Advertisement

ಬಸವತತ್ವ, ವಚನಗಳನ್ನು ಒಪ್ಪುವವರಿಗೆ ಮಾತ್ರ ಮಾನ್ಯತೆ: ಟಿಬಿಜೆ

04:37 PM Mar 19, 2018 | Team Udayavani |

ಬೆಂಗಳೂರು: ಕರ್ನಾಟಕ ಅಲ್ಪಸಂಖ್ಯಾತ ಕಾಯ್ದೆಯ ಸೆಕ್ಷನ್ 2(ಡಿ), ಕೇಂದ್ರ ಅಲ್ಪಸಂಖ್ಯಾತ ಕಾಯ್ದೆ 2(ಸಿ) ಪ್ರಕಾರ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಶಿಫಾರಸು ಮಾಡಲಾಗಿದೆ. ಬಸವ ತತ್ವ, ವಚನಗಳನ್ನು ಒಪ್ಪುವವರಿಗೆ ಅಲ್ಪಸಂಖ್ಯಾತ ಧರ್ಮಕ್ಕೆ ಮಾನ್ಯತೆ ಎಂದು ಸಚಿವ ಟಿಬಿ ಜಯಚಂದ್ರ ಅವರು ತಿಳಿಸಿದರು.

Advertisement

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ನಡೆದಿದ್ದು, ಸಭೆಯಲ್ಲಿ ನ್ಯಾ.ನಾಗಮೋಹನ್ ದಾಸ್ ಸಮಿತಿ ನೀಡಿದ್ದ ವರದಿಯನ್ನು ಅಂಗೀಕರಿಸಿತ್ತು. ಅಲ್ಲದೇ ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಲು ಸಂಪುಟ ಸಭೆ ಒಮ್ಮತದ ನಿರ್ಧಾರ ಕೈಗೊಂಡಿತ್ತು.

ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜಯಚಂದ್ರ ಅವರು, ಬಸವಣ್ಣನೇ ಧರ್ಮಗುರು, ವಚನಗಳೇ ಧರ್ಮಗ್ರಂಥ ಎಂದು ಶಿಫಾರಸು ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಶಿಫಾರಸನ್ನು ಓದಿದರು. ವೀರಶೈವ ಲಿಂಗಾಯತರು ಅಲ್ಪಸಂಖ್ಯಾತ ಲಿಂಗಾಯತರ ಭಾಗ. ವೀರಶೈವ ಪರಂಪರೆ ಪ್ರತಿಪಾದಕರಿಗೆ ಇಲ್ಲಿ ಅವಕಾಶವಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next