ಬೆಂಗಳೂರು: ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಕರೆ ನೀಡಿರುವ “ಕರ್ನಾಟಕ ಬಂದ್’ಗೆ ಕೇವಲ ಒಂದು ದಿನ ಬಾಕಿ ಇದೆ. ಬಹುತೇಕ ಕನ್ನಡಪರ ಸಂಘಟನೆಗಳು ಈ ಬಂದ್‌ನಿಂದ ಅಂತರ ಕಾಯ್ದುಕೊಂಡಿದೆ.
ಬಂದ್‌ಗೆ ಕನ್ನಡ ಒಕ್ಕೂಟ, ಕನ್ನಡ ಚಳವಳಿ ಪಕ್ಷ, ಡಾ| ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಕರುನಾಡ ಸೇನೆ, ರಾಜ್ಯ ರೈತ ಸಂಘ ಹಸಿರುಸೇನೆ, ಬೆಂಗಳೂರು ಆದರ್ಶ ಆಟೋ ಯೂನಿಯನ್, ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘಟನೆ ಮತ್ತಿತರ ಒಕ್ಕೂಟಗಳು ಬೆಂಬಲ ವ್ಯಕ್ತಪಡಿಸಿವೆ. ಆದರೆ ಕರ್ನಾಟಕ ರಕ್ಷಣ ವೇದಿಕೆ (ನಾರಾಯಣ ಗೌಡ ಬಣ), ಒಲಾ-ಉಬರ್ ಟ್ಯಾಕ್ಸಿ ಚಾಲಕರು ಮತ್ತು ಮಾಲಕರ ಸಂಘ, ಹೊಟೇಲ್ ಮಾಲಕರ ಸಂಘ, ಪೀಸ್ ಆಟೋ, ಬಟ್ಟೆ ಅಂಗಡಿ ಮಾಲಕರ ಸಂಘ, ಕರ್ನಾಟಕ ರಾಜ್ಯ ಟ್ರಾವೆಲ್ ಮಾಲಕರ ಸಂಘ, ವಿವಿಧ ಕೈಗಾರಿಕಾ ಸಂಘಟನೆಗಳು “ನೈತಿಕ ಬೆಂಬಲ’ಕ್ಕೆ ಸೀಮಿತಗೊಂಡಿವೆ.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ವಿವಿಯಂತೆ ಕಾರ್ಯ ನಿರ್ವಹಿಸುತ್ತಿರುವ ಗೋಶಾಲೆ: ಪ್ರಭು ಚೌಹಾಣ್
ಈ ಮಧ್ಯೆ ರಾತ್ರಿ ಕರ್ಫ್ಯೂ ಹಾಗೂ ಹೊಸ ವರ್ಷಾ ಚರಣೆಗೆ ಕಠಿನ ನಿರ್ಬಂಧಗಳನ್ನು ವಿಧಿಸಿದ್ದರಿಂದ ಈ ಹಿಂದೆ ಬೆಂಬಲ ವ್ಯಕ್ತಪಡಿಸಿದ ಕೆಲವರು ಕೊನೆಯ ಕ್ಷಣದಲ್ಲಿ ನಿಲುವು ಬದಲಿಸಿದ್ದಾರೆ. ಉಳಿದಂತೆ ಸಾರ್ವ ಜನಿಕ ಸಾರಿಗೆಗಳು, ನಮ್ಮ ಮೆಟ್ರೋ, ಖಾಸಗಿ ಸಾರಿಗೆ ಸೇವೆಗಳು ಎಂದಿನಂತೆ ಇರಲಿವೆ ಎಂದು ಆಯಾ ಸಂಘಟನೆಗಳು ಹೇಳಿವೆ. ಇದರಿಂದಾಗಿ “ಕರ್ನಾಟಕ ಬಂದ್’ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟತೆ ಇಲ್ಲದಂತಾಗಿದೆ.
ಸಂಕಷ್ಟದ ಸಂದರ್ಭದಲ್ಲಿ ಬಂದ್‌ಗೆ ಕರೆ ನೀಡುವುದು ಸರಿಯಲ್ಲ. ಕನ್ನಡ ನಾಡು- ನುಡಿ- ಭಾಷೆ ವಿಚಾರದಲ್ಲಿ ಕನ್ನಡಪರ ಸಂಘಟನೆಗಳ ಬಹುತೇಕ ಬೇಡಿಕೆಯನ್ನು ಈಡೇರಿಸಿದ್ದೇವೆ. ಜ.31ರಂದು ಕರೆ ನೀಡಿರುವ ಬಂದ್ ಹಿಂಪಡೆಯಿರಿ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