Advertisement
ಜಿ-ಪ್ಲಸ್ ಮಾದರಿ ಮನೆಗಳ ಸಮುಚ್ಚಯ ನಿರ್ಮಾಣಕ್ಕೆ ಕಾರ್ಕಳ ಪುರಸಭೆ ವ್ಯಾಪ್ತಿಯ ಪತ್ತೂಂಜಿಕಟ್ಟೆಯಲ್ಲಿ ಚಾಲನೆಯೂ ಸಿಕ್ಕಿತ್ತು. ಆದರೆ, ಯೋಜನೆಗೆ ಮುಂಗಡ ಹಣ ಪಾವತಿಸುವ ಫಲಾನುಭವಿಗಳ ಕೊರತೆಯಿಂದ ಸರಕಾರ ಮಹತ್ವಾಕಾಂಕ್ಷಿ ಯೋಜನೆ ಕುಂಟುತ್ತಿದೆ.
ಬ್ಲಾಕ್ ಅಳವಡಿಕೆಯಂತಹ ಪ್ರಾಥಮಿಕ ಹಂತದ ಕೆಲಸಗಳು ನಡೆದಿವೆ. ಆದರೆ ಕಾಮಗಾರಿ ಮುಂದುವರಿಯಬೇಕು ಎಂದಿದ್ದರೆ ಎಲ್ಲ 250 ಮನೆಗಳಿಗೆ ಫಲಾನುಭ ವಿಗಳನ್ನು ಗೊತ್ತುಪಡಿಸಬೇಕು ಮತ್ತು ಫಲಾ ನುಭವಿಗಳು ಒಟ್ಟು ವೆಚ್ಚದ ಶೇ. 10/15ನ್ನು ಮುಂಗಡವಾಗಿ ಪಾವತಿಸಬೇಕು. ಆದರೆ, ಮನೆ ಬೇಕು ಎಂಬ ಆಸೆ ಇರುವ ಫಲಾನುಭವಿಗಳು ಶೇ. 10ರಷ್ಟು ಮುಂಗಡ ಪಾವತಿ ಮಾಡುವ ಸ್ಥಿತಿ ಯಲ್ಲಿ ಇಲ್ಲ. ಹೀಗಾಗಿ ಬೇಡಿಕೆಯೇ ಇಲ್ಲವಾಗಿದೆ.
Related Articles
ಬಂಗ್ಲೆಗುಡ್ಡೆ ನರ್ಸಿಂಗ್ ಹೋಂ ಹಿಂಭಾಗ, ಬಂಗ್ಲೆಗುಡ್ಡೆ, ಐತಕಟ್ಟೆ, ಬಂಡಿಮಠ, ರಣವೀರ ಕಾಲನಿ, ಮರಿಣಾಪುರ, ಬೊಬ್ಬಳ ಕಾಲನಿ, ದಾನಶಾಲೆ, ಹವಾಲ್ದಾರಬೆಟ್ಟು ಸೇರಿ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ 9 ಕಡೆ ಕೊಳಗೇರಿಗಳಿವೆ. ಪುರಸಭೆ ವತಿ ಯಿಂದ 2009-10ರಲ್ಲಿ ಮನೆ ಮನೆ ಸಮೀಕ್ಷೆ ನಡೆಸಿ 229 ಕುಟುಂಬ ಗಳನ್ನು ಗುರುತಿಸಲಾಗಿತ್ತು. ಪತ್ತೂಂಜಿ ಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಛಯದಲ್ಲಿ ಮನೆಗಾಗಿ 350ಕ್ಕೂ ಅಧಿಕ ಅರ್ಜಿಗಳು ಪುರಸಭೆಗೆ ಬಂದು 250 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಆದರೆ ಮುಂಗಡ ಪಾವತಿಯಾಗದೆ ಸಮಸ್ಯೆಯಾಗಿದೆ.
Advertisement
ಫಲಾನುಭವಿ ಸಿಗದಿರಲು ಕಾರಣವೇನು?ಮನೆ ಬಯಸುವ ಪರಿಶಿಷ್ಟ ಜಾತಿ/ಪಂಗಡದವರು ಶೇ.10 (65 ಸಾವಿರ ರೂ.) ಮೊತ್ತವನ್ನು ಮುಂಗಡವಾಗಿ ಪಾವತಿಸಬೇಕು. ಸಾಮಾನ್ಯ ವರ್ಗದವರಾಗಿದ್ದರೆ ಶೇ. 15 (96 ಸಾವಿರ) ಮೊತ್ತವನ್ನು ಮುಂಗಡ ಪಾವತಿಸಬೇಕು. ಆದರೆ ಇಲ್ಲಿ ಎರಡೂ ವರ್ಗದವರು ನಾನಾ ಕಾರಣಗ ಳಿಂದ ಮುಂಗಡ ಪಾವತಿಗೆ ಮುಂದೆ ಬರುತ್ತಿಲ್ಲ. ಪಟ್ಟಿ ಮಾಡಲಾದ 250 ಫಲಾನುಭವಿಗಳ ಪೈಕಿ 90 ಮಂದಿಯಷ್ಟೇ ಮುಂಗಡ ಪಾವತಿಗೆ ಮುಂದಾಗಿದ್ದಾರೆ. ಫಲಾನುಭವಿ ಸಿಗದೆ ಸಮುಚ್ಛ ಯ ನಿರ್ಮಾಣಕ್ಕೆ ಸರಕಾರದಿಂದ ಹಣ ಬಿಡುಗಡೆಗೆ ತಾಂತ್ರಿಕ ತೊಂದರೆ ಎದುರಾಗಿದೆ. ಮನೆ ಎಷ್ಟು ದೊಡ್ಡದು? ದರ ಎಷ್ಟು?
