Advertisement
ಶಿಲ್ಪಕಲೆ, ಸಂಸ್ಕೃತಿ, ಪ್ರವಾಸೋದ್ಯಮ ಕ್ಷೇತ್ರಗಳ ತವರು ನೆಲದಲ್ಲಿ ಭಾಷೆ, ಕಲೆ, ಸಂಸ್ಕೃತಿಗಳ ಕಲರವದ ಕಾರ್ಕಳ ಉತ್ಸವ ಮಾ.10ರಂದು ಚಾಲನೆಗೊಂಡು 10 ದಿನಗಳ ಕಾಲ ನಡೆಯಲಿದೆ.
Related Articles
Advertisement
ಇದನ್ನೂ ಓದಿ : ಹಲಗೆ ಅಳವಡಿಕೆ ವಿಳಂಬ : ಚೇರ್ಕಾಡಿ, ಬೆಳ್ಳಂಪಳ್ಳಿ ಪರಿಸರದಲ್ಲಿ ನೀರಿನ ಕೊರತೆ
ಎಲ್ಲ ಮರೆತು ಒಂದಾದರು…ತಾ| ಜನ ಸಮುದಾಯ ಎಲ್ಲವನ್ನು ಮರೆತು ಉತ್ಸವದಲ್ಲಿ ಒಂದುಗೂಡಿದ್ದಾರೆ. ರಾಜಕೀಯ ಎಲ್ಲೆ ಮೀರಿ ಉತ್ಸವ ಯಶಸ್ವಿಗೆ ಎಲ್ಲರೂ ಜೈ ಜೋಡಿಸಿದ್ದಾರೆ. 6 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವೀರಪ್ಪ ಮೊಲಿ ಅವರು ಉತ್ಸವಕ್ಕೆ ಶುಭಕೋರಿ ಈಗಾಗಲೇ ಸಂದೇಶ ಕಳುಹಿಸಿದ್ದಾರೆ. ಉತ್ಸವದಲ್ಲಿ ಭಾಗವಹಿಸುವ ಬಗ್ಗೆಯೂ ಹೇಳಿದ್ದಾರೆ. ಶಾಸಕ ದಿ| ಗೋಪಾಲ ಭಂಡಾರಿ ಅವರ ಹೆಸರನ್ನು ವೇದಿಕೆಗೆ ನಾಮಕ ಮಾಡಲಾಗಿದೆ. ತಾಲೂಕಿನ ಮಹಾತ್ಮರನ್ನು ನೆನಪಿಸುವ ಕಾರ್ಯ ಹಲವು ರೂಪದಲ್ಲಿ ನಡೆದಿದೆ. ಮಸೀದಿ, ಮಂದಿರಗಳು ಅಲಂಕೃತಗೊಂಡಿವೆ.
ಕಾರ್ಕಳ ಉತ್ಸವವು ಗಾಂಧಿ ಮೈದಾನದಲ್ಲಿ ಮಾ.10ರಂದು ಸಂಜೆ 5ಕ್ಕೆ ಉದ್ಘಾಟನೆಗೊಂಡು ಉತ್ಸವಕ್ಕೆ ಚಾಲನೆ ಸಿಗಲಿದೆ. ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಯಕ್ಷರಂಗಾಯಣ ಕೇಂದ್ರದಿಂದ ದೂತವಾಕ್ಯ ನಾಟಕ ಪ್ರದರ್ಶನ, ದೃಶ್ಯಕಲಾ ಕಾರ್ಯಕ್ರಮಗಳು ನಡೆಯಲಿವೆ. ಮುಂದಿನ 10 ದಿನಗಳ ಕಾಲವೂ ನಿರಂತರ ಸಾಂಸ್ಕೃತಿಕ ವೈವಿಧ್ಯಗಳು ಗಾಂಧಿ ಮೈದಾನ, ಸ್ವರಾಜ್ ಮೈದಾನಗಳಲ್ಲಿ ನಡೆಯಲಿದೆ. ಮಾ.18ಕ್ಕೆ ಉತ್ಸವ ಮೆರವಣಿಗೆ ನಡೆಯಲಿದೆ. ತಾ.