Advertisement

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

11:40 AM Jan 10, 2025 | Team Udayavani |

ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿಗಳ ಘೋಷಣೆಯಾಗಿದ್ದು ತೆಂಕತಿಟ್ಟು ಯಕ್ಷಗಾನ ಕಲಾವಿದ ಬಂಟ್ವಾಳದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ ತಲ್ಲೂರು ಶಿವರಾಮ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

Advertisement

2024ನೇ ಸಾಲಿನ ಗೌರವ ಪ್ರಶಸ್ತಿಗೆ ಬೆಳ್ತಂಗಡಿಯ ಕೊಳ್ತಿಗೆ ನಾರಾಯಣ ಗೌಡ, ಕುಂದಾಪುರದ ಕೋಡಿ ವಿಶ್ವನಾಥ ಗಾಣಿಗ, ಬಂಟ್ಚಾಳದ ರಾಘವ ದಾಸ್, ಬಂಟ್ವಾಳದ ಸುಬ್ರಾಯ ಹೊಳ್ಳ, ತುಮಕೂರಿನ ಕಾಂತರಾಜು ಅವರನ್ನು ಆಯ್ಕೆ ಮಾಡಲಾಗಿದೆ.

10 ಕಲಾವಿದರಿಗೆ ಯಕ್ಷಸಿರಿ ಪ್ರಶಸ್ತಿ:
– ಹಿರಿಯ ಅರ್ಥಧಾರಿ ಕಾಸರಗೋಡಿನ ಅಡ್ಕ ಗೋಪಾಲಕೃಷ್ಣ ಭಟ್
– ಯಕ್ಷಗಾನ ಕಲಾವಿದ ಜಗನ್ನಾಥ ಆಚಾರ್ಯ ಎಳ್ಳಂಪಳ್ಳಿ ಬಡಗುತಿಟ್ಟು
– ಮವ್ವಾರು ಬಾಲಕೃಷ್ಣ ಮಣಿಯಾಣಿ ತೆಂಕುತಿಟ್ಟು, ಹಾಸ್ಯಗಾರ, ಕಾಸರಗೋಡು
– ಉಮೇಶ್ ಕುಪ್ಪೆಪದವು ತೆಂಕುತಿಟ್ಟು. ಬಣ್ಣದ ವೇಷಧಾರಿ, ಮಂಗಳೂರು
– ಶಿವಾನಂದ ಗೀಜಗಾರು, ಬಡಗುತಿಟ್ಟು, ಸ್ತ್ರೀ ವೇಷಧಾರಿ, ಶಿವಮೊಗ್ಗ
– ಮುಗ್ವಾ ಗಣೇಶ್ ನಾಯ್ಕ ಬಡಗುತಿಟ್ಟು-ಸ್ತ್ರೀ ವೇಷಧಾರಿ, ಹೊನ್ನಾವರ
– ಸುರೇಂದ್ರ ಮಲ್ಲಿ ತೆಂಕುತಿಟ್ಟು-ಸ್ತ್ರೀ ವೇಷಧಾರಿ, ಮಂಗಳೂರು
– ಅಂಡಾಲ ದೇವಿಪ್ರಸಾದ ಶೆಟ್ಟಿ ಯಕ್ಷಗಾನ ಪ್ರಸಂಗಕರ್ತ ಮತ್ತು ಭಾಗವತ ಮಂಗಳೂರು
– ಕೃಷ್ಣಪ್ಪ ಮೂಡಲಪಾಯ ಯಕ್ಷಗಾನ, ಬೆಂಗಳೂರು ಗ್ರಾಮಾಂತರ
– ಹಳುವಳ್ಳಿ ಜ್ಯೋತಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಯಕ್ಷಗಾನ ಚಿಕ್ಕಮಗಳೂರು

ದತ್ತಿ ನಿಧಿ ಪ್ರಶಸ್ತಿ:
2024ನೇ ಸಾಲಿನ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿಗೆ ಕರ್ಗಲ್ಲು ವಿಶ್ವೇಶ್ವರ ಭಟ್ಟ ತೆಂಕುತಿಟ್ಟು ಯಕ್ಷಗಾನ, ಬಂಟ್ವಾಳ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಫೆ.16ರಂದು ಉಡುಪಿಯ ಕಲಾರಂಗದ ಸಭಾಂಗಣದಲ್ಲಿ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next