Advertisement
ಶನಿವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಯುಡೈ ಒಕಿ ಮೊಟೋ ಅವರನ್ನು 21-16, 21-17ರಿಂದ ಮಣಿಸಿ ಮುನ್ನಡೆ ಸಾಧಿಸಿದ್ದರು. ರವಿವಾರ ನಡೆದ ನಾಲ್ವರ ಘಟ್ಟದ ಸೆಮಿಫೈನಲ್‌ನಲ್ಲಿ ಇಂಡೋನೇಶ್ಯಾದ ಆಲ್ವಿ ಫಹಾನ್ ಅವರಿಗೆ ಮೊದಲ ಸುತ್ತಿನಲ್ಲಿ ಪ್ರಬಲ ಪೈಪೋಟಿ ನೀಡಿದರಾದರೂ ಅಂತಿಮವಾಗಿ 21-18, 21-14ರಿಂದ ಸೋಲು ಅನುಭವಿಸಿದರು. ಈ ಮೂಲಕ ಅವರು ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಆಯುಷ್ ಅವರು ಕಾರ್ಕಳ ಸಾಣೂರಿನ ಕೃಷಿಕ ಪೋಷಕ ರಾಮ್‌ಪ್ರಕಾಶ್, ಶಾಲ್ಮಲಿ ದಂಪತಿಯ ಪುತ್ರ. ಹಳ್ಳಿಯ ಮನೆಯಂಗಳದಲ್ಲಿ ಹವ್ಯಾಸಿಯಾಗಿ ಆಟವಾಡುತ್ತ ಬ್ಯಾಡ್ಮಿಂಟನ್‌ನಲ್ಲಿ ತೊಡಗಿಸಿಕೊಂಡು ಬೆಳೆದ ಬಾಲಕ ಇಂದು ಬಿಡಬ್ಲ್ಯೂ ಎಫ್ ಜೂನಿಯರ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದಲ್ಲದೆ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗಳಿಸಿ ಸಾಧನೆ ತೋರಿದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರು 3ನೇ ತರಗತಿಯಿಂದ ತರಬೇತಿ ಪಡೆದಿದ್ದರು.
Related Articles
Advertisement
ಬಿಡಬ್ಲ್ಯೂ ಎಫ್ ಟೂರ್ನ್ಮೆಂಟ್ ನಾಯಕನಾಗಿ ಆಯ್ಕೆಯಾದ ಸಂದರ್ಭ ಉದಯವಾಣಿ ಜತೆ ಮಾತನಾಡಿದ್ದ ಆಯುಷ್ ಮಹತ್ತರ ಸಾಧನೆಯ ವಿಶ್ವಾಸ ವ್ಯಕ್ತಪಡಿಸಿದ್ದರು. ಚಿನ್ನ, ಬೆಳ್ಳಿ ಪದಕ ಗಳಿಸಲಾಗದಿದ್ದರೂ ಕಂಚು ಪಡೆಯುವ ಮೂಲಕ ದೇಶದ ಮಾನ ಉಳಿಸಿದ್ದಾರೆ. ಮುಂದೆ ಅವಕಾಶವಿದ್ದು ಇನ್ನಷ್ಟು ಸಾಧನೆಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾರ್ಕಳದ ಸಾಧಕರ ಪಟ್ಟಿಗೆ ಸೇರ್ಪಡೆಕಾರ್ಕಳ ತಾಲೂಕಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಮತಾ ಪೂಜಾರಿ, ಅಕ್ಷತಾ ಬೋಳ, ಅಕ್ಷತಾ ಕೆರ್ವಾಶೆ ಸಹಿತ ಅನೇಕ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಸಾಧನೆ ತೋರಿದ ಕ್ರೀಡಾಪಟುಗಳಿದ್ದು ಇದೀಗ ಮತ್ತೋರ್ವ ಪ್ರತಿಭೆ 18ರ ವಯಸ್ಸಿನ ಆಯುಷ್ ಆಯುಷ್ ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ತೋರಿದ್ದಾರೆ. -ಬಾಲಕೃಷ್ಣ ಭೀಮಗುಳಿ