರಮಾನಾಥ ರೈ ಅವರಿಗೆ ಟಿಕೆಟ್‌ ತಪ್ಪುವ ಭೀತಿ ಇತ್ತು. ಆದರೆ ಅವರು ಕೊನೆಯ ಚುನಾವಣೆ ಎಂದು ಉನ್ನತ ನಾಯಕರಿಗೆ
ಮನವರಿಕೆ ಮಾಡಿದ್ದರಿಂದ ಅವಕಾಶ ಸಿಕ್ಕಿತು. 1985ರಿಂದ ಸಕ್ರಿಯ ರಾಜಕಾರಣ ದಲ್ಲಿರುವ ಅವರು ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿ ನಿರಂತರ 4 ಬಾರಿ ಗೆದ್ದರು. ಈ ವರೆಗೆ ಒಟ್ಟು 6 ಬಾರಿ ಶಾಸಕರಾಗಿದ್ದಾರೆ. ಸಚಿವರಾಗಿ ವಿವಿಧ ಖಾತೆಗಳನ್ನೂ ನಿರ್ವಹಿಸಿದ್ದರು.

ಪುತ್ತೂರು ಸೊರಕೆಯವರಾದ ವಿನಯ ಕುಮಾರ್‌ ಸೊರಕೆಯವರಿಗೂ 63 ವರ್ಷ. ಪುತ್ತೂರಿನಲ್ಲಿ ಮೊದಲ ಚುನಾವಣೆಯಲ್ಲೇ(1985) ಗೆದ್ದರು. 1989ರಲ್ಲಿ ಪುನರಾಯ್ಕೆ ಕಂಡರು. 1994ರಲ್ಲಿ ಸೋತರೂ ಬಳಿಕ ಉಡುಪಿಯಿಂದ 1999ರಲ್ಲಿ ಸಂಸದರಾದರು. 2004ರಲ್ಲಿ ಸೋತ ಬಳಿಕ 2013ರಲ್ಲಿ ಮತ್ತೆ ರಾಜ್ಯ ರಾಜಕೀಯಕ್ಕೆ ಮರಳಿದರು, ಕಾಪುವಿನಿಂದ ಗೆದ್ದು ನಗರಾಭಿವೃದ್ಧಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.

ಇನ್ನು ಗೋಪಾಲ ಪೂಜಾರಿ ಮೂಲತಃ ಬೈಂದೂರು ಕಲ್ಮಾಡಿಯವರಾಗಿದ್ದು, ಕೆಲವು ಕಾಲ ಮುಂಬಯಿಯಲ್ಲಿದ್ದು, ಬಳಿಕ ಊರಿಗೆ ಮರಳಿ ಹೊಟೇಲ್‌ ಉದ್ಯಮದಲ್ಲಿ ಡಗಿಸಿಕೊಂಡವರು. ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರ ಶಿಷ್ಯ. 1994ರಲ್ಲಿ
ಕೆಸಿಪಿ ಪಕ್ಷದಿಂದ ಸ್ಪರ್ಧಿಸಿ ಮೊದಲ ಚುನಾವಣೆ ಎದುರಿಸಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದರೆ 1998ರ
ಉಪಚುನಾವಣೆಯಲ್ಲಿ ಗೆದ್ದರು. 1994, 2004, 2013ರಲ್ಲಿ ಗೆದ್ದರು. 2018ರಲ್ಲಿ ಬಿಜೆಪಿಯ ಸುಕುಮಾರ ಶೆಟ್ಟಿ ವಿರುದ್ಧ ಸೋಲು ಕಂಡ ಗೋಪಾಲ ಪೂಜಾರಿ ಅವರಿಗೀಗ 63 ವರ್ಷ.

Advertisement

ಬಿಜೆಪಿಯಲ್ಲಿ ಯಾರೂ ಇಲ್ಲ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿಯಲ್ಲಿ ಕೊನೆಯ ಚುನಾವಣೆ ಎನ್ನುವ ಮಾತನ್ನು ಪಕ್ಷದ ಯಾವೊಬ್ಬ
ಅಭ್ಯರ್ಥಿಯೂ ಹೇಳುತ್ತಿಲ್ಲ. ಯಾಕೆಂದರೆ 6 ಬಾರಿ ಶಾಸಕರಾಗಿದ್ದ ಅಂಗಾರ ಅವರಿಗೆ ಸ್ಪರ್ಧಿಸಲು ಇಚ್ಛೆಯಿತ್ತಾದರೂ ಪಕ್ಷವೇ
ಅಭ್ಯರ್ಥಿಯನ್ನು ಬದಲಿಸಿತು. ಉಳಿದಂತೆ ಬಹುತೇಕ ಎಲ್ಲರೂ ಯುವ ಮತ್ತು ಮಧ್ಯವಯಸ್ಕರೇ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next