Advertisement

ಕಾರ್ಕಳ ಉತ್ಸವ ಸಮಾರೋಪ: ಸ್ವರ್ಣ ಕಾರ್ಕಳ ನಿರ್ಮಾಣ ಗುರಿ: ಸುನಿಲ್‌

12:46 AM Mar 21, 2022 | Team Udayavani |

ಕಾರ್ಕಳ: ಸಮನ್ವಯ, ಬಾಂಧವ್ಯ, ಅಭಿಮಾನದ ಮೂಲಕ ಎಲ್ಲರನ್ನು ಒಗ್ಗೂಡಿಸುವುದೇ ಕಾರ್ಕಳ ಉತ್ಸವದ ಆಶಯವಾಗಿತ್ತು. ಸಂಘಟಿತ ಪ್ರಯತ್ನದಿಂದ ಅದಾಗಿದೆ. ಇದೇ ಉತ್ಸಾಹದೊಂದಿಗೆ ಸ್ವರ್ಣ ಕಾರ್ಕಳ ನಿರ್ಮಾಣ ಗುರಿ ಹೊಂದಲಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಸ್ವರಾಜ್‌ ಮೈದಾನದಲ್ಲಿ ರವಿವಾರ ಸಂಜೆ ನಡೆದ ಕಾರ್ಕಳ ಉತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಉತ್ಸವ ಯಶಸ್ಸಿಗೆ ದುಡಿದ ಇಲಾಖೆಗಳ ಅಧಿಕಾರಿಗಳು, ಸ್ವಯಂ ಸೇವಕರನ್ನು ಅಭಿನಂದಿಸಿ ಅವರು ಮಾತನಾಡಿದರು.

ಉತ್ಸವ ಯಶಸ್ಸಿನ ಹಿಂದೆ ಇಲಾಖೆಗಳ ಅಧಿಕಾರಿಗಳು, 37 ಸಮಿತಿಗಳು ಸ್ವಯಂ ಸೇವಕರು. ಇದಕ್ಕೆಲ್ಲ ಮಕುಟ ಪ್ರಾಯವೆಂಬಂತೆ ಸ್ವತ್ಛತೆಯ ವಿಭಾಗ ದವರು ಎಲ್ಲರೂ ಸೇರಿ ಹಗಲು ರಾತ್ರಿ ಪಟ್ಟ ಪರಿಶ್ರಮದ ಪರಿಣಾಮವಾಗಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಅತ್ಯಂತಚೆನ್ನಾಗಿ ಕಾರ್ಕಳ ಉತ್ಸವ ಯಶಸ್ಸು ಕಂಡಿದೆ. ತಾಲೂಕಿನ ಎಲ್ಲ ಮನೆಯ ವರು ಉತ್ಸವದಲ್ಲಿ ಪಾಲ್ಗೊಂಡ ಬಗ್ಗೆ ಅಭಿಮಾನವಿದೆ ಎಂದರು.

ನಳಿನ್‌ ಶ್ಲಾಘನೆ
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಕಾರ್ಕಳ ಸಹಿತ ನಾಡಿನ ಜನತೆ ಶಾಶ್ವತವಾಗಿ ನೆನಪಿಡುವಂತೆ ಕಾರ್ಕಳ ಉತ್ಸವ ನಡೆದಿದೆ. ಕನ್ನಡ, ಸಂಸ್ಕೃತಿ ಸಚಿವರಾಗಿ ಇದುವರೆಗೆ ಯಾರೂ ಮಾಡದ ಕಾರ್ಯವನ್ನು ಸುನಿಲ್‌ ಮಾಡಿದ್ದು, ಇಲಾಖೆಯ ಮಹತ್ವ ಹೆಚ್ಚಾಗಿದೆ ಎಂದು ಶ್ಲಾಘಿಸಿದರು.

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ, ಮೂಡುಬಿದಿರೆ ಆಳ್ವಾಸ್‌ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ| ಮೋಹನ ಆಳ್ವ, ಜಿಲ್ಲಾಧಿಕಾರಿ ಕೂರ್ಮಾ ರಾವ್‌, ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ವೇದಿಕೆಯಲ್ಲಿದ್ದರು.

Advertisement

ಸಮ್ಮಾನ
ಬಾಲಪ್ರತಿಭೆ, ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಸೌಮ್ಯಾ ಪ್ರಭು, ಕಬಡ್ಡಿ ಆಟಗಾರ್ತಿ ಮಮತಾ ಪೂಜಾರಿ, ಕಲಾವಿದೆ ವಂದನಾ ರೈ ಸಹಿತ ಹಲವರನ್ನು ಸಮ್ಮಾನಿಸಲಾಯಿತು.
ಪ್ರವೀಣ್‌ ಸಾಲ್ಯಾನ್‌ ಸ್ವಾಗತಿಸಿ, ಸಂಗಿತಾ ಕುಲಾಲ್‌ ನಿರೂಪಿಸಿದರು. ಶಿಕ್ಷಕ ವಸಂತ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಸುಡುಮದ್ದು ಪ್ರದರ್ಶನ ನಡೆದು ಮೈದಾನವನ್ನು ನೂರಾರು ಸ್ವಯಂ ಸೇವಕರು ಏಕಕಾಲದಲ್ಲಿಸ್ವಚ್ಛಗೊಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next