Advertisement
ಈ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ವಾಹನಗಳಲ್ಲಿ ಓಡಾಟ ಮಾಡುವರಿಗೆ ಡೈವರ್ಶನ್ ಕಿರಿಕಿರಿಯಾದರೆ, ಬಸ್ನಲ್ಲಿ ಓಡಾಡುವ ವಿದ್ಯಾರ್ಥಿಗಳು, ಹಿರಿಯರಿಗೆ, ಮಹಿಳೆಯರಿಗೆ ಬಸ್ ತಂಗುದಾಣ ಇಲ್ಲದಿರುವುದು ದೊಡ್ಡ ಸಮಸ್ಯೆ. ಹಿಂದೆ ಈ ವ್ಯಾಪ್ತಿಯಲ್ಲಿ ಏಳು ತಂಗುದಾಣಗಳಿದ್ದವು. ಈಗ ಒಂದೂ ಇಲ್ಲ!
Related Articles
Advertisement
ಸಾರ್ವಜನಿಕ ಹಿತದೃಷ್ಟಿಯಿಂದ ಹೆದ್ದಾರಿ ಪ್ರಾಧಿಕಾರ ಪರ್ಯಾಯವಾಗಿ ತಾತ್ಕಲಿಕ ಬಸ್ ನಿಲ್ದಾಣ ರೂಪಿಸಲು ಕ್ರಮ ವಹಿಸಬೇಕು ಎಂದು ಸಾಣೂರಿನ ಪ್ರಸಾದ್ ಶೆಟ್ಟಿ ಆಗ್ರಹಿಸಿದ್ದಾರೆ.
ಏಳು ಕಡೆ ಬಸ್ ತಂಗುದಾಣವಿತ್ತುಮುರತ್ತಂಗಡಿ ಇರ್ವತ್ತೂರು ರಸ್ತೆ ತಿರುವಿನ ಬಳಿ ಬಾಲಾಂಜನೇಯ ಯುವಕ ಸಂಘ ಬಸ್ ನಿಲ್ದಾಣ ನಿರ್ಮಿಸಿತ್ತು, ಸಾಣೂರಿನಲ್ಲಿ ಯುವಕರ ಸಂಘದ ವತಿಯಿಂದ ಬಸ್ ನಿಲ್ದಾಣ ರೂಪಿಸಲಾಗಿತ್ತು, ಮುರತ್ತಂಗಡಿ ಹೈಸ್ಕೂಲು ಬಳಿ ಬ್ಯಾಂಕ್ ಆಫ್ ಬರೋಡ ಬಸ್ ನಿಲ್ದಾಣ ಕಟ್ಟಿಸಿತ್ತು. ಎರಡು ಬದಿಗಳಲ್ಲಿ 7ಕ್ಕೂ ಅಧಿಕ ಬಸ್ ನಿಲ್ದಾಣಗಳನ್ನು ಹೆದ್ದಾರಿ ಕಾಮಗಾರಿಗೆ ಪೂರಕವಾಗಿ ಕೆಡವಲಾಗಿದೆ. ಆದರೆ, ಎಲ್ಲಿಯೂ ಹೊಸದಾಗಿ ನಿರ್ಮಿಸಿಲ್ಲ. ಸಾರ್ವಜನಿಕರು ಸಾಕಷ್ಟು ಬಾರಿ ಮನವಿ ಮಾಡಿದರೂ ಸೂಕ್ತ ಸ್ಪಂದನೆ ಇಲ್ಲ. ಬಸ್ ನಿಲ್ದಾಣ ವ್ಯವಸ್ಥೆಯಾಗಲಿ
ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಬಾಲಾಂಜನೇಯ ಯುವಕ ಸಂಘದ ವತಿಯಿಂದ ಬಸ್ ನಿಲ್ದಾಣ ಕಟ್ಟಿದ್ದೆವು. ಹೆದ್ದಾರಿ ಕಾಮಗಾರಿ ವೇಳೆ ತೆರವು ಮಾಡಲಾಯಿತು. ಜನರಿಗೆ ಸಮಸ್ಯೆಯಾಗದಂತೆ ತಾತ್ಕಾಲಿಕ ನೆಲೆಯಲ್ಲಿಯಾದರೂ ಬಸ್ ನಿಲ್ದಾಣ ವ್ಯವಸ್ಥೆ ಮಾಡಿಕೊಡಬೇಕು. ಕಾಮಗಾರಿ ವ್ಯವಸ್ಥಿತವಾಗಿ ಶೀಘ್ರ ಪೂರ್ಣಗೊಳಿಸಿ ಅನಂತರ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಬೇಕು.
-ಮಾಧವ ಭಂಡಾರ್ಕರ್, ಮುರತ್ತಂಗಡಿ