ದಾವಣಗೆರೆ: ಇಡೀ ವಿಶ್ವದ ಕಾರ್ಮಿಕರೆಲ್ಲಾ ಒಂದಾಗಿ ತತ್ವ, ಸಿದ್ಧಾಂತ, ಬದ್ಧತೆ ಹೋರಾಟದ ಮೂಲಕ ಶೋಷಣೆ ಮುಕ್ತ ಸಮಾಜವಾದಿ ಸಮಾಜ ನಿರ್ಮಾಣ ಮಾಡಬೇಕು ಎಂಬ ಕರೆ ಕೊಟ್ಟಿರುವ ಕಾರ್ಲ್ ಮಾರ್ಕ್ಸ್ ಜಗತ್ತಿನ ಮಹಾನ್ ನಾಯಕ ಎಂದು ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ ಬಣ್ಣಿಸಿದ್ದಾರೆ.
ಅಶೋಕ ರಸ್ತೆಯ ಪಂಪಾಪತಿ ಭವನದಲ್ಲಿ ಶುಕ್ರವಾರ ಕಾರ್ಲ್ ಮಾರ್ಕ್ಸ್ ಜನ್ಮ ದಿನದ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1815 ರ ಮೇ. 5 ರಂದು ಮೌಡ್ಯತೆ, ಕಂದಾಚಾರದ ಯಹೂದಿ ಮನೆತನದಲ್ಲಿ ಜನಿಸಿದರೂ ತಮ್ಮ ಸಮಾಜವಾದಿ ಚಿಂತನೆ, ಕಾರ್ಮಿಕರ ಪರ ಧ್ವನಿ ಎತ್ತುವ ಮೂಲಕ ಇಡೀ ಶ್ರಮಿಕ ವರ್ಗದ ನಾಯಕರಾಗಿ ಹೊರ ಹೊಮ್ಮಿದವರು ಎಂದರು.
ಕಾರ್ಲ್ ಮಾರ್ಕ್ಸ್ ತಮ್ಮ ಕೊನೆಯ ಉಸಿರನವರೆಗೆ ಶೋಷಣೆ, ದಬ್ಟಾಳಿಕೆ, ದೌರ್ಜನ್ಯ, ಕಾರ್ಮಿಕರು, ಶ್ರಮಿಕ ವಿರೋಧಿ ನೀತಿ ವಿರುದ್ಧ ಹೋರಾಡಿದ ಮಹಾನ್ ನಾಯಕ. ಜೀವಿತಾವಧಿಯಲ್ಲಿ ವಿಶ್ವದ ಕಾರ್ಮಿಕರೇ ಒಂದಾಗಿ… ಎಂಬ ಸಂದೇಶವನ್ನೇ ಸಾರಿದರು. ಅವರ ಮರಣದ ನಂತರ ಲಂಡನ್ ನಲ್ಲಿ ಸಮಾಧಿಯ ಮೇಲೆಯೂ ಅದೇ ವಾಕ್ಯ ಬರೆಯಲಾಗಿದೆ.
ತತ್ವ, ಸಿದ್ಧಾಂತದ ಹೋರಾಟದ ಮೂಲಕ ಸಮ ಸಮಾಜವನ್ನ ಕಟ್ಟಬಹುದು ಎಂಬುದನ್ನ ತೋರಿಸಿಕೊಟ್ಟಿರುವ ಕಾರ್ಲ್ ಮಾರ್ಕ್ಸ್ ವಿಶ್ವದ ಅತ್ಯದ್ಬುತ ಕ್ರಾಂತಿ ಪುರುಷ ಎಂದು ತಿಳಿಸಿದರು. ಕಾರ್ಮಿಕರು, ಶ್ರಮಿಕರ ಶೋಷಣೆ ವಿರುದ್ಧ ಸದಾ ಧ್ವನಿ ಎತ್ತಿದ್ದ ಕಾರ್ಲ್ ಮಾರ್ಕ್ಸ್ ಬರೆದಿರುವ ದಾಸ್ ಕ್ಯಾಪಿಟಲ್… ಪುಸ್ತಕ ಜಗತ್ತಿನಲ್ಲಿ ಅತಿ ಹೆಚ್ಚು ಅಂದರೆ 100 ಕೋಟಿ ಪ್ರತಿ ಮಾರಾಟವಾಗಿವೆ ಎಂಬುದನ್ನ ವಿಶ್ವಸಂಸ್ಥೆಯೇ ಪ್ರಕಟಿಸಿದೆ.