* ಪ್ರಧಾನಮಂತ್ರಿ ಆವಾಸ್ ಯೋಜನೆಯ ಈ ಮನೆಯ ಸುತ್ತಳತೆ 358 ಚದರಡಿ. ಒಂದು ಮನೆ ನಿರ್ಮಾಣಕ್ಕೆ 6,44,378 ರೂ. ವೆಚ್ಚ ತಗಲಲಿದೆ.
*6.44 ಲಕ್ಷ ರೂ. ಮೊತ್ತದಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಜನಾಂಗದವರಿಗೆ ಕೇಂದ್ರ ಸರಕಾರದಿಂದ 1.5 ಲಕ್ಷ ರೂ. ಮತ್ತು ರಾಜ್ಯ ಸರಕಾರದಿಂದ 2 ಲಕ್ಷ ರೂ., ಒಟ್ಟು 3.5 ಲಕ್ಷ ರೂ. ಸಹಾಯಧನ ದೊರಕಲಿದೆ. ಉಳಿದ ಮೊತ್ತವನ್ನು ಅರ್ಹ
ಫಲಾನುಭವಿಗಳು ಭರಿಸಬೇಕು.
*ಕೇಂದ್ರ, ರಾಜ್ಯ ಸರಕಾರಗಳ ಅನುದಾನದ ಬಳಿಕ ಪಾವತಿಸಬೇಕಾಗಿರುವ 2.94 ಲಕ್ಷ ರೂ.ಗೆ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಸಾಲ ಒದಗಿಸಲಾಗುತ್ತದೆ.
*ಬ್ಯಾಂಕ್ ಸಾಲವನ್ನು ಪ್ರತೀ ತಿಂಗಳು ಮರುಪಾವತಿಸಬೇಕು. ಸಾಲ ತೀರುವಳಿಯ ಬಳಿಕ ಮನೆ ವಾರಸುದಾರರ ಹೆಸರಿಗೆ ಬರಲಿದೆ. *ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಕೇಂದ್ರ ಸರಕಾರದಿಂದ 1.50 ಲಕ್ಷ ರೂ. ಮತ್ತು ರಾಜ್ಯದಿಂದ 1.20 ಲಕ್ಷ ರೂ. ಸಹಾಯಧನ ದೊರಕಲಿದೆ. ಉಳಿದ 3.744 ಲಕ್ಷವನ್ನು ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಸಾಲ ರೂಪದಲ್ಲಿ ಪಡೆಯಲು ಅವಕಾಶವಿರುತ್ತದೆ. ಸ್ಲಂ ಬೋರ್ಡ್‌ನಿಂದ ನಿರ್ಮಾಣ
ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡ ನಿವೇಶನ ರಹಿತರಿಗಾಗಿ ನಿರ್ಮಿಸುವ ಸಮುಚ್ಚಯ ಮನೆ ಇದಾಗಿದೆ. ಸ್ಲಂ ಬೋರ್ಡ್ ನಿಂದ ಸಮುಚ್ಚಯ ನಿರ್ಮಾಣವಾದರೂ ಅದಕ್ಕೆ ಬೇಕಿರುವ ಫಲಾನುಭವಿಯನ್ನು ಪುರಸಭೆ ಒದಗಿಸಬೇಕು. ಆದರೆ ಮುಂಗಡ ಪಾವತಿಸಬಲ್ಲ ಫಲಾನುಭವಿ ಸಿಗುತ್ತಿಲ್ಲ ಮುಂಗಡ ಫಲಾನುಭವಿ ಸಿಗುತ್ತಿಲ್ಲ
ಸಮುಚ್ಚಯ ಮನೆ ಹಂಚಿಕೆ ಸಂಬಂಧ ನಿರ್ಮಾಣ ಕಾಮಗಾರಿ ಆಗಬೇಕು. ಅದಕ್ಕೆ ಮುಂಗಡ ಪಾವತಿಸುವ ಫಲಾನುಭವಿಗಳ ಆವಶ್ಯಕತೆಯಿದೆ. ಅದನ್ನು ಭರ್ತಿಗೊಳಿಸಿದಲ್ಲಿ ಕಟ್ಟಡ ನಿರ್ಮಾಣಕ್ಕೆ ಮೊತ್ತ ಬಿಡುಗಡೆಯಾಗಲಿದೆ. ಮುಂಗಡ ಪಾವತಿಸುವ ಫಲಾನುಭವಿ ಸಿಗದೆ ತಾಂತ್ರಿಕ ತೊಂದರೆ ಎದುರಾಗಿದೆ.
*ಮೋಹನ್, ಜೂನಿಯರ್ ಎಂಜಿನಿಯರ್, ಸ್ಲಂ ಬೋರ್ಡ್ ಜಿ-ಪ್ಲಸ್ ಮನೆ ಸಹಕಾರಿ
ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ಬೇಡಿಕೆಯಿದೆ. ಅದನ್ನು ಪೂರೈಸಲು ಜಿ-ಪ್ಲಸ್ ಮನೆ ಯೋಜನೆ ಸಹಕಾರಿಯಾಗಿದೆ. ನಿಗದಿತ
ಶೇಕಡಾವಾರು ಮುಂಗಡ ಮೊತ್ತ ಪಾವತಿಸಿ ಮನೆಯ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
*ರೂಪಾ ಟಿ. ಶೆಟ್ಟಿ, ಮುಖ್ಯಾಧಿಕಾರಿ *ಬಾಲಕೃಷ್ಣ ಭೀಮಗುಳಿ