ಪಂ. ಸಭಾಭವನದಲ್ಲಿ ಸಚಿವ ವಿ. ಸುನಿಲ್ ಕುಮಾರ್ ಉಪಸ್ಥಿತಿಯಲ್ಲಿ ತಾಲೂಕಿನ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲರ ಸಭೆ ನಡೆಯಿತು. ಸಚಿವರು ಕಾರ್ಕಳ ಉತ್ಸವ ಮೆರವಣಿಗೆ ಕುರಿತು ಮಾರ್ಗದರ್ಶನ ನೀಡಿದರು. ಮೂಡುಬಿದಿದ್ರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಮೋಹನ್ ಆಳ್ವ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಈ ಸಭೆಯಲ್ಲಿ ತಹಶೀಲ್ದಾರ್ ಪ್ರದೀಪ ಕುಡೇìಕರ್, ಇ.ಒ. ಗುರುದತ್ ಎಂ.ಎನ್., ಬಿ.ಇ.ಒ. ವೆಂಕಟೇಶ್, ಪದವಿ ಮತ್ತು ಪದವಿ ಪೂರ್ವ ಕಾಲೇಜಿನ 25 ಪ್ರಾಂಶುಪಾಲರು ಉಪಸ್ಥಿತರಿದ್ದರು. ಸಚಿವರ ಮ್ಯಾರಥಾನ್ ಸಭೆ
ಉತ್ಸವಕ್ಕೆ ಕ್ಷಣಗಣನೆ ಇರುವಾಗಲೇ ಕಳೆದೆರಡು ದಿನ ಗಳಿಂದ ಸಚಿವರು ವಿವಿಧ ಸಮಿತಿಗಳ ಜತೆ ನಿರಂತರ ಸಭೆ ನಡೆಸುತ್ತಿದ್ದಾರೆ. ಮಾ.9ರಂದು ಬೆಳಗ್ಗೆ ಯುವಕರ ಜತೆ, ಹೆಬ್ರಿ ಸ್ವತ್ಛತೆ ಕಾರ್ಯಕ್ರಮ, ತಾ.ಪಂ. ಸಭಾಂಗಣದಲ್ಲಿ ಪ್ರಾಂಶುಪಾಲರ ಜತೆ, ಶ್ರೀ ಕ್ಷೇ.ಧ. ಯೋಜನೆಯ ಪ್ರಮುಖರ ಜತೆ, ಕಾರ್ಕಳ ಉತ್ಸವ ಮೆರವಣಿಗೆ ಸಮಿತಿ ಜತೆ ಪೂರ್ವಭಾವಿ ಸಭೆ ನಡೆಸಿದರು. ಸಂಜೆ ಗಾಂಧಿ ಮೈದಾನದಲ್ಲಿ ಕಾರ್ಕಳ ಉತ್ಸವದ ಎಲ್ಲ ಸಮಿತಿ, ಪ್ರಬಂಧಕರ ಜತೆ ಸಭೆ ನಡೆಸಿದರು. ಕಳೆದೊಂದು ವಾರದಲ್ಲಿ ಹಗಲು ರಾತ್ರಿ ಸಚಿವರು 60ಕ್ಕೂ ಅಧಿಕ ಸಭೆ ಉತ್ಸವಕ್ಕೆ ಸಂಬಂಧಿಸಿಯೇ ನಡೆಸಿದ್ದಾರೆ. ಯಕ್ಷರಂಗಾಯಣಕ್ಕೆ ಇಂದು ಭೂಮಿ ಪೂಜೆ
ಬೆಳಗ್ಗೆ 8ಕ್ಕೆ ಕೋಟಿ ಚೆನ್ನಯ ಥೀಂ ಪಾರ್ಕ್ ಬಳಿ ನಿರ್ಮಾಣವಾಗುವ ರಂಗಭೂಮಿಕೆಗೆ ಪ್ರೋತ್ಸಾಹ ನೀಡುವ ಯಕ್ಷರಂಗಾಯಣ ಕಲಾ ಕೇಂದ್ರಕ್ಕೆ ಭೂಮಿ ಪೂಜೆ ನೆರವೇರಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 10 ಕೋ.ರೂ. ವೆಚ್ಚದಲ್ಲಿ ರಂಗಾಯಣ ಕೇಂದ್ರ ಸುಸಜ್ಜಿತವಾಗಿ ನಿರ್ಮಾಣವಾಗುತ್ತಿದೆ.