ದಾಸ್ ಕ್ಯಾಪಿಟಲ್ ಪುಸ್ತಕ ಜನಸಾಮಾನ್ಯರು ಸಹ ತತ್ವ, ಸಿದ್ಧಾಂತ, ಬದ್ಧತೆಯಿಂದ ಹೇಗೆ ಬೆಳೆಯಬಹುದು ಎಂಬುದಕ್ಕೆ ಒಂದು ಪ್ರಣಾಳಿಕೆ ಇದ್ದಂತೆ ಎಂದು ತಿಳಿಸಿದರು. ಕಾರ್ಲ್ ಮಾರ್ಕ್ಸ್ ವಿಶ್ವದ ಅತ್ಯದ್ಬುತ ಕ್ರಾಂತಿ ಪುರುಷರಾಗಿ ಹೊರ ಹೊಮ್ಮಲು, ದಾಸ್ ಕ್ಯಾಪಿಟಲ್ ನಂತಹ ಪುಸ್ತಕ ಪ್ರಕಟಣೆಗೊಳ್ಳಲು ಅವರ ಪತ್ನಿ ಜಿಮ್ಮಿ ಹಾಗೂ ಜೀವದ ಗೆಳೆಯ ಫೆಡ್ರಿಕ್ ಹೆಂಗಿಸ್ ನೀಡಿದ ಸಹಕಾರ ಅಪಾರ.
ದಾಸ್ ಕ್ಯಾಪಿಟಲ್, ಬಸವಣ್ಣನವರ ವಚನಗಳು, ಟಾಲ್‌ಸ್ಟಾಯ್ ಮುಂತಾದ ಮಹಾನೀಯರ ಪುಸ್ತಕ ಓದುವ ಮೂಲಕ ನಮ್ಮನ್ನ ನಾವು ಸಮ ಸಮಾಜದ ಹೋರಾಟದತ್ತ ಸಜ್ಜುಗೊಳಿಸಿ ಕೊಳ್ಳಬೇಕು ಎಂದು ತಿಳಿಸಿದರು. 1883 ರ ಮಾ. 14ರಂದು ವಿಧಿವಶರಾದ ಕಾಲ್ ìಮಾರ್ಕ್ಸ್ರವರ ತತ್ವ, ಚಿಂತನೆಯ ಹೋರಾಟ ಭಾರತದಲ್ಲೂ ನಡೆಯುತ್ತಿದೆ. ಆಂಧ್ರಪ್ರದೇಶದಲ್ಲಿ ಭೂಮಿಯ ಹಕ್ಕಿಗಾಗಿ ನಡೆದ ಹೋರಾಟದಲ್ಲಿ ನೂರಾರು ಜನರು ಪ್ರಾಣಾರ್ಪಣೆ ಮಾಡಿದರು.
ಕಾರ್ಲ್ಧಿಮಾರ್ಕ್ಸ್ರವರ ತತ್ವ, ಚಿಂತನೆಯ ಹೋರಾಟ ಮುಂದುವರೆಸಿ, ಸಮ ಸಮಾಜ ನಿರ್ಮಾಣಕ್ಕೆ ಅವರ ಜನ್ಮದಿನ ಪ್ರೇರಣೆ, ಸ್ಫೂರ್ತಿದಾಯಕವಾಗಲಿ ಎಂದು ಆಶಿಸಿದರು. ಮುಖಂಡ ಆನಂದರಾಜ್ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯ ಆವರಗೆರೆ ಎಚ್.ಜಿ. ಉಮೇಶ್, ಆವರಗೆರೆ ಚಂದ್ರು, ಆವರಗೆರೆ ವಾಸು ಇದ್ದರು. ಐರಣಿ ಚಂದ್ರು, ಸಂಗಡಿಗರು ಕ್ರಾಂತಿಗೀತೆ ಹಾಡಿದರು.